ಕರಣ್ ಜೋಹರ್‌-ಮನೀಷ್ ಮಲ್ಹೋತ್ರಾಗೂ ಇದೆಯಾ ಸಂಬಂಧ? ಹೀಗ್ಯಾಕೆ ಹೇಳ್ತಿದ್ದಾರೆ ನೆಟ್ಟಿಗರು!

By Mahmad Rafik  |  First Published May 27, 2024, 12:14 PM IST

Karan Johar-Manish Malhotra Relationship ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮನೀಷ್ ಮಲ್ಹೋತ್ರಾ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಲವ್ ಯು ಮನೀಷ್ ಎಂದು ಕರಣ್ ಜೋಹರ್ ಪ್ರತಿಕ್ರಿಯಿಸಿದ್ದಾರೆ. ಇದೇ ಪೋಸ್ಟ್‌ಗೆ ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡಿದ್ದಾರೆ. 


ಮುಂಬೈ: ಬಾಲಿವುಡ್ (Bollywood) ಖ್ಯಾತ ನಿರ್ದೇಶಕ ಕರಣ್ ಜೋಹರ್ (Bollywood Director Karun Johar) ಮೇ 25ರಂದು ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಕರಣ್ ಬರ್ತ್ ಡೇ (Karun Johar Birthday) ಬಾಲಿವುಡ್‌ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಶುಭಾಶಯ ತಿಳಿಸಿದ್ದಾರೆ. ಅದೇ ರೀತಿ ಡಿಸೈನರ್ ಮನೀಷ್ ಮಲ್ಹೋತ್ರಾ (Designer Manish Malhotra) ಸಹ ಕರಣ್ ಜೊತೆಗಿನ ಫೋಟೋ ಹಂಚಿಕೊಂಡು ಗೆಳಯನಿಗೆ ಜನ್ಮ ದಿನದ ಶುಭಾಶಯ ತಿಳಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳಿಗೆ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. 

ಹಲವರ ಜೊತೆ ಕರಣ್ ಹೆಸರು ಥಳಕು 

Tap to resize

Latest Videos

ಕರಣ್ ಜೋಹರ್ ಹೆಸರಿನ ಜೊತೆ ಹಲವು ಸ್ಟಾರ್‌ಗಳ ಜೊತೆಯಲ್ಲಿ ಕೇಳಿ ಬರುತ್ತಿರುತ್ತದೆ. ಶಾರೂಖ್ ಖಾನ್, ಸಿದ್ಧಾರ್ಥ್ ಮಲ್ಹೋತ್ರಾ, ಮನೀಷ್ ಮಲ್ಹೋತ್ರಾ, ಫವಾದ್ ಖಾನ್, ನೇಪಾಳ ಮೂಲದ ಪ್ರಬಲ್ ಗುರಂಗ್ ಸೇರಿದಂತೆ ಹಲವರು ಕರಣ್ ಜೋಹರ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂಬ ವದಂತಿಗಳು ಬಣ್ಣದ ಲೋಕದಲ್ಲಿ ಹರಿದಾಡುತ್ತಿರುತ್ತವೆ. ಅದರಲ್ಲಿಯೂ ಮನೀಷ್ ಮಲ್ಹೋತ್ರಾ ಜೊತೆಗೆ ಕರಣ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿರುತ್ತದೆ. 

ಮನೀಷ್ ಬರ್ತ್ ಡೇ ವಿಶ್

1993ರಿಂದಲೂ ನಾವಿಬ್ಬರು ಸ್ನೇಹಿತರಾಗಿದ್ದು, ಹಲವು ವರ್ಷ ಜೊತೆಯಾಗಿ ಕೆಲಸ ಮಾಡಿದ್ದೇವೆ. ಉತ್ತಮ ಸಿನಿಮಾ ಹಾಗೂ ಬಟ್ಟೆಗಳ ಮೇಲಿನ ನಿಮ್ಮ ಪ್ರೀತಿ ಆಗಾಧವಾದದ್ದು. ನಿಮ್ಮ ಕೆಲಸ ಹೀಗೆಮ ಮುಂದುವರಿಯಲಿ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಮನೀಷ್ ಮಲ್ಹೋತ್ರಾ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗೆ ಲವ್ ಯು ಮನೀಷ್ ಎಂದು ಕರಣ್ ಜೋಹರ್ ಪ್ರತಿಕ್ರಿಯಿಸಿದ್ದಾರೆ. ಇದೇ ಪೋಸ್ಟ್‌ಗೆ ನೆಟ್ಟಿಗರು ತರೇಹವಾರಿ ಕಮೆಂಟ್ ಮಾಡಿದ್ದಾರೆ. 

ನೆಟ್ಟಿಗರ ಕಮೆಂಟ್ ಏನು? 

ಒಬ್ಬ ಎಕ್ಸ್ ಮತ್ತೊಬ್ಬ ಎಕ್ಸ್‌ಗೆ ಕಮೆಂಟ್ ಮಾಡಿ ಬರ್ತ್‌ಡೇ ವಿಶ್ ಮಾಡಿದ್ದಾರೆ. ನಿಮ್ಮ ಜೋಡಿ ತುಂಬಾ ಚೆನ್ನಾಗಿದೆ. ಫೋಟೋದಲ್ಲಿ ಅವಳಿ-ಜವಳಿ ರೀತಿ ಕಾಣಿಸುತ್ತಿದ್ದೀರಿ. ಇಬ್ಬರ ಮುಂದಿನ ವೃತ್ತಿ ಜೀವನಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ. 

ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ನಟಿಸಿದ ಕನ್ನಡ ಸಿನಿಮಾ ಇದೇ ನೋಡಿ!

ಇಬ್ಬರು ಮಕ್ಕಳ ತಂದೆ ಕರಣ್ ಜೋಹರ್

ಕರಣ್ ಜೋಹರ್ ಕಲ್ಪನೆಯಲ್ಲಿ ಮೂಡಿಬರುವ ಸಿನಿಮಾಗಳಲ್ಲಿ ನಟಿಸಲು ಕಲಾವಿದರು ಕಾಯುತ್ತಿರುತ್ತಾರೆ. ಅದ್ಧೂರಿತನ ಸ್ಟೈಲ್ ಮೂಲಕ ಸಿನಿಮಾ ನಿರ್ಮಾಣಕ್ಕೆ ಹೆಸರುವಾಸಿಯಾಗಿರುವ ಕರಣ್ ಜೋಹರ್ ತಮ್ಮ ಖಾಸಗಿ ಜೀವನದ ಬಗ್ಗೆಯೂ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಎರಡು ಮುದ್ದಾದ ಮಕ್ಕಳ ತಂದೆಯಾಗಿರುವ ಕರಣ್ ಜೋಹರ್ ಸಲಿಂಗಿ ಎಂಬ ಚರ್ಚೆಗಳು ಬಾಲಿವುಡ್ ಅಂಗಳದಲ್ಲಿ ಆಗಾಗ್ಗೆ ನಡೆಯುತ್ತಿರುತ್ತವೆ. ಕರಣ್ ಜೋಹರ್ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದುಕೊಂಡಿದ್ದಾರೆ. 

ಹಲವು ರಿಯಾಲಿಟಿ ಶೋಗಳಲ್ಲಿ ತಮ್ಮ ಜೀವನದ ಬಗ್ಗೆ ಕರಣ್ ಮಾತಾಡಿದ್ದಾರೆ. ಪರೋಕ್ಷವಾಗಿ ತಾನೋರ್ವ ಸಲಿಂಗಿ ಎಂಬ ಸುಳಿವನ್ನು ನೀಡುತ್ತಾರೆ. ನಾನು ಯಾವುದೇ ಟ್ರೋಲ್‌ಗಳಿಗೆ ತಲೆಕೆಡಿಸಿಕೊಳ್ಳಲ್ಲ. ನಾನು ನನ್ನ ಕೆಲಸ ಮಾಡಿಕೊಂಡು ಹೋಗುತ್ತಿರುತ್ತೇನೆ ಎಂದು ತಮ್ಮ ವಿರುದ್ಧ ಕೇಳಿ ಬರುವ ಮಾತುಗಳಿಗೆ ಕರಣ್ ತಿರುಗೇಟು ನೀಡಿದ್ದಾರೆ.

ಮೌನಿ ರಾಯ್ ಬಿಕಿನಿ ಫೋಟೋಗಳಿಗೆ ಅವರೆಲ್ಲಿ ಎಂದು ಕೇಳಿದ ಅಭಿಮಾನಿಗಳು!

ನಾನು ಸಿಂಗಲ್ ಎಂದ ಕರಣ್ ಜೋಹರ್

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಿಲೇಶನ್‌ಶಿಪ್ ಬಗ್ಗೆ ಮಾತನಾಡಿದ್ದ ಕರಣ್ ಜೋಹರ್, ನಾನು ಸಿಂಗಲ್ ಆಗಿದ್ದು ಈಗ ಲೈಫ್ ಪಾರ್ಟನರ್ ಹುಡುಕೋದು ಕಷ್ಟದ ಕೆಲಸವಾಗಿದೆ. ನನ್ನ ಸಿನಿಮಾಗಳು ಪ್ರೀತಿಯ ಕಥೆಯನ್ನು ಹೊಂದಿರುತ್ತವೆ. ಆದರೆ ನನ್ನ ಜೀವನದಲ್ಲಿ ಯಾವುದೇ ರೀತಿಯ ಲವ್ ಇಲ್ಲ ಎಂದು ಹೇಳಿದ್ದಾರೆ. ನಾನು 30 ವರ್ಷದವನಿದ್ದಾಗ ನನ್ನ ಪ್ರೀತಿ ಏನು ಎಂಬುವುದು ನನಗೆ ಗೊತ್ತಾಗಿತ್ತು. ಆದ್ರೆ ಆ ಸಮಯದಲ್ಲಿ ನನಗೆ ಬೇಕಾದ ಸಂಗಾತಿ ಹುಡುಕೋದು ಅಷ್ಟು ಸುಲಭವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

click me!