ರಾಯ್ ಕಪೂರ್ ಸೋದರರ ಜೊತೆ ಮೈ ಚಳಿ ಬಿಟ್ಟು ಕುಣಿದು ಕುಪ್ಪಳಿಸಿದ ಬಾಲಿವುಡ್ ನಟಿ

By Mahmad Rafik  |  First Published May 28, 2024, 3:54 PM IST

 Actress Vidya Balan  Video: ಬಾಲಿವುಡ್ ನಟಿ ವಿದ್ಯಾ ಬಾಲನ್ ಕುಟುಂಬಸ್ಥರ ಜೊತೆ ಮದುವೆ ಸಮಾರಂಭದಲ್ಲಿ ಹೆಜ್ಜೆ ಹಾಕಿದ್ದಾರೆ. 


ಮುಂಬೈ: ಬಾಲಿವುಡ್ ಬಿಂದಾಸ್ ಗರ್ಲ್‌ ಅಂತಾನೇ ಫೇಮಸ್ ಆಗಿರುವ ನಟಿ ವಿದ್ಯಾ ಬಾಲನ್  (Actress Vidya Balan) ನಟನೆಗೆ ಮನಸೋಲದವರಿಲ್ಲ. ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಾರೆ. ಇದೀಗ ವಿದ್ಯಾ ಬಾಲನ್ ಪತಿ ಸಿದ್ಧಾರ್ಥ್ ರಾಯ್ ಕಪೂರ್ (Siddharth Roy Kapur) ಹಾಗೂ ಅವರ ಸೋದರರ ಜೊತೆ ಮೈ ಚಳಿ ಬಿಟ್ಟು ಡಾನ್ಸ್ ಮಾಡಿದ್ದಾರೆ. ಈ ಡಾನ್ಸ್ ವಿಡಿಯೋಗೆ ವೈರಲ್ (Vidya Balan Dance video) ಆಗುತ್ತಿದೆ.

ಕುಟುಂಬದ ಮದುವೆ ಸಮಾರಂಭದಲ್ಲಿ ವಿದ್ಯಾ ಬಾಲನ್ ಭಾಗಿಯಾಗಿದ್ದರು. ಈ ವೇಳೆ ಕುಟುಂಬಸ್ಥರ ಜೊತೆ ವಿದ್ಯಾ ಬಾಲನ್ ಫುಲ್ ಮೋಜು ಮಾಡಿದ್ದಾರೆ. ಮದುವೆ ಪಾರ್ಟಿಯಲ್ಲಿ ಆದಿತ್ಯ ರಾಯ್ ಕಪೂರ್, ಸಿದ್ಧಾರ್ಥ ರಾಯ್ ಕಪೂರ್, ಕುನಾಲ್ ರಾಯ್ ಕಪೂರ್ ಹಾಗೂ ವಿದ್ಯಾ ಬಾಲನ್ ರಾಯ್ ಕಪೂರ್ ಜೊತೆಯಾಗಿ ಸೂಪರ್ ಹಿಟ್ ಹಾಡಿಗೆ ಕುಣಿದಿದ್ದಾರೆ. 

Tap to resize

Latest Videos

ಮದುವೆ ಆಗಮಿಸಿದ್ದ ಅತಿಥಿಗಳು ರಾಯ್ ಕಪೂರ್ ಸೋದರರು ಮತ್ತು ವಿದ್ಯಾ ಬಾಲನ್ ಜೊತೆಯಾಗಿ ಜುಮ್ಮಾ, ಚುಮ್ಮಾ ಹಾಡಿಗೆ ಹೆಜ್ಜೆ ಹಾಕಿರುವ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾರೆ.

ಮದುವೆಯಾಗಿ 12 ವರ್ಷ

2010ರಲ್ಲಿ ವಿದ್ಯಾ ಬಾಲನ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಆಯೋಜನೆಯ ಪಾರ್ಟಿಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಈ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ನಂತರ ಕೆಲ ವರ್ಷ ಡೇಟ್ ಮಾಡಿದ ಇಬ್ಬರೂ 2012ರಲ್ಲಿ ಮದುವೆಯಾಗಿದ್ದಾರೆ. 

ಮದುವೆ ಬಳಿಕ ಸೀಸನ್ ಸಂಬಂಧ ಕುರಿತು ಮಾತನಾಡಿದ ವಿದ್ಯಾ ಬಾಲನ್; ಏನಿದರ ಒಳಗುಟ್ಟು?

ಮದುವೆಯಾದ ಬಳಿಕವೂ ಬಣ್ಣದ  ಲೋಕದಲ್ಲಿ ವಿದ್ಯಾ ಬಾಲನ್ ಬೇಡಿಕೆಯ ನಟಿಯಾಗಿದ್ದಾರೆ. ದಿ ಡರ್ಟಿ ಪಿಕ್ಞರ್ ಬಳಿಕ ಮಹಿಳಾ ಪ್ರಧಾನ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ  ವಿದ್ಯಾ ಬಾಲನ್ ಸಿನಿಮಾಗಳು ಯಶಸ್ಸು ಸಹ ಪಡೆದುಕೊಳ್ಳುತ್ತಿವೆ. ಕಹಾನಿ, ಕಹಾನಿ-2, ಶಕುಂತಲಾ ದೇವಿ, ಶೇರ್‌ನಿ, ಬೇಗಂ ಜಾನ್, ತುಮ್ಹಾರಿ ಸುಲು ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳಲ್ಲಿ ವಿದ್ಯಾ ಬಾಲನ್ ನಟಿಸಿದ್ದಾರೆ.

The Roy Kapurs
byu/Rainyday2158 inBollyBlindsNGossip

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ವಿದ್ಯಾ ಬಾಲನ್, ಜೀವನ ಚೆನ್ನಾಗಿ ನಡೆಯುತ್ತಿದೆ. ಪತಿ ಸಿದ್ಧಾರ್ಥ್ ನನಗೆ ಲಕ್ಕಿ ಎಂದು ಹೇಳಿಕೊಂಡಿದ್ದರು. ಮಹಿಳಾ ಪ್ರಧಾನ ಚಿತ್ರಗಳು ನನ್ನನ್ನು ಹೆಚ್ಚು ಸೆಳೆಯುತ್ತವೆ. ಉತ್ತಮ ಕಥೆಯ ಸಿನಿಮಾಗಳನ್ನು ನಾನು ಬಿಟ್ಟು ಕೊಡಲ್ಲ ಎಂದಿದ್ದಾರೆ.

ನಟಿ ವಿದ್ಯಾ ಬಾಲನ್ ಪ್ರಕಾರ ನೀವು ನೋಡಲೇಬೇಕಾದ 5 ಉತ್ತಮ ಚಿತ್ರಗಳಿವು..

ನನ್ನನ್ನು ಐರನ್ ಲೆಗ್ ಅಂದಿದ್ದರು!

ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ವಿದ್ಯಾ ಬಾಲನ್, ಜೀವನ ಚೆನ್ನಾಗಿ ನಡೆಯುತ್ತಿದೆ. ಪತಿ ಸಿದ್ಧಾರ್ಥ್ ನನಗೆ ಲಕ್ಕಿ ಎಂದು ಹೇಳಿಕೊಂಡಿದ್ದರು. ಕೆಲ ನಿರ್ಮಾಪಕರು ಮತ್ತು ನಿರ್ದೇಶಕರು ನನ್ನನ್ನು ಐರನ್ ಲೆಗ್ ಅಂತಾ ಕರೆದಿದ್ದರು. ಕೆಲ ಹೀರೋಗಳು ನನ್ನ ಜೊತೆ ನಟಿಸಲು ನಿರಾಕರಿಸುತ್ತಿದ್ದರು. ಸಿನಿಮಾಗಳಲ್ಲಿ ಹೆಚ್ಚಾಗಿ ತೋರಿಸುವ ಕಾರಣ ನಟರ ನನ್ನೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲ್ಲ. ಇದರಿಂದ ನನಗೇನು ನಷ್ಟ ಇಲ್ಲ ಎಂದು ಹೇಳಿದ್ದರು.

click me!