ಶೆರ್ಲಿನ್ ಚೋಪ್ರಾನ ಮೀರಿಸ್ತಿದ್ದಾಳೆ ಈ ಸಾಕ್ಷಿ ಚೋಪ್ರಾ... ರಾಮಾಯಣದ ನಿರ್ದೇಶಕನ ಮರಿ ಮೊಮ್ಮಗಳದ್ದು ಇದೆಂಥಾ ಅವತಾರ

By Suvarna News  |  First Published Jan 30, 2024, 2:34 PM IST

ರಮಾನಂದ ಸಾಗರ್ ಅವರು ತಮ್ಮ ನಿರ್ದೇಶನದ ರಾಮಾಯಣ ಸೀರಿಯಲ್‌ನಿಂದ ಬಹಳ ಪ್ರಸಿದ್ಧಿ ಪಡೆದ ಹಿಂದಿ ಟಿವಿ ಲೋಕದ ನಿರ್ದೇಶಕರು. ಆದರೆ ಅವರ ಮರಿ ಮೊಮ್ಮಗಳ ಅವತಾರ ಮಾತ್ರ ಈಗ ನೆಟ್ಟಿಗರ ನಿದ್ದೆಗೆಡಿಸುತ್ತಿದೆ.


ರಮಾನಂದ ಸಾಗರ್ ಅವರು ತಮ್ಮ ನಿರ್ದೇಶನದ ರಾಮಾಯಣ ಸೀರಿಯಲ್‌ನಿಂದ ಬಹಳ ಪ್ರಸಿದ್ಧಿ ಪಡೆದ ಹಿಂದಿ ಟಿವಿ ಲೋಕದ ನಿರ್ದೇಶಕರು. ಆದರೆ ಅವರ ಮರಿ ಮೊಮ್ಮಗಳ ಅವತಾರ ಮಾತ್ರ ಈಗ ನೆಟ್ಟಿಗರ ನಿದ್ದೆಗೆಡಿಸುತ್ತಿದೆ. ಹೌದು ರಮಾನಂದ ಸಾಗರ್ ಅವರ ಮರಿ ಮೊಮ್ಮಗಳಾದ ಸಾಕ್ಷಿ ಚೋಪ್ರಾ ಅವರು ತಮ್ಮ ಚೊಚ್ಚಲ ಹಾಡೊಂದಕ್ಕೆ ಅರೆಬರೆಯಾಗಿ ಕಾಣಿಸಿಕೊಂಡಿದ್ದಾರೆ. ರಾಮಾಯಣದದಂತಹ ಮಹಾನ್ ಕಾವ್ಯಕ್ಕೆ ಸೀರಿಯಲ್ ಟಚ್ ನೀಡಿ ಭಾರತದ ಮನೆ ಮನೆಗೆ ತಲುಪುವಂತೆ ಮಾಡಿದ ಮಹಾನ್ ನಿರ್ದೇಶಕರಾದ ರಮಾನಂದ್ ಸಾಗರ್ ಅವರ ಮರಿ ಮೊಮ್ಮಗಳಾಗಿ ಈಕೆಯದ್ದು ಇದ್ಯಾವ ಅವತಾರ ಎಂದು ಜನ ಆಕೆಯನ್ನು ಟ್ರೋಲ್ ಮಾಡ್ತಿದ್ದಾರೆ.  

ಗೋಸ್ಟ್‌ ಹೆಸರಿನ ಹಾಡಿನಲ್ಲಿ ನಟಿಸುವ ಮೂಲಕ ಗ್ಲಾಮರ್ ಲೋಕಕ್ಕೆ ಕಾಲಿರಿಸಿದ್ದಾರೆ ಸಾಕ್ಷಿ ಚೋಪ್ರಾ, ಈ ಹಾಡಿನಲ್ಲಿಆಕೆಯ ಅತೀಯಾದ ಬೋಲ್ಡ್ ಲುಕ್ ಜನರ ತಲೆಕೆಡಿಸಿದೆ. ನಿನ್ನೆ ಪಪಾರಾಜಿ ಸಾಮಾಜಿಕ ಜಾಲತಾಣ ಸೈಟ್‌ಗಳು ಸಾಕ್ಷಿ ಚೋಪ್ರಾ ಅವರ ಚೊಚ್ಚಲ ಹಾಡನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದರಲ್ಲಿ ಸಾಕ್ಷಿ ಚೋಪ್ರಾ, ಬೋಲ್ಡ್‌ ಆಗಿ ಅರೆಬರೆ ದೇಹ ಕಾಣಿಸುವಂತೆ ಧಿರಿಸು ಧರಿಸಿದ್ದಾರೆ. ಭಾರಿ ಮೇಕಪ್ ಜೊತೆಗೆ  ಕೆಂಬಣ್ಣದ ತಮ್ಮ ತಲೆಕೂದಲನ್ನು ಬಿಟ್ಟುಕೊಂಡು ಕಾಡು ಕುದುರೆಯಂತೆ ಕಾಣಿಸುತ್ತಿದ್ದು, ಬಿಂದಾಸ್ ಆಗಿ ಹಾಡಿಗೆ ಹೆಜ್ಜೆ ಹಾಕಿ ಕ್ಯಾಮರಾಗೆ ತಮ್ಮ ದೇಹದ ಉಬ್ಬು ತಗ್ಗುಗಳ ಪ್ರದರ್ಶನ ನೀಡಿದ್ದಾರೆ. ರಮಾನಂದ ಸಾಗರ್ ಅವರಂತಹ ನಿರ್ದೇಶಕರೊಬ್ಬರ ಮೊಮ್ಮಗಳ ಈ ಅವತಾರ ನೋಡಿದ ಜನ ಮಾತ್ರ ಆಕ್ರೋಶದ ಜೊತೆಗೆ ಟೀಕೆಗಳ ಸುರಿಮಳೆಗೈದಿದ್ದಾರೆ. 

Tap to resize

Latest Videos

ಭಗವಾನ್ ರಾಮನ ಸುತ್ತಲೇ ಸುತ್ತುತ್ತೆ ಈ ಮುಸ್ಲಿಂ ಬಹುಸಂಖ್ಯಾತ ಹಳ್ಳಿ

ಭಾರತದಲ್ಲಿ ಶಕೀರಾನ ಕರೆಸಲಾಗದವರು ಈಕೆಯನ್ನು ಕರೆಸಬಹುದು. ಈಕೆ ಕಡಿಮೆ ಬಜೆಟ್‌ನ ಶಕೀರಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ರಮಾನಂದ ಸಾಗರ್ ಅವರು ಇಡೀ ಜಗತ್ತಿಗೆ ರಾಮಾಯಣದ ಸಂಸ್ಕಾರವನ್ನು ಹೇಳಿಕೊಟ್ಟು ಮರಿ ಮೊಮ್ಮಗಳಿಗೆ ಆ ಬಗ್ಗೆ ತಿಳಿಸುವುದಕ್ಕೆ ಮರೆತರು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹೆಸರು ಹಿಂದೂ ಕೆಲಸ ಬ್ರಿಟಿಷರ ರೀತಿ ಎಂದು ಟೀಕಿಸಿದ್ದಾರೆ. 

ಸಾಕ್ಷಿ ಚೋಪ್ರಾ ಸದಾ ತನ್ನ ಅರೆಬೆತ್ತಲೆ ಬೋಲ್ಡ್‌ ಲುಕ್‌ನಿಂದಲೇ ಮಾಧ್ಯಮಗಳ ಗಮನ ಸೆಳೆದಾಕೆ,  2023ರಲ್ಲಿ ಈಕೆ ತಾನು ಶೋವೋಂದರಲ್ಲಿ ನಾನು ಲೈಂಗಿಕ ದೌರ್ಜನ್ಯಕ್ಕೆ ಒಳಗಾದೆ ಎಂದು ಹೇಳಿಕೊಂಡಿದ್ದಳು. ನೆಟ್‌ಫ್ಲಿಕ್ಸ್‌ ಶೋವೊಂದರಲ್ಲಿ ನನಗೆ ಸುಳ್ಳು ಭರವಸೆ ನೀಡಿ ನಂತರ ಲೈಂಗಿಕ ಕಾರ್ಯಗಳನ್ನು ಮಾಡಲು ಒತ್ತಾಯಿಸಿದ್ದರು ಬೋಲ್ಡ್ ಆದ ಧಿರಿಸು ಧರಿಸಲು ಒತ್ತಾಯಿಸಿದ್ದರು ಎಂದು ಸಾಕ್ಷಿ ಚೋಪ್ರಾ ದೂರಿದ್ದರು.  ಆದರೆ ಆಕೆಯ ಇನ್ಸ್ಟಾಗ್ರಾಮ್ ಪೇಜ್ ನೋಡಿದರೆ ಅಲ್ಲಿ ಇರುವುದೆಲ್ಲವೂ ಬೋಲ್ಡ್ ಎನಿಸುವು ಬಹುತೇಕ ಎದೆ ಕಾಣಿಸುವ ಫೋಟೋಗಳೇ ಆಗಿವೆ. 

ರಾಮಾಯಣ; ರಾಮನಿಗೆ ಹೆಸರಿಟ್ಟಿದ್ದು ಯಾರು? ಊರ್ಮಿಳೆ ಏಕೆ 14 ವರ್ಷ ನಿದ್ರಿಸಿದಳು?

ಇನ್ನು ರಮಾನಂದ ಸಾಗರ್ ಅವರ ಬಗ್ಗೆ ಹೇಳುವುದಾದರೆ ರಾಮಾಯಣದಂತಹ ಮಹಾಕಾವ್ಯ ಮೊದಲ ಬಾರಿ ಸೀರಿಯಲ್ ರೂಪದಲ್ಲಿ ಟಿವಿಯಲ್ಲಿ ಬರುವುದಕ್ಕೆ ಕಾರಣರಾದವರು. ಅವರು ದೂರದರ್ಶನದಲ್ಲಿ ಹಿಂದೂ ದೇವರುಗಳ ನೈಜ ಕಥೆಗಳನ್ನು ತರಲು ಆಳವಾಗಿ ಅಧ್ಯಯನ ನಡೆಸುವುದರ ಜೊತೆ ಅದರ ಬಗ್ಗೆ ಅತೀವವಾದ ಒಲವು ತೋರಿದವರು. ಇದರ ಜೊತೆಗೆ ಸಂಸ್ಕೃತ ಮತ್ತು ಪರ್ಷಿಯನ್ ಭಾಷೆಗಳಲ್ಲಿ ಚಿನ್ನದ ಪದಕ ವಿಜೇತರಾಗಿದ್ದರು.  ಇಂತಹವರ ಮೊಮ್ಮಗಳಾಗಿ ಈಕೆಯ ಈ ಅವತಾರ ಜನರ ಇರಿಸು ಮುರಿಸಿಗೆ ಕಾರಣವಾಗಿದೆ. 

ಕರ್ನಾಟಕದಲ್ಲಿ ಸಿಕ್ತು ಶ್ರೀರಾಮನ ಮತ್ತೊಂದು ಕುರುಹು: ತ್ರೇತಾಯುಗದಲ್ಲಿ ರಾಮ ಬಳಸಿದ ಬೃಹತ್ ಬಾಣ ಪತ್ತೆ

 

 

click me!