ಸೋಶಿಯಲ್ ಮೀಡಿಯಾದಲ್ಲಿ ಗಂಡನೊಂದಿಗಿನ ಪೋಟೋ ಹಂಚಿಕೊಂಡ ಐಂದ್ರಿತಾ/ ಇದು ಯಾವ ಪ್ಲೇಸ್ ಗುರುತಿಸಿ/ ತೀರ್ಥಹಳ್ಳಿ ಎಂದವರು ಕೆಲವರು/ ಕೊಡಗು ಎಂದವರು ಹಲವರು
ಮನಸಾರೆ’ ಖ್ಯಾತಿಯ ನಟಿ ಐಂದ್ರಿತಾ ರೇ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಪ್ರಾಣಿ, ಪಕ್ಷಿಗಳು, ಪರಿಸರ ಕಾಳಜಿ, ಸಾಮಾಜಿಕ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಮದುವೆಯ ಬಳಿಕವಂತೂ ತೆರೆ ಮೇಲೆ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿತ್ತು.
ಮದುವೆ ಆದಮೇಲೆ ಐಂದ್ರಿತಾ ಬಿಕಿನಿ ಲುಕ್!
ಗಂಡ ದೂದ್ ಪೇಡ ದಿಗಂತ್ ಜತೆ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪತ್ನಿ ಐಂಡ್ರಿತಾ ಪೋಟೋ ಒಂದನ್ನು ಶೇರ್ ಮಾಡಿದ್ದು ಇದು ಯಾವ ಪ್ರದೇಶ ಎಂದು ಕೇಳಿದ್ದಾರೆ. ಅನೇಕರು ಕೂರ್ಗ್, ಕೊಡಗು ಎಂದು ಉತ್ತರಿಸಿದ್ದರೆ ಇನ್ನು ಕೆಲವರು ತೀರ್ಥಹಳ್ಳಿ ಎಂದಿದ್ದಾರೆ. ದಿಗಂತ್ ಅವರ ಹುಟ್ಟೂರು ಸಹ ತೀರ್ಥಹಳ್ಳಿ.
ನೆನಪಿರಲಿ ಪ್ರೇಮ್ ಗೆ ನಾಯಕಿಯಾಗಿ ಐಂದ್ರಿತಾ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ನೆನಪಿರಲಿ ಪ್ರೇಮ್ ಅಭಿನಯದ 25 ನೇ ಸಿನಿಮಾ ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ರಜಿನಿಕಾಂತ್ 'ದರ್ಬಾರ್'ಗೆ ರಾಜ್ ಪುತ್ರ ವಿಲನ್?
ಪ್ರೇಮಂ ಪೂಜ್ಯಂ ಪ್ರೇಮ್ ಹಾಗೂ ಐಂದ್ರಿತಾಗೆ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ಮೊದಲು ಅತಿರೂಪ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ನಂತರ ಚೌಕ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಪ್ರೇಮಂಪೂಜ್ಯಂ ನಲ್ಲಿ ಮತ್ತೆ ಒಂದಾಗಿದ್ದಾರೆ.