ಕಾಫಿ ವಿತ್ ಕರಣ್ ಕಾರ್ಯಕ್ರಮ ಈ ಬಾರಿ ಬರೀ ಓಟಿಟಿಯಲ್ಲಿ ಮಾತ್ರ ಪ್ರಸಾರವಾಗ್ತಿದೆ. ಟೆಂಪರೇಚರ್ ಹೆಚ್ಚಿಸುವಂಥಾ ಪ್ರಶ್ನೆಗಳು, ಉತ್ತರಗಳು ಈ ಬಾರಿಯ ಕೆಡಬ್ಲ್ಯೂಕೆಯ ವಿಶೇಷ. ಅದ್ರಲ್ಲೂ ತಾಪ್ಸಿ ಪನ್ನು ಕಾಫಿ ವಿತ್ ಕರಣ್ ಪ್ರೋಗ್ರಾಂಗೆ ಬರಬೇಕಂದ್ರೆ ಅವರ ಸೆಕ್ಸ್ ಲೈಫ್ ಕಲರ್‌ಫುಲ್ ಆಗ್ಬೇಕು ಅಂತ ಕೊಂಕು ತೆಗೆದಿದ್ದಾರೆ. ಅದ್ಯಾಕೆ?
ಕಾಫಿ ವಿತ್ ಕರಣ್ ಸೀಸನ್ ೭ ಈ ಬಾರಿ ಓಟಿಟಿಯಲ್ಲಿ ಮಾತ್ರ ಪ್ರಸಾರವಾಗ್ತಿದೆ. ಕರಣ್ ಜೋಹರ್ ನಡೆಸಿಕೊಡುವ ಈ ಕಾರ್ಯಕ್ರಮ ನೋಡ್ಬೇಕಂದ್ರೆ ನೀವು ಹಾಟ್‌ಸ್ಟಾರ್‌ಗೆ ಹಣ ತೆರಲೇ ಬೇಕು. ಈ ಹಿಂದೆ ಟಿವಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗ್ತಿತ್ತು. ಜನಪ್ರಿಯವೂ ಆಗಿತ್ತು. ಆದರೆ ಯಾಕೋ ಈ ಬಾರಿ ಕರಣ್‌ಗೆ ಟಿವಿಯವರು ಪ್ರೋಗ್ರಾಂ ಮಾಡೋದಕ್ಕೆ ಅವಕಾಶ ಕೊಡಲಿಲ್ಲ. ಅಥವಾ ಚಾನೆಲ್ ಮತ್ತು ಕರಣ್ ನಡುವೆ ಏನೋ ಸಮ್ ಥಿಂಗ್ ಸಮ್ ಥಿಂಗ್ ಸಮಸ್ಯೆ ಆಗಿದೆ. ಹೀಗಾಗಿ ಕರಣ್ ಅನಿವಾರ್ಯವಾಗಿ ಓಟಿಟಿಗೆ ಶರಣಾಗಿದ್ದಾರೆ. ಟಿವಿಯಲ್ಲಿ ಪ್ರೋಗ್ರಾಂಅನ್ನು ಹೆಚ್ಚೆಚ್ಚು ಜನಕ್ಕೆ ತಲುಪಿಸೋದು ಸುಲಭ. ಆದರೆ ಓಟಿಟಿಯಲ್ಲಿ ಒಂದಿಷ್ಟು ಸರ್ಕಸ್ ಮಾಡದಿದ್ದರೆ ಕಾರ್ಯಕ್ರಮ ಜನರನ್ನು ತಲುಪೋದು ಕಷ್ಟ. ಅದಕ್ಕೆ ಕರಣ್ ಈ ಬಾರಿ ಸುಲಭದ ದಾರಿ ಕಂಡುಕೊಂಡಿದ್ದಾರೆ. ಸೆಕ್ಸ್ ಬಗೆಗಿನ ಪ್ರಶ್ನೆಗಳನ್ನು ಕೇಳಿ ಸೆಲೆಬ್ರಿಟಿಗಳಿಂದ ಉತ್ತರ ಪಡೆಯುತ್ತಿದ್ದಾರೆ. ಇದನ್ನು ಸಾಕಷ್ಟು ಜನ ಟೀಕಿಸಿದ್ರೂ ಚಪ್ಪರಿಸಿಕೊಂಡು ನೋಡೇ ನೋಡ್ತಾರೆ. ಹೀಗಾಗಿ ಕಾರ್ಯಕ್ರಮ ಜನಪ್ರಿಯತೆಯ ಟ್ರಾಕ್‌ನಲ್ಲಿ ಸಾಗುತ್ತಿದೆ. ಆದರೆ ಕರಣ್ ಸೆಕ್ಸ್ ಬಗ್ಗೆ ಬೋಲ್ಡ್ ಆಗಿ ಮಾತಾಡೋರನ್ನೇ ಪ್ರೋಗ್ರಾಂಗೆ ಕರೀತಿದ್ದಾರೆ ಅಂತ ಕೆಲವರು ಹೇಳ್ತಿದ್ದಾರೆ. ಅದರಲ್ಲಿ ತಾಪ್ಸಿ ಪನ್ನು ಪ್ರಮುಖರು.
ಹಾಗೆ ನೋಡಿದರೆ ತಾಪ್ಸಿ ಪನ್ನು ಕೈಯಲ್ಲಿ ಈಗ ಹೇಳಿಕೊಳ್ಳುವಂಥಾ ಸಿನಿಮಾಗಳಿಲ್ಲ. ಒಂದು ಕಾಲದಲ್ಲಿ ಈ ಗುಳಿಕೆನ್ನೆ ಚೆಲುವೆ ತಾನು ಪ್ರತಿಭಾವಂತೆ ಅನ್ನೋದನ್ನೂ ಚಿತ್ರಗಳ ಮೂಲಕ ತೋರಿಸಿಕೊಟ್ಟಿದ್ರು. 'ಪಿಂಕ್'ನಂಥಾ ಸಿನಿಮಾಗಳು ಈಕೆಗೆ ಪ್ರಸಿದ್ಧಿಯನ್ನೂ ತಂದುಕೊಟ್ಟವು. ಇದೀಗ ಈ ಮೂವತ್ತೈದರ ಚೆಲುವೆ ಅನುರಾಗ್ ಕಶ್ಯಪ್ ಅವರ 'ದೊಬಾರಾ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನೊಂದು ಹತ್ತು ದಿನದಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಅದಾಗಿ ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ.
ಆಮೀರ್ ಖಾನ್ 'ಲಾಲ್ ಸಿಂಗ್ ಚಡ್ಡಾ'ದಿಂದ ವಿಜಯ್ ಸೇತುಪತಿ ಔಟ್ ಆಗಿದ್ದೇಕೆ? ಕಾರಣ ಬಿಚ್ಚಿಟ್ಟ ನಾಗಚೈತನ್ಯ
ಹಾಗೆ ನೋಡಿದರೆ ಕರಣ್ ಶೋ(Koffee With Karan) ಗೆ ಮೋಸ್ಟ್ ಹ್ಯಾಪನಿಂಗ್ ಸೆಲೆಬ್ರಿಟಿಗಳೇ ಹೆಚ್ಚಾಗಿ ಬರೋದು. ಅವರ ಜೊತೆಗೆ ಸಿನಿಮಾ ಐಕಾನ್‌ಗಳಂತಹ ಹಿರಿಯ ನಟ ನಟಿಯರು ಬರೋದಿದೆ. ಉದಾಹರಣೆಗೆ ಕರೀನಾ ಕಪೂರ್ ಅವರಂಥಾ ನಟಿಯರು ಈ ಪ್ಲಾಟ್‌ಫಾರ್ಮ್ ನಲ್ಲಿ ಸದಾ ಕಾಣಿಸಿಕೊಳ್ತಾರೆ. ಅವರಿಗೆಲ್ಲ ಇದು ಎಷ್ಟು ಮಾಮೂಲಾಗಿ ಬಿಟ್ಟಿದೆ ಅಂದರೆ ಕರಣ್ ಮುಂದಿನ ಪ್ರಶ್ನೆ ಏನು ಕೇಳಬಹುದು ಅನ್ನೋದನ್ನೂ ಅವರು ಗೆಸ್(Guess) ಮಾಡಿ ಬಿಡ್ತಾರೆ. ಸ್ಟಾರ್, ಕಿಡ್, ಜನಪ್ರಿಯತೆಯ ಆಧಾರದಲ್ಲೇ ಈ ಶೋ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗುತ್ತೆ. ಆದರೆ ತಾಪ್ಸಿ ಪನ್ನು ಥರದವರಿಗೆ ಈ ವೇದಿಕೆಯಲ್ಲಿ ಅವಕಾಶ ಸಿಗೋದು ಕಡಿಮೆ.
ವಿಚಿತ್ರ ಡ್ರೆಸ್ ಧರಿಸಿ ಗಮನ ಸೆಳೆಯುತ್ತಿದ್ದ ನಟಿ ಉರ್ಫಿ ಆಸ್ಪತ್ರೆಗೆ ದಾಖಲು
ಅದರಲ್ಲೂ ಈ ಬಾರಿ ಕರಣ್ ಜೋಹರ್ ಶೋದಲ್ಲಿ ಲೈಂಗಿಕತೆಯ ಪ್ರಶ್ನೆಗಳೇ ಹೈಲೈಟ್ ಆಗಿರುತ್ತಿದ್ದವು. ವಿಜಯ ದೇವರಕೊಂಡ ಬಳಿ 'ನೀವು ಲಾಸ್ಟ್ ಸೆಕ್ಸ್ (Sex) ಮಾಡಿದ್ದು ಯಾವಾಗ?' ಅಂತ ಕೇಳಿದ ಪ್ರಶ್ನೆ, ಕರೀನಾ ಕಪೂರ್ ಬಳಿ, 'ಮಕ್ಕಳಾದ ಸೆಕ್ಸ್ ಮಾಡೋದರ' ಬಗ್ಗೆ ಕೇಳಿದ ಪ್ರಶ್ನೆ, ಸಾರಾ ಆಲಿಖಾನ್, ಜಾನ್ವಿ ಕಪೂರ್ ಬಳಿ ಸೆಕ್ಸ್ ಬಗ್ಗೆ ಕೇಳಿದ ಪ್ರಶ್ನೆಗಳು ಈ ಶೋ ಮತ್ತೊಂದು ಲೆವೆಲ್‌ನಲ್ಲಿ ಸೌಂಡ್(Sound) ಮಾಡೋ ಹಾಗೆ ಮಾಡಿದವು. ಜೊತೆಗೆ 'ಇದರಲ್ಲಿ ಬರಿ ಸೆಕ್ಸ್ ಗೆ ಸಂಬಂಧಿಸಿದ ಪ್ರಶ್ನೆಗಳೇ ಕೇಳ್ತಿದ್ದಾರೆ' ಅನ್ನೋ ಮಾತೂ ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಕೇಳಿ ಬಂತು. ಇದರಿಂದ ಪ್ರೇರಿತರಾಗಿಯೋ ಏನೋ ತಾಪ್ಸಿ, 'ಈ ಶೋಗೆ ನನ್ನಂಥವರನ್ನು ಕರಿಯೋದಿಲ್ಲ. ಅವರಿಗೆ ಸೆಕ್ಸ್ ಬಗ್ಗೆ ಕಲರ್ ಫುಲ್ ಆಗಿ ಮಾತಾಡೋದು, ಕಲರ್‌ಫುಲ್ ಸೆಕ್ಸ್ ಲೈಫ್ ಹೊಂದಿದೋರು ಬೇಕು' ಅಂದಿದ್ದಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಶನ್(Social media sensation) ಕ್ರಿಯೇಟ್ ಮಾಡಿದೆ.