Published : Mar 03, 2025, 07:35 AM ISTUpdated : Mar 03, 2025, 10:24 PM IST

Kannada Entertainment Live: ಎರಡನೇ ಬಾರಿ ಆಸ್ಕರ್ ಗೆದ್ದ ಏಡ್ರಿಯನ್ ಬ್ರಾಡಿ

ಸಾರಾಂಶ

ನಟ ಏಡ್ರಿಯನ್ ಬ್ರಾಡಿ 2025ರ ಆಸ್ಕರ್‌ನಲ್ಲಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಎರಡನೇ ಬಾರಿಗೆ ಗೆದ್ದಿದ್ದಾರೆ. ಬ್ರಾಡಿ ಅವರು ಬ್ರಾಡಿ ಕಾರ್ಬೆಟ್ ಅವರ 'ದಿ ಬ್ರೂಟಲಿಸ್ಟ್' ಚಿತ್ರದಲ್ಲಿನ ಅಭಿನಯಕ್ಕಾಗಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2003 ರಲ್ಲಿ 'ದಿ ಪಿಯಾನಿಸ್ಟ್' ಚಿತ್ರದಲ್ಲಿನ ಅಭಿನಯಕ್ಕಾಗಿ ಕೇವಲ 29 ನೇ ವಯಸ್ಸಿನಲ್ಲಿ ಈ ಪ್ರಶಸ್ತಿಯನ್ನು ಗೆದ್ದ ಅವರು ಈ ಸಾಧನೆ ಮಾಡಿದ ಅತ್ಯಂತ ಕಿರಿಯ ನಟರಲ್ಲಿ ಒಬ್ಬರಾಗಿದ್ದಾರೆ. 'ದಿ ಬ್ರೂಟಲಿಸ್ಟ್' ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯಿಕವಾಗಿ ಯಶಸ್ವಿಯಾದ ಚಿತ್ರವಾಗಿದ್ದು, ಇದು ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಪೋಷಕ ನಟ ಸೇರಿದಂತೆ ಒಟ್ಟು 10 ಆಸ್ಕರ್ ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. ಕಾನನ್ ಓ'ಬ್ರಿಯಾನ್ 2025 ರ ಆಸ್ಕರ್‌ಗೆ ಆತಿಥ್ಯ ವಹಿಸಿದ್ದರು. ಭಾರತದಲ್ಲಿ, 97ನೇ ಅಕಾಡೆಮಿ ಪ್ರಶಸ್ತಿಗಳನ್ನು ಜಿಯೋ ಹಾಟ್‌ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಯಿತು

Kannada Entertainment Live: ಎರಡನೇ ಬಾರಿ ಆಸ್ಕರ್ ಗೆದ್ದ ಏಡ್ರಿಯನ್ ಬ್ರಾಡಿ

10:24 PM (IST) Mar 03

ಭೂಮಿ ಮಿಸ್​ ಬದ್ಲು ಗೌತಮ್​ಗೆ ಜೋಡಿಯಾಗ್ತಾಳಾ ರಾಧಾ ಮಿಸ್ಸು? ಇದೇನಿದು ಅಮೃತಧಾರೆ ಟ್ವಿಸ್ಟು?

ಅಮೃತಧಾರೆ ಸೀರಿಯಲ್​ಗೆ ಮಧುರಾ ಆಗಿ ನಟಿ ಶ್ವೇತಾ ಪ್ರಸಾದ್​ ಅವರು ಎಂಟ್ರಿ ಕೊಟ್ಟಿದ್ದು,  ಗೌತಮ್​ ಜೊತೆ ಅವಳ ಮದುವೆ ಆಗತ್ತಾ? ಏನಿದು ಟ್ವಿಸ್ಟ್​?
 

ಪೂರ್ತಿ ಓದಿ

10:00 PM (IST) Mar 03

ಲವ್, ಆಕ್ಷನ್, ಫ್ಯಾಮಿಲಿ ಡ್ರಾಮಾ; ಹೇಗಿತ್ತು ಭಾರ್ಗವಿ LLB ಧಾರಾವಾಹಿಯ ಫಸ್ಟ್ ಎಪಿಸೋಡ್?

Bhargavi Serial: ಕಲರ್ಸ್ ಕನ್ನಡದಲ್ಲಿ ಶುರುವಾಗಿರುವ ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಯ ಮೊದಲ ಸಂಚಿಕೆ ಪ್ರಸಾರವಾಗಿದೆ. ಮೊದಲ ನೋಟದಲ್ಲೇ ಅರ್ಜುನ್‌ಗೆ ಭಾರ್ಗವಿ ಮೇಲೆ ಲವ್ ಆಗಿದೆ.

ಪೂರ್ತಿ ಓದಿ

07:19 PM (IST) Mar 03

ಹಳದಿ ಕಾರ್ಯದಲ್ಲಿ 'ಬಾಟಲಿ ಶಾಸ್ತ್ರ'! ಅತ್ತೆ ಮನೆಯಲ್ಲಿ ಸುಸ್ತಾದ ತರುಣ್:​ ಮದುವೆಗೆ ಮುನ್ನ ನಡೆದ ಆ ಘಟನೆ ವಿವರಿಸಿದ ಸೋನಲ್​

ನಿರ್ದೇಶಕ ತರುಣ್ ಸುಧೀರ್ ತಮ್ಮ ಮನೆಗೆ ಮೊದಲ ಬಾರಿಗೆ ಬಂದಾಗ ನಡೆದ ರೋಚಕ ಕಥೆಯನ್ನು ಹೇಳಿದ್ದಾರೆ ನಟಿ ಸೋನಲ್​. 
 

ಪೂರ್ತಿ ಓದಿ

06:29 PM (IST) Mar 03

ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಗೋವಿಂದ- ಸುನಿತಾ ಲಿಪ್​ಲಾಕ್​ ವಿಡಿಯೋ ವೈರಲ್​: ಇದರಲ್ಲೇನಿದೆ?

ಡಿವೋರ್ಸ್​ ಸುದ್ದಿ ಬೆನ್ನಲ್ಲೇ ಗೋವಿಂದ- ಸುನಿತಾ ಲಿಪ್​ಲಾಕ್​ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಏನಿದೆ ನೋಡಿ...
 

ಪೂರ್ತಿ ಓದಿ

03:13 PM (IST) Mar 03

ಓರಿಯ ಒಂದೇ ಒಂದು ಟಚ್‌, ಗರ್ಭ ಧರಿಸಿದ ಮಹಿಳೆ !

ಸೆಲೆಬ್ರಿಟಿಗಳ ಫೆವರೆಟ್ ಓರಿ ಅಚ್ಚರಿಯ ವಿಷ್ಯವೊಂದನ್ನು ಹೇಳಿದ್ದಾರೆ. ಅವ್ರ ಒಂದು ಟಚ್ ಏನೆಲ್ಲ ಮಾಡಿದೆ ಎಂಬುದನ್ನು ವಿವರಿಸಿದ್ದಾರೆ. ಇದನ್ನು ಕೇಳಿದ ಜನ ಟ್ರೋಲ್ ಶುರು ಮಾಡಿದ್ದಾರೆ. 
 

ಪೂರ್ತಿ ಓದಿ

02:55 PM (IST) Mar 03

ಅಮೃತಧಾರೆಯಿಂದ ಮಲ್ಲಿ ಔಟ್- ಕಾರಣ ಕೊಟ್ಟ ನಟಿ​: ಇನ್ಮುಂದೆ ಅಕ್ಕವ್ರೇ ಅಕ್ಕವ್ರೇ ಅನ್ನೋರು ಯಾರು?

ಅಮೃತಧಾರೆಯಲ್ಲಿ ಮಲ್ಲಿ ರೋಲ್​ ಮಾಡುತ್ತಿದ್ದ ನಟಿ ರಾಧಾ ಭಗವತಿ ಸೀರಿಯಲ್​ ಬಿಟ್ಟಿದ್ದು ಅದಕ್ಕೆ ಕಾರಣ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
 

ಪೂರ್ತಿ ಓದಿ

01:35 PM (IST) Mar 03

ಪಾರ್ವತಮ್ಮ ಎಷ್ಟೇ ಪ್ರಯತ್ನಿಸಿದ್ರೂ ಮಗ ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿಯ ಡೇಟ್ ಸಿಗಲಿಲ್ಲ

ಪಾರ್ವತಮ್ಮ ರಾಜ್‌ಕುಮಾರ್, ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿ ನಟಿಸಬೇಕೆಂದು ಬಯಸಿದ್ದರು, ಆದರೆ ಸಾಧ್ಯವಾಗಲಿಲ್ಲ. ಆ ಸಿನಿಮಾ ಯಾವುದು ಅಂತ ಗೊತ್ತಾ?

ಪೂರ್ತಿ ಓದಿ

12:44 PM (IST) Mar 03

ಸಿನಿಮಾ ಟ್ರಾಫಿಕ್‌ನಿಂದ ಒಳ್ಳೆಯ ಚಿತ್ರಗಳಿಗೂ ಗೆಲುವು ಸಿಗುತ್ತಿಲ್ಲ: ನಿರ್ದೇಶಕ ಹಯವದನ

ಎಲ್ಲಾ ಹೊಸಬರ ಚಿತ್ರಗಳಂತೆ ನಮ್ಮ ಚಿತ್ರಕ್ಕೂ ಒಂದಿಷ್ಟು ಸವಾಲುಗಳು ಎದುರಾಗಿವೆ. ಸ್ಕ್ರೀನ್‌ಗಳು ಸಿಗದೆ ಇರುವುದು ಇತ್ಯಾದಿ ಸಮಸ್ಯೆಗಳನ್ನು ದಾಟಿಕೊಳ್ಳುತ್ತಿದ್ದೇವೆ.

ಪೂರ್ತಿ ಓದಿ

12:36 PM (IST) Mar 03

ಕ್ರೈಂ, ಥ್ರಿಲ್ಲರ್ ಜೊತೆ ಹಾರರ್; ಈ ಮಲಯಾಳಂ ಸಿನಿಮಾ ನೋಡಿ ಫಿದಾ ಆಗದವರೇ ಇಲ್ಲ!

ಮಲಯಾಳಂನ ಕ್ರೈಂ, ಥ್ರಿಲ್ಲರ್ ಹಾಗೂ ಹಾರರ್ ಕಥಾಹಂದರ ಹೊಂದಿರುವ ಸಿನಿಮಾ ನಿಮ್ಮನ್ನು ರಂಜಿಸಲಿದೆ. ಕೆಂಪು ಫ್ರಿಜ್‌ನ ರಹಸ್ಯವನ್ನು ಭೇದಿಸುವ ಪೊಲೀಸ್ ಅಧಿಕಾರಿಯ ಕಥೆ ನಿಮ್ಮನ್ನು ಕೊನೆಯವರೆಗೂ ಹಿಡಿದಿಟ್ಟುಕೊಳ್ಳುತ್ತದೆ.

ಪೂರ್ತಿ ಓದಿ

12:24 PM (IST) Mar 03

ಹೊಸ ಬದುಕಿಗೆ ಕಾಲಿಟ್ಟ ಚೈತ್ರಾ, ಬ್ಯಾಡ್ ಕಮೆಂಟಿಗರ ವಿರುದ್ಧ ಫ್ಯಾನ್ಸ್ ಗರಂ

ನಿರೂಪಕಿ ಚೈತ್ರಾ ವಾಸುದೇವನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಶುಭ ಸಮಯದಲ್ಲೂ ನೆಟ್ಟಿಗರು ಅವರನ್ನು ಬಿಟ್ಟಿಲ್ಲ. ಅವ್ರ ಡ್ರೆಸ್ ಮೇಲೆ ಕಮೆಂಟ್ ಶುರು ಮಾಡಿದ್ದಾರೆ. 
 

ಪೂರ್ತಿ ಓದಿ

12:19 PM (IST) Mar 03

ಗಂಡನಿಂದ ದೂರವಿರಲು ಕಾರಣವೇನು? ಡಿವೋರ್ಸ್ ಬಗ್ಗೆ ಮೋಹನ್ ಬಾಬು ಪುತ್ರಿ ಮಂಚು ಲಕ್ಷ್ಮಿ ಸ್ಪಷ್ಟನೆ!

ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಗಳಿಗೆ ನಟಿ ಮತ್ತು ಮೋಹನ್ ಬಾಬು ಅವರ ಪುತ್ರಿ ಮಂಚು ಲಕ್ಷ್ಮಿ ಸ್ಪಷ್ಟನೆ ನೀಡಿದ್ದಾರೆ.

ಪೂರ್ತಿ ಓದಿ

11:56 AM (IST) Mar 03

ಬಾಯಿಮಾತಿನ ಪ್ರಚಾರವೇ ಭಾವತೀರ ಯಾನವನ್ನು ಗೆಲ್ಲಿಸಿದೆ: ನಿರ್ದೇಶಕ ಮಯೂರ್‌ ಅಂಬೆಕಲ್ಲು

‘ನಮ್ಮ ಸಿನಿಮಾ ಬಹಳ ಜನರಿಗೆ ಕನೆಕ್ಟ್‌ ಆಗಿದೆ. ಬಂದವರೇ ಮತ್ತೆ ಮತ್ತೆ ಥೇಟರಿಗೆ ಬರುವ ಜೊತೆ ಫ್ಯಾಮಿಲಿಯನ್ನೂ ಕರೆತಂದಿದ್ದಾರೆ. ನಮ್ಮೂರು ಸುಳ್ಯ, ಪುತ್ತೂರು ಮೊದಲಾದೆಡೆ ಚಿತ್ರ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಬಾಯಿಮಾತಿನ ಪ್ರಚಾರವೇ ಸಿನಿಮಾವನ್ನು ಗೆಲ್ಲಿಸಿದೆ’ ಎಂದು ನಿರ್ದೇಶಕ ಮಯೂರ್‌ ಅಂಬೆಕಲ್ಲು ತಿಳಿಸಿದ್ದಾರೆ. 

ಪೂರ್ತಿ ಓದಿ

11:29 AM (IST) Mar 03

BIFFES 2025: ಆಸ್ಕರ್‌ ಪಟ್ಟಿಯಲ್ಲಿರುವ ಸಿನಿಮಾ ಪ್ರದರ್ಶನಕ್ಕೆ ಕಿಕ್ಕಿರಿದ ಜನಸಂದಣಿ

ಸಿನಿಮೋತ್ಸವದಲ್ಲಿ ಮಲಯಾಳಂನ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಡಾ ಬಿಜು ಕುಮಾರ್ ದಾಮೋದರನ್‌, ಗೋವಾದ ನಿರ್ದೇಶಕ, ಸಿನಿಮಾ ತಜ್ಞ ಪಂಕಜ್‌ ಸಕ್ಸೇನಾ ಸೇರಿದಂತೆ ಹಲವು ಖ್ಯಾತ ನಿರ್ದೇಶಕರು, ಸಿನಿಮಾ ತಜ್ಞರು ಭಾಗಿಯಾಗಿದ್ದಾರೆ.

ಪೂರ್ತಿ ಓದಿ

11:22 AM (IST) Mar 03

BIFFES 2025: ಈಗಿನ ಸಿನಿಮಾ ಮೇಕರ್‌ಗಳಿಗೆ ಜೀವನಾನುಭವ ಕೊರತೆ ಇದೆ: ನಟ ಕಿಶೋರ್

ನನ್ನ ಪ್ರಕಾರ ಸಿನಿಮಾ ಮಾಡಲು ಹೆಚ್ಚು ಹೆಚ್ಚು ಅವಕಾಶ ಸಿಗುವ ನಗರ ಕೇಂದ್ರಿತ ಮೇಕರ್‌ಗಳಿಗೆ ನಗರದ ಅನುಭವದ ಹೊರತಾಗಿ ಜೀವನದ ಸಂಪೂರ್ಣ ಅನುಭವ ಇರುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಈಗಿನ ಸಿನಿಮಾ ಮೇಕರ್‌ಗಳಲ್ಲಿ ಜೀವನಾನುಭವ ಕೊರತೆ ಎದ್ದು ಕಾಣುತ್ತಿದೆ.

ಪೂರ್ತಿ ಓದಿ

11:03 AM (IST) Mar 03

ಇವರಿಗೆ ಬುದ್ದಿ ಕಲಿಸಬೇಕಲ್ವಾ? ರಶ್ಮಿಕಾ ಮಂದಣ್ಣ ವಿರುದ್ಧ ಕಾಂಗ್ರೆಸ್ ಶಾಸಕ ಆಕ್ರೋಶ 

Sandalwood Vs Politics : ಕಾಂಗ್ರೆಸ್ ಶಾಸಕ, ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಬ್ಸಿಡಿ ವಿಚಾರದಲ್ಲಿ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ಕಲಾವಿದರು ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಪೂರ್ತಿ ಓದಿ

More Trending News