ಈಗಾಗಲೇ ಚಿತ್ರದ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಎಲ್ಲದರ ನಡುವೆ ಉಸ್ತಾದ್ ಜೀ ಪಾತ್ರ ಹೀರಾಮಂಡಿ ಸಿರೀಸ್ ತೂಕವನ್ನು ಹೆಚ್ಚಳ ಮಾಡಿದೆ.
ಮುಂಬೈ: ಸಂಜಯ್ ಲೀಲಾ ಬನ್ಸಾಲಿ ಪರಿಕಲ್ಪನೆಯಲ್ಲಿ ಮೂಡಿ ಬಂದ ಹೀರಾಮಂಡಿ ಜನರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅದರಲ್ಲಿಯೂ ಹೀರಾಮಂಡಿಯಲ್ಲಿಯ ಸಣ್ಣ ಸಣ್ಣ ಪಾತ್ರಗಳು ವೀಕ್ಷಕರನ್ನು ಸೆಳೆದಿವೆ. ಹೀರಾಮಂಡಿ ಮಹಿಳಾ ಪ್ರಧಾನ ಕತೆಯಾಗಿದ್ರೂ, ಪುರುಷ ಪಾತ್ರಗಳಿಗೂ ಅಷ್ಟೇ ಮಹತ್ವವನ್ನು ನೀಡಲಾಗಿದೆ.
ಮನಿಷಾ ಕೊಯಿರಲಾ, ಸೋನಾಕ್ಷಿ ಸಿನ್ಹಾ, ಅದಿತಿ ರಾವ್ ಹೈದರಿ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೀರಾಮಂಡಿ ಹೊಂದಿದೆ. ಈಗಾಗಲೇ ಚಿತ್ರದ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಎಲ್ಲದರ ನಡುವೆ ಉಸ್ತಾದ್ ಜೀ ಪಾತ್ರ ಹೀರಾಮಂಡಿ ಸಿರೀಸ್ ತೂಕವನ್ನು ಹೆಚ್ಚಳ ಮಾಡಿದೆ.
ಹಲ್ ಚಲ್ ಸೃಷ್ಟಿಸಿದ ಎರಡು ದೃಶ್ಯಗಳು
ಉಸ್ತಾದ್ ಜೀ ಪಾತ್ರದಲ್ಲಿ ನಟ ಇಂದ್ರೇಶ್ ಮಲೀಕ್ ನಟಿಸಿದ್ದಾರೆ. ಉಸ್ತಾದ್‌ಜೀಗೆ ಕನ್ನಡಿ ಮುಂದೆ ಸೋನಾಕ್ಷಿ ಸಿನ್ಹಾ ಮೂಗುತಿ ಧರಿಸುವ ಸೀನ್ ಮತ್ತು ಸಹನಟ ಜಾಸನ್ ಶಾ ಜೊತೆಗಿನ ಇಂಟಿಮೇಟ್ ಸೀನ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿವೆ. ಈ ಎರಡೂ ದೃಶ್ಯದ ಫೋಟೋ ಮತ್ತು ವಿಡಿಯೋ ಕ್ಲಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಉಸ್ತಾದ್ ಜೀ ಸಂದರ್ಶನ
ಉಸ್ತಾದ್ ಜೀ ಪಾತ್ರಕ್ಕೆ ಜೀವ ತುಂಬಿರುವ ನಟ ಇಂದ್ರೇಶ್ ಮಲೀಕ್ ಸಂದರ್ಶನವೊಂದರಲ್ಲಿ ಈ ಎರಡು ದೃಶ್ಯಗಳ ಚಿತ್ರೀಕರಣ ಹೇಗಿತ್ತು ಎಂಬುದನ್ನು ವಿವರಿಸಿದ್ದಾರೆ. ಸೀನ್‌ಗಳ ಶೂಟ್ ಮುಗಿದಾಗ ಸಂಜಯ್ ಲೀಲಾ ಬನ್ಸಾಲಿ ಪ್ರತಿಕ್ರಿಯೆ ಹೇಗಿತ್ತು ಎಂಬುದರ ಬಗ್ಗೆಯೂ ಹೇಳಿದ್ದಾರೆ.
ಬಿಬ್ಬೂಜಾನ್‌ಗೆ ಹೇರ್‌ಸ್ಟೈಲ್ ಮ್ಯಾಚ್ ಆಗ್ತಿಲ್ಲ ಎಂದ ಫ್ಯಾನ್ಸ್; ಫೋಟೋ ವೈರಲ್
ಮೂಗುತಿ ತೊಡಿಸುವ ದೃಶ್ಯದ ಬಗ್ಗೆ ಮಾತನಾಡಿದ ಇಂದ್ರೇಶ್ ಮಲೀಕ್, ಮೊದಲಿಗೆ ಸಂಜಯ್ ಸೀನ್ ಬಗ್ಗೆ ಬ್ರೀಫ್ ಮಾಡಿದರು. ನಾನು ಆ ಸನ್ನಿವೇಶ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಉಸ್ತಾದ್ ಜೀಗೆ ಮೂಗುತಿ ಧರಿಸಿದಾಗ, ಆತನಿಗ ತನ್ನನ್ನ ಗೌರವಿಸಿದ ಭಾವನೆ ಮೂಡುತ್ತದೆ. ತನ್ನನ್ನು ಇರುವ ಹಾಗೆಯೇ ಒಪ್ಪಿಕೊಂಡ ಖುಷಿ ಅವನಿಗಾಗುತ್ತದೆ. ಹಾಗಾಗಿಯೇ ಮೂಗುತಿ ಧರಿಸಿದ ಕೂಡಲೇ ಆತನ ಕಣ್ಣಾಲಿಗಳು ತುಂಬಿಕೊಳ್ಳುತ್ತವೆ.
ಸೀನ್ ಎಂಡ್‌ಗೆ ಕಟ್ ಹೇಳಿದರೂ ನಾನು ಹತ್ತು ನಿಮಿಷ ಭಾವುಕನಾಗಿದ್ದೆ. ಸಂಜಯ್ ಸರ್ ಬಂದು ಪ್ರೀತಿಯಿಂದ 500 ರೂಪಾಯಿ ನೀಡಿ ತಬ್ಬಿಕೊಂಡು ಆಶೀರ್ವದಿಸಿದರು. ಈ ಘಟನೆಯನ್ನು ನಾನೆಂದಿಗೂ ಮರೆಯಲ್ಲ ಎಂದು ಸಂತೋಷವನ್ನ ಹಂಚಿಕೊಂಡರು.
ಪ್ರಿಯಾ- ಅಶೋಕ್ ಫಸ್ಟ್ನೈಟ್ ಶೂಟಿಂಗ್ ಹೇಗಿತ್ತು? ವಿಡಿಯೋ ಮೂಲಕ ಫುಲ್ ಡಿಟೇಲ್ಸ್ ನೀಡಿದ ನಟಿ
ಇಂಟಿಮೇಟ್ ಸೀನ್ ಹೇಗಿತ್ತು?
ಇದೇ ವೇಳೆ ಜಾಸನ್ ಶಾ ಜೊತೆಗಿನ ಇಂಟಿಮೇಟ್ ಸೀನ್ ಬಗ್ಗೆಯೂ ಇಂದ್ರೇಶ್ ಮಲೀಕ್ ಮಾತನಾಡಿದ್ದಾರೆ. ಸೀನ್ ಬ್ರೀಫ್ ಕೇಳಿದಾಗ ಮುಜುಗರ ಉಂಟಾಯ್ತು. ನಿರ್ದೇಶಕರ ಕಲ್ಪನೆಯ ಪಾತ್ರಕ್ಕೆ ಜೀವ ತುಂಬಿಸೋದು ನಮ್ಮ ಕೆಲಸ. ನಮ್ಮ ನಟನೆಯಿಂದ ಮೊದಲು ನಿರ್ದೇಶಕರು ಸಂತೋಷಗೊಳ್ಳಬೇಕು. ಆ ದೃಶ್ಯದ ಚಿತ್ರೀಕರಣದ ಬಳಿಕ ಆ ಸಂತೋಷ ಸಂಜಯ್ ಸರ್ ಕಣ್ಣಲ್ಲಿತ್ತು. ಜಾಸನ್ ನನ್ನನ್ನು ಎತ್ತಿಕೊಳ್ಳುತ್ತಿದ್ದಂತೆ ಏನೇನೂ ಹೇಳುತ್ತಾ ಹೋದೆ ಎಂದು ನಕ್ಕರು.
ಒಂದು ರೀತಿ ನನ್ನ ಕನಸು ನನಸು ಆಗಿದೆ
ಸಂಜಯ್ ಸರ್ ಜೊತೆಗೆ ಇದು ನನ್ನ ಎರಡನೇ ಪ್ರಾಜೆಕ್ಟ್ ಆಗಿದೆ. ಈ ಮೊದಲು ಗಂಗೂಬಾಯಿ ಸಿನಿಮಾದ ಚಿಕ್ಕ ಪಾತ್ರದಲ್ಲಿ ನಟಿಸಿದ್ದೆ. ಹೀರಾಮಂಡಿಯಲ್ಲಿಯೂ ಇದು ಚಿಕ್ಕಪಾತ್ರ. 25 ರಿಂದ 30 ದಿನಗಳಲ್ಲ ಈ ಪಾತ್ರದ ಶೂಟಿಂಗ್ ಆಗಿದೆ. ಸಂಜಯ್ ಸರ್ ಜೊತೆ ಕೆಲಸ ಮಾಡಿದ್ದಕ್ಕೆ ನನಗೆ ತುಂಬಾ ಹೆಮ್ಮೆ ಆಗುತ್ತಿದೆ. ಇಷ್ಟು ಚಿಕ್ಕ ಪಾತ್ರಕ್ಕೆ ಇಷ್ಟು ದೊಡ್ಡಮಟ್ಟದಲ್ಲಿ ವೀಕ್ಷಕರಿಂದ ಪ್ರೀತಿ ಸಿಗುತ್ತೆಗ ಎಂದು ನಾನು ಭಾವಿಸಿರಲಿಲ್ಲ. ಒಂದು ರೀತಿ ನನ್ನ ಕನಸು ನನಸು ಆಗಿದೆ ಎಂದು ಮಾತ್ರ ಹೇಳಬಲ್ಲೆ ಎಂದು ಯಶಸ್ಸಿನ ಸಂತೋಷವನ್ನು ಇಂದ್ರೇಶ್ ಹಂಚಿಕೊಂಡರು.