'ನನಗೆ ಆ ಸೀನ್‌ನಲ್ಲಿ ನಟಿಸೋಕೆ ಇಷ್ಟ ಇರ್ಲಿಲ್ಲ, ಹೇಸಿಗೆ ಅನಿಸಿತ್ತು..' ಮೊನಾಲಿಸಾ 'ಸದಾ' ನೇರ ಮಾತು!

By Santosh NaikFirst Published Sep 19, 2023, 6:48 PM IST
Highlights

ಕನ್ನಡದಲ್ಲಿ ಮೊನಾಲಿಸಾ, ಹುಡಗ-ಹುಡುಗಿ, ಶಿವರಾಜ್‌ಕುಮಾರ್‌ ಅವರ ಜೊತೆ ಮೈಲಾರಿ ಚಿತ್ರಗಳಲ್ಲಿ ನಟಿಸಿದ್ದ ನಟಿ ಸದಾ ಚಿತ್ರರಂಗದಲ್ಲಿ 2ನೇ ಇನ್ನಿಂಗ್ಸ್‌ ಆರಂಭಿಸುವ ಪ್ರಯತ್ನದಲ್ಲಿದ್ದರೂ ಅದರಲ್ಲಿ ಯಶಸ್ಸು ಕಾಣುತ್ತಿಲ್ಲ. ಇದರ ನಡುವೆ ಅವರು ತಾವು ಇಷ್ಟವಿಲ್ಲದೆ ನಟಿಸಿದ ಒಂದು ದೃಶ್ಯದ ಬಗ್ಗೆ ಮಾತನಾಡಿದ್ದಾರೆ.
 

ಬೆಂಗಳೂರು (ಸೆ.19): ಸದಾ ಯಾರಿಗೆ ಗೊತ್ತಿಲ್ಲ ಹೇಳಿ. ಒಂದು ಕಾಲದಲ್ಲಿ ದಕ್ಷಿಣ ಭಾರತದ ಎಲ್ಲಾ ಪ್ರಮುಖ ನಾಯಕರ ಜೋಡಿಯಾಗಿ ನಟಿಸಿ ಖ್ಯಾತಿಯ ಉತ್ತುಂಗಕ್ಕೆ ಏರಿದ್ದರು. ಅನೇಕ ಹಿಟ್‌ ಚಿತ್ರಗಳಲ್ಲಿ ಸದಾ ನಟಿಸಿದ್ದರು. ಆದರೆ, ಈಕೆ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದು ಜಯಂ ಎನ್ನುವ ಸಾರ್ವಕಾಲಿಕ ಹಿಟ್‌ ಚಿತ್ರದ ಮೂಲಕ. ತಮ್ಮ ಮೊದಲ ಚಿತ್ರವೇ ಅವಿಸ್ಮರಣೀಯ ಯಶಸ್ಸು ಗಳಿಸಿದ್ದರಿಂದ ಸದಾ ದಕ್ಷಿಣ ಭಾರತದ ಹಾಟ್‌ ನಟಿ ಎನಿಸಿಕೊಂಡರು. ಆ ಬಳಿಕ ವಿಕ್ರಮ್‌ ಅಭಿನಯದ ಅನ್ನಿಯನ್‌ ಚಿತ್ರದಲ್ಲಿ ನಟಿಸಿದ್ದ ಸದಾ, ಅದಲ್ಲಿನ ನಂದಿನಿ ಪಾತ್ರದಿಂದ ಮತ್ತೊಮ್ಮೆ ಜನಮಾನಸಲ್ಲಿ ಉಳಿದುಕೊಂಡರು. ಈ ಹಂತದಲ್ಲಿಯೇ ಸದಾ ಕನ್ನಡದಲ್ಲಿ ಇಂದ್ರಜಿತ್‌ ಲಂಕೇಶ್‌ ಅವರ ಮೊನಾಲಿಸಾ ಚಿತ್ರದ ಮೂಲಕ ಕನ್ನಡಕ್ಕೂ ಪಾದಾರ್ಪಣೆ ಮಾಡಿದ್ದರು. ಅದಲ್ಲದೆ, ದೊಡ್ಡ ಯಶಸ್ಸು ಕೂಡ ಅವರನ್ನು ಇಲ್ಲಿಯೂ ಹಿಂಬಾಲಿಸಿತ್ತು. ಆದರೆ, ಒಂದು ಹಂತದ ಯಶಸ್ಸಿನ ಬಳಿಕ ಸದಾ ಅವರ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮೊದಲಿಂತೆ ಯಶಸ್ಸು ಕಾಣಲಿಲ್ಲ. ಅವಕಾಶಗಳು ಕ್ಷೀಣಿಸುತ್ತಿದ್ದಂತೆ ಸಿನಿಮಾದಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಯಿತು. 2018ರಲ್ಲಿ ಬಿಡುಗಡೆಯಾದ ಟಾರ್ಚ್‌ಲೈಟ್‌ ಅವರ ಕೊನೆಯ ಸಿನಿಮಾ. ಇದು ಬಾಕ್ಸಾಫೀಸ್‌ನಲ್ಲಿ ದಯನೀಯ ವೈಫಲ್ಯ ಕಂಡಿತು. 18ನೇ ವಯಸ್ಸಿಗೆ ಸಿನಿಮಾ ರಂಗಕ್ಕೆ ಕಾಲಿಟ್ಟ ಸದಾ 16 ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರು.

ಇನ್ನು ಸದಾ ಚಿತ್ರರಂಗದಲ್ಲಿ ಉನ್ನತಿ ಕಾಣುವ ಹಂತದಲ್ಲಿಯೇ ಬಂದಿದ್ದ ನಯನತಾರಾ ಈಗ ಅವರಿಗಿಂತ ದೊಡ್ಡ ಮಟ್ಟದ ಯಶಸ್ಸಯ ಕಾಣುತ್ತಿದ್ದಾರೆ. ಮಾಲಿವುಡ್‌ನಲ್ಲಿದ್ದ ಈಕೆ ಬಳಿಕ ಟಾಲಿವುಡ್‌ ಹಾಗೂ ಬಾಲಿವುಡ್‌ಗೂ ಏರಿದ್ದಲ್ಲದೆ, ಲೇಡಿ ಸೂಪರ್‌ಸ್ಟಾರ್‌ ಎನಿಸಿಕೊಂಡಿದ್ದಾರೆ. ಚಿತ್ರರಂಗ ಪ್ರವೇಶಿಸಿದ ನಂತರ ನಾಯಕಿಯರಿಗೆ ಹೆಚ್ಚಿನ ಸವಾಲುಗಳು ಎದುರಾಗುತ್ತವೆ. ಆಗಾಗ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಚಿತ್ರದಲ್ಲಿ ಆ ನಟಿಯನ್ನು ಯಾರೂ ಬೆಂಬಲಿಸುವುದಿಲ್ಲ ಎನ್ನುವುದು ವಾಸ್ತವ.

ಸಿನಿಮಾ ಕ್ಷೇತ್ರವೇ ಒಂದು ಮಾಯಾಲೋಕ. ಅನೇಕ ನಟಿಯರು ತಮಗೆ ಇಷ್ಟವಿಲ್ಲದ ದೃಶ್ಯಗಳನ್ನು ಮಾಡುತ್ತಾ ಹಲವಾರು ಕಷ್ಟಗಳನ್ನು ಅನುಭವಿಸಿ ಇದು ಈ ಹಂತಕ್ಕೆ ಬೆಳೆದಿದ್ದಾರೆ. ಸದಾ ಇಂತಹ ಕೆಟ್ಟ ಅನುಭವಗಳನ್ನು ಅನುಭವಿಸಿದ್ದಾರೆ. ನಾಯಕಿ ಯಾವಾಗಲೂ ತನಗೆ ಸಂಭವಿಸಿದ ಅಂತಹ ಘಟನೆಯ ಬಗ್ಗೆ ಬಹಿರಂಗಪಡಿಸುವುದು ಬಹಳ ಅಪರೂಪ. ಆದರೆ, ಸದಾ ಈ ವಿಚಾರದಲ್ಲಿ ಭಿನ್ನ.

ತನಗೆ ಒಂಚೂರು ಇಷ್ಟವಿಲ್ಲದ ದೃಶ್ಯವೊಂದರಲ್ಲಿ ನಟಿಸುವಂತೆ ನಿರ್ದೇಶಕರು ಒತ್ತಾಯ ಹಾಕಿದ್ದರು ಎಂದು ಸದಾ ಹೇಳಿದ್ದಾರೆ. ಸಾಕಷ್ಟು ಹೀರೋ ಹಾಗೂ ಹೀರೋಯಿನ್‌ರನ್ನು ಸ್ಟಾರ್‌ ಆಗಿ ಮಾಡಿದ ನಿರ್ದೇಶಕ ತೇಜಾ ವಿರುದ್ಧ ಸದಾ ಇಂಥದ್ದೊಂದು ಆರೋಪ ಮಾಡಿದ್ದಾರೆ. ಸದಾ ಅವರು ನಟಿಸಿದ್ದ ಮೊಟ್ಟಮೊದಲ ಚಿತ್ರ ಜಯಂನ ನಿರ್ದೇಶಕ ತೇಜ. ಈ ಚಿತ್ರದಲ್ಲಿ ನಿತಿನ್‌ ಹೀರೋ ಆಗಿದ್ದರು. ಆಲ್‌ ಟೈಮ್‌ ಬ್ಲಾಕ್‌ಬಸ್ಟರ್‌ ಆಗಿದ್ದ ಈ ಸಿನಿಮಾದ ಒಂದು ದೃಶ್ಯ ಈಗಲೂ ತಮಗೆ ಕಾಡುತ್ತಿದೆ ಎಂದಿರುವ ಸದಾ, ಆ ದೃಶ್ಯವನ್ನು ನಾನು ಜೀವಮಾನಪೂರ್ತಿ ಮರೆಯೋದಿಲ್ಲ ಎಂದು ಹೇಳಿದ್ದಾರೆ. 

ಚಿತ್ರದ ಒಂದು ದೃಶ್ಯದಲ್ಲಿ ಸದಾ, ನಿತಿನ್‌ ಹಾಗೂ ಗೋಪಿಚಂದ್‌ ಮೂವರು ಇದ್ದರು. ಈ ಚಿತ್ರದಲ್ಲಿ ಗೋಪಿಚಂದ್‌ ವಿಲನ್‌ ಆಗಿ ನಟಿಸಿದ್ದರು. ಒಂದು ಸಮಯದಲ್ಲಿ ನನಗೆ ಒಂಚೂರು ಇಷ್ಟವಿಲ್ಲದ ದೃಶ್ಯದಲ್ಲಿ ನಟಿಸಲೇಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಸದಾ ಹೇಳಿದ್ದಾರೆ. ಒಂದು ಸೀನ್‌ನಲ್ಲಿ ಗೋಪಿಚಂದ್‌ ನನ್ನ ಕೆನ್ನೆಯನ್ನು ನಾಲಿಗೆಯಿಂದ ನೆಕ್ಕುತ್ತಾರೆ. ಚಿತ್ರದ ಚಿತ್ರೀಕರಣ ಮಾಡುವಾಗ ಈ ದೃಶ್ಯದಲ್ಲಿ ನಾನು ನಟಿಸೋದೇ ಇಲ್ಲ ಎಂದು ಸಾಕಷ್ಟು ಬಾರಿ ಹೇಳಿದ್ದಲ್ಲದೆ, ಬೇಕಿದ್ದಲ್ಲಿ ನಾನು ಚಿತ್ರದಿಂದ ಬೇಕಾದರೆ ಹೊರಹೋಗಲು ಸಿದ್ಧ ಎಂದು ಚಿತ್ರತಂಡಕ್ಕೆ ಹೇಳಿದ್ದೆ ಎಂದಿದ್ದಾರೆ.

Latest Videos

ಬೆಡ್‌ರೂಮ್‌ ಸೀನ್‌ಗಾಗಿಯೇ 1 ಕೋಟಿ ಜಾಸ್ತಿ ಸಂಭಾವನೆ ಕೇಳಿದ್ರಾ ತಮನ್ನಾ?

ಆದರೆ, ನಿರ್ದೇಶಕರಾಗಿದ್ದ ತೇಜ ಯಾವುದನ್ನೂ ಕೇಳಲಿಲ್ಲ.  ಈ ದೃಶ್ಯವೇ ಚಿತ್ರದಲ್ಲಿ ಹೈಲೈಟ್‌ ಆಗಿರಲಿದೆ ಎಂದಿದ್ದರು. ಇನ್ನು ಗೋಪಿಚಂದ್‌ ಅವರಿಗೂ ಈ ದೃಶ್ಯದಲ್ಲಿ ನಟಿಸಲು ಇಷ್ಟವಿರಲಿಲ್ಲ. ಅವರು ಕೂಡ ನಿರ್ದೇಶಕರಿಗೆ ಹೇಳಿದರು. ಆದರೆ, ಅವರ ಮಾತನ್ನೂ ತೇಜ ಕೇಳಿರಲಿಲ್ಲ. ಆ ದೃಶ್ಯದ ಬಳಿಕ ನಾನು ಬಹುಶಃ 10 ಸಾರಿ ಮುಖ ತೊಳೆದುಕೊಂಡಿದ್ದೆ. ಮನಸ್ಸಿಗೆ ಸಾಕಷ್ಟು ನೋವು ಕೂಡ ಆಗಿತ್ತು ಎಂದಿದ್ದಾರೆ.

'ಒಂದ್‌ ಗ್ಲಾಸ್‌ ಕೋಲಾ ಕುಡಿಯೋಕೆ ಅಲ್ಲಿಗೆ ಹೋಗಿದ್ಯಲ್ಲ..' ಸೋನು ಗೌಡ ಫಾರಿನ್‌ ಟ್ರಿಪ್‌ಗೆ ಭಯಂಕರ ಕಾಮೆಂಟ್ಸ್‌!

ಆಗಲೂ ಟಿವಿಯಲ್ಲಿ ಆ ದೃಶ್ಯವನ್ನು ನೋಡಿದಾಗ ದುಃಖವಾಗುತ್ತದೆ ಎಂದು ಸದಾ ಸೇರಿಸಿದರು. 39 ವರ್ಷದ ಸದಾ ಇನ್ನೂ ಒಂಟಿ. ಮದುವೆಯ ಬಗ್ಗೆ ಕೇಳಿದರೆ, ಮದುವೆಯಾಗುವುದು ಕೆಲವು ದಿನಗಳ ನಂತರ ಮುರಿದು ಬೀಳುವುದು. ಅದಕ್ಕೆ ಯಾಕಾಗಿ ಮದುವೆಯಾಗಬೇಕು ಎಂದು ಉತ್ತರಿಸಿದ್ದಾರೆ.

click me!