ಪತ್ನಿಗೆ ನನ್ನ ಗಡ್ಡ ಚುಚ್ಚುತ್ತಿತ್ತು, ಅದಕ್ಕೆ ಬೋಳಿಸಿದೆ ಎಂದ ಬಿಗ್‌ಬಾಸ್‌ ರನ್ನರ್ ಅಪ್

By Mahmad Rafik  |  First Published May 30, 2024, 5:35 PM IST

ರಜೆಯಲ್ಲಿ ಕುಟುಂಬದ ಜೊತೆಯಲ್ಲಿದ್ದೆ. ಮನೆಯಲ್ಲಿದ್ದಾಗ ಪತ್ನಿ ನಿಮ್ಮ ಗಡ್ಡ ನನಗೆ ಚುಚ್ಚುತ್ತೆ ಎಂದು ಹೇಳಿದಳು. ಹಾಗಾಗಿ ಪತ್ನಿಗಾಗಿ ಕ್ಲೀನ್ ಶೇವ್ ಮಾಡಿಕೊಂಡಿದ್ದೇನೆ ಎಂದು ರಾಹುಲ್ ವೈದ್ಯ ಹೇಳಿದ್ದಾರೆ.


ಮುಂಬೈ: ಗಾಯಕ, ಬಿಗ್‌ಬಾಸ್ ಮಾಜಿ ಸ್ಪರ್ಧಿ ರಾಹುಲ್ ವೈದ್ಯ (Singer Rahul Vaidya), ಕ್ಲೀನ್ ಶೇವ್ ಮಾಡಿಸಿಕೊಂಡಿದ್ಯಾಕೆ ಎಂಬುದರ ಬಗ್ಗೆ ಹೇಳಿಕೊಂಡಿದ್ದಾರೆ. ಪಾಪರಾಜಿಗಳ ಪ್ರಶ್ನೆಗೆ ಉತ್ತರಿಸಿದ ರಾಹುಲ್ ವೈದ್ಯ, ಹೆಂಡತಿಗೆ ನನ್ನ ಗಡ್ಡ (Beard) ಚುಚ್ಚುತ್ತಿತ್ತು. ಆಕೆಯ ಕಂಫರ್ಟ್‌ಗಾಗಿ ನನ್ನ ಗಡ್ಡವನ್ನು ತೆಗೆದು ಎಂದು ಹೇಳಿ ನಕ್ಕಿದ್ದಾರೆ. ಕಳೆದ ಕೆಲವು ದಿನಗಳಿಂದ ರಜೆಯಲ್ಲಿ ಕುಟುಂಬದ ಜೊತೆಯಲ್ಲಿದ್ದೆ. ಮನೆಯಲ್ಲಿದ್ದಾಗ ಪತ್ನಿ ನಿಮ್ಮ ಗಡ್ಡ ನನಗೆ ಚುಚ್ಚುತ್ತೆ ಎಂದು ಹೇಳಿದಳು. ಹಾಗಾಗಿ ಪತ್ನಿಗಾಗಿ ಕ್ಲೀನ್ ಶೇವ್ ಮಾಡಿಕೊಂಡಿದ್ದೇನೆ ಎಂಬ ವಿಷಯವನ್ನು ತಿಳಿಸಿದರು. ಈ ಮಾತು ಕೇಳಿ ಅಲ್ಲಿದ್ದವರೆಲ್ಲರೂ ನಕ್ಕಿದ್ದಾರೆ. ಈ ವಿಡಿಯೋಗೆ ಕಮೆಂಟ್ ಮಾಡಿರುವ ರಾಹುಲ್ ವೈದ್ಯ ಪತ್ನಿ ದಿಶಾ ಪರಮಾರ್ (Actress Disha Parmar), ಸುಳ್ಳು ಅಂತ ಹೇಳಿದ್ದಾರೆ. 

ವಿರಲ್ ಭಯಾನಿ ಪೇಜ್‌ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ನೆಟ್ಟಿಗರು ಫನ್ನಿಯಾಗಿ ಕಮೆಂಟ್ ಮಾಡುತ್ತಿದ್ದಾರೆ. ಇತ್ತ ದಿಶಾ ಕಮೆಂಟ್‌ಗೂ ನೆಟ್ಟಿಗರು ಪ್ರತಿಕ್ರಿಯಿಸಿ ಹಾಗಾದ್ರೆ ಗಡ್ಡದ ಹಿಂದಿನ ಅಸಲಿ ಸತ್ಯ ಏನು ಎಂದು ಕೇಳಿದ್ದಾರೆ. 

Tap to resize

Latest Videos

ಇತ್ತ ರಾಹುಲ್ ವೈದ್ಯ ಅಭಿಮಾನಿಗಳು ಗಡ್ಡ ತೆಗೆದ್ಮೇಲೆಯೂ ನೀವೂ ಹ್ಯಾಂಡ್‌ಸಮ್ ಆಗಿ ಕಾಣಿಸುತ್ತಿದ್ದೀರಿ ಅಂದ್ರೆ ಒಂದಿಷ್ಟು ಜನರು, ಗಡ್ಡದಲ್ಲಿಯೇ ನಿಮ್ಮ ಲುಕ್ ಸಖತ್ ಆಗಿತ್ತು ಎಂದಿದ್ದಾರೆ. ಇದರ ಜೊತೆಗೂ ಕೆಲ ಬ್ಯಾಡ್‌ ಕಮೆಂಟ್‌ಗಳು ವಿಡಿಯೋಗೆ ಬಂದಿವೆ. ಓರ್ವ ಬಳಕೆದಾರ, ಆತ ತನ್ನ ಪತ್ನಿಗಾಗಿ ಗಡ್ಡ ತೆಗೆದಿದ್ದೇನೆ ಅಂದ್ರೆ ಏನು ತಪ್ಪು. ಆತ ಹೇಳುತ್ತಿರೋದು ಸತ್ಯ ಆಗಿರುತ್ತದೆ ಎಂದು ಕೆಟ್ಟ ಕಮೆಂಟ್‌ದಾರರಿಗೆ ಚಳಿ ಬಿಡಿಸಿದ್ದಾರೆ.

ರಿಯಾಲಿಟಿ ಶೋ ಮೂಲಕವೇ ಫೇಮಸ್

2005ರಲ್ಲಿ ಗಾಯಕ ರಾಹುಲ್ ವೈದ್ಯ ಖಾಸಗಿ ವಾಹಿನಿಯ ಇಂಡಿಯನ್ ಐಡಲ್ ಮೊದಲ ಸೀಸನ್‌ನ ಎರಡನೇ ರನ್ನರ್ ಅಪ್ ಆಗಿದ್ದರು. ಇದಾದ ಬಳಿಕ ಸಾಜಿದ್-ವಾಜಿದ್ ಸಂಗೀತ ಸಂಯೋಜನೆಯ ತೇರಾ ಇಂತೇಜಾರ್ ಅಲ್ಬಂನಲ್ಲಿ ರಾಹುಲ್ ವೈದ್ಯ ಹಾಡಿದ್ದರು.

ಗಾಯನದ ಜೊತೆಯಲ್ಲಿ ರಿಯಾಲಿಟಿ ಶೋಗಳ ಮೂಲಕವೂ ರಾಹುಲ್ ವೈದ್ಯ ಫೇಮಸ್ ಆದವರು. 2008ರಲ್ಲಿ ಝೂಮ್ ಇಂಡಿಯಾ ರಿಯಾಲಿಟಿ ಶೋನಲ್ಲಿಯೂ ಭಾಗಿಯಾಗಿದ್ದರು. ಜೋ ಜೀತಾ ವೊಹಿ ಸೂಪರ್‌ಸ್ಟಾರ್ ಶೋನ ವಿನ್ನರ್ ಆಗಿದ್ದಾರೆ. 

2013ರಲ್ಲಿ ತೆರೆಕಂಡ ರೇಸ್-2 ಚಿತ್ರದ "ಬೇ ಇಂತೇಹಾ" ಹಾಡು ರಾಹುಲ್ ವೈದ್ಯಗೆ ದೊಡ್ಡ ಸಕ್ಸಸ್ ತಂದುಕೊಟ್ಟಿತ್ತು. ಆಜಾ ಮಾಹಿ ವಯ್ ಶೋಗೆ ನಿರೂಪಕರಾಗಿಯೂ ರಾಹುಲ್ ವೈದ್ಯ ಕೆಲಸ ಮಾಡಿದ್ದಾರೆ. 

ಸುನಿಲ್ ಶೆಟ್ಟಿ ಬಳಿಕ ತುಳುನಾಡಿನ ಜೊತೆಗಿನ ನಂಟು ಹಂಚಿಕೊಂಡ ಬಿ-ಟೌನ್ ನಟ

ಬಿಗ್‌ಬಾಸ್-14ರ ರನ್ನರ್ ಅಪ್ 

ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌-14ರಲ್ಲಿಯೂ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್‌ನಲ್ಲಿ ರಾಹುಲ್ ವೈದ್ಯ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದಾದ ಬಳಿಕ ರಾಹುಲ್ ಶೆಟ್ಟಿ ನಿರೂಪಣೆಯ ಫಿಯರ್ ಫ್ಯಾಕ್ಟರ್: ಖತರೋಂಕಿ ಕೆ ಕಿಲಾಡಿ-11ರಲ್ಲಿ ರಾಹುಲ್ ವೈದ್ಯ ಸ್ಪರ್ಧಿಯಾಗಿದ್ರು. 

ವೇದಿಕೆ ಮೇಲಿದ್ದ ನಟಿಯನ್ನು ತಳ್ಳಿದ್ಯಾಕೆ ಸೂಪರ್ ಸ್ಟಾರ್ ನಂದಮೂರಿ ಬಾಲಕೃಷ್ಣ? ವಿಡಿಯೋ ವೈರಲ್ 

ಬಿಗ್‌ಬಾಸ್ ಮನೆಯಲ್ಲಿ ಪ್ರೇಮ 

ಬಿಗ್‌ಬಾಸ್‌ನಲ್ಲಿ ಸಹ ಸ್ಪರ್ಧಿಯಾಗಿದ್ದ ನಟಿ, ಮಾಡೆಲ್  ದಿಶಾ ಪರ್ಮಾರ ಜೊತೆ ರಾಹುಲ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದರು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ 16ನೇ ಜುಲೈ 2021ರಂದು ದಿಶಾ-ರಾಹುಲ್ ಮದುವೆಯಾಗಿದ್ದರು. ದಂಪತಿ 2023ರಲ್ಲಿ ಮುದ್ದಾದ ಮಗಳನ್ನು ಬರಮಾಡಿಕೊಂಡಿದ್ದಾರೆ.

click me!