ಖ್ಯಾತ ಲೇಖಕರು ಬರಗೂರು ರಾಮಚಂದ್ರಪ್ಪ ಅವರ ಸೂರ್ಯ ಕಾದಂಬರಿಯನ್ನು ಸಿನಿಮಾ ಮಾಡಿದ್ದರು ಬಿ.ಆರ್.ನಟರಾಜ್| ಕೆಂಪು ನಿಶಾದಿ ಸಿನಿಮಾ ನಿರ್ಮಿಸಿ, ನಿರ್ದೇಶಿಸಿದ್ದ ನಟರಾಜ್| ನಟರಾಜ್ ಅವರ ಅಂತ್ಯಸಂಸ್ಕಾರ ಬಳ್ಳಾರಿ ನಗರದಲ್ಲಿ ನೆರವೇರಿಸಲಾಗಿದೆ|
ಬಳ್ಳಾರಿ(ಸೆ.30): ನಗರದ ಹಿರಿಯ ವಕೀಲ, ನಟ, ನಿರ್ಮಾಪಕ, ನಿರ್ದೇಶಕರೂ ಆಗಿದ್ದ ಬಿ.ಆರ್.ನಟರಾಜ್ (73) ನಿಧನವಾಗಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮಂಗಳವಾರ ಇಹಲೋಕ ತ್ಯಜಿಸಿದರು. ಖ್ಯಾತ ಲೇಖಕ ಬರಗೂರು ರಾಮಚಂದ್ರಪ್ಪ ಅವರ ‘ಸೂರ್ಯ’ ಕಾದಂಬರಿಯನ್ನು ನಟರಾಜ್ ಅವರು 1985ರಲ್ಲಿ ಸಿನಿಮಾ ನಿರ್ಮಿಸಿದ್ದರಲ್ಲದೆ, ಚಿತ್ರದ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬರಗೂರು ರಾಮಚಂದ್ರಪ್ಪ ಅವರು ನಿರ್ದೇಶನ ಮಾಡಿದ್ದರು.
undefined
ಈ ಸಿನಿಮಾಕ್ಕೆ ರಾಜ್ಯಮಟ್ಟದ ಅತ್ಯುತ್ತಮ ಪ್ರಶಸ್ತಿ ಬಂದಿತ್ತು. ಮಾಸ್ಕೋ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವೆಲ್‌ಗೆ ಆಯ್ಕೆಗೊಂಡು, ಪ್ರದರ್ಶನವಾಗಿತ್ತು. ‘ಸೂರ್ಯ’ ಸಿನಿಮಾ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರಿಗೆ ಹೆಸರು ತಂದುಕೊಟ್ಟಿತ್ತಲ್ಲದೆ, ನಿರ್ಮಾಪಕ ನಟರಾಜ್ ಅವರಿಗೆ ಲಾಭ ಮಾಡಿಕೊಟ್ಟಿತ್ತು. ನಂತರದಲ್ಲಿ ನಟರಾಜ್ ಅವರು ಕೆಂಪು ನಿಶಾದಿ ಸಿನಿಮಾ ನಿರ್ಮಿಸಿ, ಕೈ ಸುಟ್ಟುಕೊಂಡಿದ್ದರು.
ಕಾಂಗ್ರೆಸ್ ಶಾಸಕನಿಂದ ಕೋಟಿಗಟ್ಟಲೇ ಅನುದಾನ ಲೂಟಿ..?
‘ಸೂರ್ಯ’ ಸಿನಿಮಾಕ್ಕಾಗಿ ರೋಹಿಣಿ ಹಟ್ಟಿಯಂಗಡಿ ಅವರನ್ನು ಮೊಟ್ಟಮೊದಲ ಬಾರಿಗೆ ಬರಗೂರು ರಾಮಚಂದ್ರಪ್ಪ ಅವರು ಕನ್ನಡಕ್ಕೆ ಕರೆತಂದಿದ್ದರು. ರೋಹಿಣಿ ಹಟ್ಟಂಗಡಿ ಅವರು ಗೌಡತಿ ಪಾತ್ರ ಹಾಗೂ ಖ್ಯಾತ ನಟ ಲೋಕೇಶ್ ಅವರು ಜಮೀನ್ದಾರನ ಪಾತ್ರ ನಿರ್ವಹಿಸಿದ್ದರು. ನಟರಾಜ್ ಅವರ ಅಂತ್ಯಸಂಸ್ಕಾರವನ್ನು ನಗರದಲ್ಲಿ ನೆರವೇರಿಸಲಾಗಿದೆ.
ಬಿ.ಆರ್. ನಟರಾಜ್ ಅವರ ನಿಧನಕ್ಕೆ ನನ್ನ ಸಂತಾಪಗಳು. ಅವರ ಸಾವಿನ ಸುದ್ದಿ ಕೇಳಿ ತುಂಬಾ ಬೇಸರವಾಯಿತು. ನಟರಾಜ್ ಅವರ ನಿರ್ಮಿಸಿದ್ದ ಸೂರ್ಯ ಚಿತ್ರ ನನಗೆ ಹೆಸರು ತಂದಿಕೊಟ್ಟಿತ್ತು ಎಂದು ಖ್ಯಾತ ಲೇಖಕರು ಬರಗೂರು ರಾಮಚಂದ್ರಪ್ಪ ಅವರು ತಿಳಿಸಿದ್ದಾರೆ.