ಮಹಿಳೆಯರೇ ಸೇರಿಕೊಂಡು ಒಂದು ಕೊಠಡಿ ಕ್ಲೀನ್, ಚಿಕ್ಕಮಗಳೂರು ತಾಲೂಕಿನ ಸರಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಾದರಿ ನಡೆ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ನ.19): ಸರ್ಕಾರಿ ಶಾಲೆಯ ಅಭಿವೃದ್ಧಿಗಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತೆ. ಆದರೆ ಅನುದಾನ ಸದುಪಯೋಗ ಆಗುವುದು ಬಹಳನೇ ವಿರಳ. ಇಲ್ಲಿಯೂ ಕೂಡ ಅದೇ ಆಗಿದೆ. ಕೊಠಡಿಗಳಿಗೆ ಬಣ್ಣ ಕಾಣದೆ ಹಲವು ದಶಕಗಳೇ ಕಳೆದಿತ್ತು. ಸುತ್ತಮುತ್ತಲಿನ ಪರಿಸರವೂ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾರಕವಾಗಿತ್ತು. ಇದನ್ನು ಅರಿತ ಪೋಷಕರು, ಗ್ರಾಮಸ್ಥರು ಶಾಲೆಗೆ ಹೊಸರ ರೂಪವನ್ನು ನೀಡಿದ್ದಾರೆ. ತಮ್ಮೂರಿನ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ವಾತಾವರಣ ಇರಲಿ ಎನ್ನುವ ಸದುದ್ದೇಶದಿಂದ ಗ್ರಾಮದ ಮಹಿಳೆಯರೇ ಸೇರಿಕೊಂಡು ಶಾಲೆಗೆ ಹೊಸ ರೂಪ ನೀಡಿದ್ದಾರೆ. ಹೌದು ಚಿಕ್ಕಮಗಳೂರು ತಾಲೂಕಿನ ಸರಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಇಂತಹ ಮಹತ್ವದ ಕಾರ್ಯವನ್ನು ಮಾಡಲಾಗಿದೆ.
ಸುಣ್ಣ-ಬಣ್ಣ ಬಳಿದು ಫುಲ್ ನವವಧುವಿನಂತೆ ಸಿಂಗಾರ
ಸರಪನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕಸ-ಧೂಳು ಹೆಚ್ವಿತ್ತು. ಶಾಲೆಯ ಅಕ್ಕಪಕ್ಕದ ವಾತಾವರಣವೂ ಹಾಳಾಗಿತ್ತು ಎಂದು ಹಳ್ಳಿಯ ಮಹಿಳೆಯರು ಶಾಲೆಯನ್ನ ಕ್ಲೀನ್ ಮಾಡಿ, ಸುಣ್ಣ-ಬಣ್ಣ ಬಳಿದು ಫುಲ್ ನವವಧುವಿನಂತೆ ಸಿಂಗರಿಸಿದ್ದಾರೆ.ಮಕ್ಕಳು ಸರಸ್ವತಿ ಪೂಜೆ ಮಾಡೋಕೆಂದು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಈ ವೇಳೆ ಊರಿನ ಮಹಿಳೆಯರು ಶಾಲೆ ಇಷ್ಟೊಂದು ಗಲೀಜಾಗಿದೆ ಅಂತ ಹಳ್ಳಿ ಮನೆಗಳು, ಹೊಲ-ಗದ್ದೆ-ತೋಟದ ಅಂತ ಕೆಲಸದ ಮಧ್ಯೆಯೂ ತಮ್ಮೂರಿನ ಶಾಲೆಯನ್ನ ಶುಚಿ ಮಾಡಿ, ಬಣ್ಣ ಬಳಿದು ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆ ಮಕ್ಕಳ ಊಟಕ್ಕೆ ಹುಳುಬಿದ್ದ ಅಕ್ಕಿ, ಬೇಳೆ ಬಳಕೆ
ಮಹಿಳೆಯರೇ ಸೇರಿಕೊಂಡು ಒಂದು ಕೊಠಡಿಗೆ ಬಣ್ಣ
ಈ ಶಾಲೆಯಲ್ಲಿ ಪ್ರತಿ ತಿಂಗಳು ಸರಸ್ವತಿ ಪೂಜೆ ಮಾಡುತ್ತಾರೆ. ಅದಕ್ಕಾಗಿ ಹಣವನ್ನೂ ಕಲೆಕ್ಟ್ ಮಾಡುತ್ತಾರೆ. ಹೀಗೆ ಸರಸ್ವತಿ ಪೂಜೆಗೆಂದು ಬಂದ ಹಣದಲ್ಲಿ ಬಹಳ ವರ್ಷದಿಂದ ಸುಣ್ಣ-ಬಣ್ಣ ಕಾಣದ ಶಾಲೆಯನ್ನ ನೀಟ್ ಮಾಡಿದ್ದಾರೆ. ಶಾಲೆಯಲ್ಲಿ ಮಕ್ಕಳು ಚೆನ್ನಾಗಿದ್ದಾರೆ. ಬಿಸಿಯೂಟ, ಮೊಟ್ಟೆ ಕೊಡುತ್ತಾರೆ. ಆದರೆ, ಶಾಲಾ ಆವರಣ ಚೆನ್ನಾಗಿರಲಿ. ಮಕ್ಕಳು ಅವಕ್ಕೆ ಗೊತ್ತಾಗಲ್ಲ ಎಂದು ಪೋಷಕರೇ ಬಂದು ಶಾಲೆಯನ್ನ ನೀಟ್ ಮಾಡಿದ್ದೇವೆ. ಸೊಳ್ಳೆಗಳು ಇರುತ್ತೆ. ನಮ್ಮ ಮಕ್ಕಳನ್ನ ಇಲ್ಲಿಗೆ ಕಳಿಸಿ ಹೇಗೆ ಬೇಕು ಹಾಗೆ ನೋಡಲು ಮನಸ್ಸಾಗಲಿಲ್ಲ. ಸೊಳ್ಳೆಗಳು ಕಚ್ಚುತ್ತವೇ. ಅದಕ್ಕೆ ನಾವೇ ಬಂದು ಶಾಲೆಯನ್ನ ಕ್ಲೀನ್ ಮಾಡಿದ್ದೇವೆ ಅಂತಾರೆ ಪೋಷಕರಾದ ದ್ರಾಕ್ಷಾಯಿಣಿ.
ಒಟ್ಟಾರೆ, ನಿಜಕ್ಕೂ ಈ ಕಾರ್ಯ ಇಡೀ ರಾಜ್ಯಕ್ಕೆ ಮಾದರಿ. ಖಾಸಗಿ ಶಾಲೆಗಳಾದ್ರೆ ಸೇರುವ ಮುನ್ನವೇ ಅಭಿವೃದ್ಧಿ ಹೆಸರಲ್ಲಿ ಹಣವನ್ನ ಪೀಕಿರ್ತಾವೆ. ಆದ್ರೆ, ಸರ್ಕಾರಿ ಶಾಲೆಯಲ್ಲಿ ಸರ್ಕಾರವೇ ಮಾಡಬೇಕು. ಇವ್ರು ಸರ್ಕಾರದ ದಾರಿ ಕಾಯದೆ ತಾವೇ ನಮ್ಮೂರ ಶಾಲೆ ನೀಟ್ ಇರ್ಲಿ ಅಂತ ಕ್ಲೀನ್ ಮಾಡಿದ್ದಾರೆ. ಶಾಲೆಯ ವಾತಾವರಣ ಶುಚಿಯಾಗಿದ್ದರೆ. ಮಕ್ಕಳ ಮನಸ್ಸು ಚೆನ್ನಾಗಿರುತ್ತೆ. ಓದು ಚೆನ್ನಾಗಿ ತಲೆಗೆ ಹತ್ತುತ್ತೆ. ಹಾಗಾಗಿ, ಊರಿನ ಮಹಿಳೆಯರೇ ಸೇರಿ ತಮ್ಮೂರಿನ ಶಾಲೆಗೆ ಹೊಸ ರೂಪ ನೀಡಿದ್ದಾರೆ.