ದೇಶದಲ್ಲೇ ಮೊದಲು: ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕದಲ್ಲಿ ಜಾರಿ, ಅಶ್ವತ್ಥ್‌

By Kannadaprabha News  |  First Published Aug 8, 2021, 7:17 AM IST

* ಈ ನೀತಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ
* ಉನ್ನತ ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಸಹಿ ಹಾಕಿದ ಅಶ್ವತ್ಥ್‌
* ಯಾವುದೇ ಹಂತದಲ್ಲಿ ಪದವಿ ಶಿಕ್ಷಣ ಮೊಟಕುಗೊಳಿಸಿದರೂ ಸಿಗಲಿದೆ ಪ್ರಮಾಣ ಪತ್ರ
 


ಬೆಂಗಳೂರು(ಆ.08): ಬಹು ನಿರೀಕ್ಷಿತ ನೂತನ ಯನ್ನು 2021-22ನೇ ಸಾಲಿನಿಂದಲೇ ರಾಜ್ಯದಲ್ಲಿ ಜಾರಿಗೊಳಿಸುವ ಆದೇಶಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ್‌ ನಾರಾಯಣ ಅವರು ಸಹಿ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕವು ಹೊಸ ಶಿಕ್ಷಣ ನೀತಿಯನ್ನು ಅತಿ ವೇಗವಾಗಿ ಅನುಷ್ಠಾನಗೊಳಿಸುತ್ತಿರುವ ಮೊದಲ ರಾಜ್ಯವೆನಿಸಿದೆ.

ಇದರೊಂದಿಗೆ ಇನ್ಮುಂದೆ ಒಂದು ವರ್ಷ ಪದವಿ ಅಧ್ಯಯನ ಮಾಡಿ ಕಾರಣಾಂತರಗಳಿಂದ ಯಾವುದೇ ವಿದ್ಯಾರ್ಥಿ ವ್ಯಾಸಂಗ ಮೊಟಕುಗೊಳಿಸಿದರೂ ಆ ಒಂದು ವರ್ಷ ಅಧ್ಯಯನಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ, ಎರಡು ವರ್ಷಕ್ಕೆ ಮೊಟಕುಗೊಳಿಸಿದವರಿಗೆ ಡಿಪ್ಲೊಮಾ ಮತ್ತು ಮೂರು ವರ್ಷ ಪೂರ್ಣಗೊಳಿಸಿದವರಿಗೆ ಪದವಿ ದೊರೆಯಲಿದೆ. ಅಲ್ಲದೆ, ಪದವಿ ಮೊಟಕಾದ ಹಂತದಿಂದಲೇ ಮುಂದೆ ಯಾವಾಗ ಬೇಕಾದರೂ ಅಧ್ಯಯನ ಆರಂಭಿಸಲು ಅವಕಾಶ ದೊರೆಯಲಿದೆ. ಪದವಿಯಲ್ಲಿ ಎರಡು ಐಚ್ಛಿಕ ವಿಷಯಗಳ ಜತೆಗೆ ಕನ್ನಡ ಮತ್ತು ಮತ್ತೊಂದು ಭಾಷಾ ವಿಷಯವನ್ನು ಅಧ್ಯಯನ ಮಾಡಬೇಕಾಗುತ್ತದೆ.

Tap to resize

Latest Videos

undefined

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸಚಿವರಿಗೆ ಶನಿವಾರ ಖಾತೆ ಹಂಚಿಕೆಯಾದ ಬೆನ್ನಲ್ಲೇ ಡಾ.ಅಶ್ವತ್‌್ಥ ನಾರಾಯಣ ಅವರು ಕೂಡ ತಮಗೆ ದೊರೆತ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ವಹಿಸಿಕೊಂಡರು. ರಾಜ್ಯದಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ಈ ಹಿಂದೆಯೂ ಇದೇ ಇಲಾಖೆಯಲ್ಲಿ ನಿರಂತರ ಪ್ರಯತ್ನ ನಡೆಸಿದ್ದ ಅವರು ಇದೀಗ ಮತ್ತೆ ಈ ಇಲಾಖೆಯ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಮಹತ್ವದ ಆದೇಶಕ್ಕೆ ಸಹಿ ಹಾಕಿದರು.

ರೈತರ ಮಕ್ಕಳಿಗೆ ಸಿಹಿ ಸುದ್ದಿ: ಬೊಮ್ಮಾಯಿ ಘೋಷಿಸಿದ್ದ ಯೋಜನೆ ಜಾರಿಗೆ

ತಮ್ಮ ಗೃಹ ಕಚೇರಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತ ಪಿ.ಪ್ರದೀಪ್‌ ಮತ್ತಿತರ ಉನ್ನತ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿದ ನಂತರ ಅವರು ಈ ಆದೇಶಕ್ಕೆ ಅಸ್ತು ಎಂದರು.

ಹೊಸ ನೀತಿಯಲ್ಲೇನಿದೆ?:

ನಂತರ ಹೊಸ ನೀತಿಯ ಬಗ್ಗೆ ವಿವರಣೆ ನೀಡಿದ ಅಶ್ವತ್ಥ ನಾರಾಯಣ ಅವರು, ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಅವುಗಳ ಸಂಯೋಜಿತ ಕಾಲೇಜುಗಳಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಸಕ್ತ ಸಾಲಿನಿಂದಲೇ ಜಾರಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು ಅದರ ಅನುಸಾರ ಅನುಷ್ಠಾನಗೊಳಿಸಲು ಆದೇಶಿಸಲಾಗಿದೆ. ಆ ಪ್ರಕಾರ ಬಿ.ಎ. ಅಥವಾ ಬಿ.ಎಸ್ಸಿ ಪದವಿ ಅಧ್ಯಯನದಲ್ಲಿ ಆಯಾ ಕಾಲೇಜಿನಲ್ಲಿ ಲಭ್ಯವಿರುವ ಎರಡು ಐಚ್ಛಿಕ ವಿಷಯಗಳನ್ನು (ಡಿಸಿಪ್ಲಿನ್‌ ಕೋರ್‌) ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೂರನೆ ವರ್ಷದ ಆರಂಭದಲ್ಲಿ ಒಂದು ವಿಷಯವನ್ನು ಮೇಜರ್‌ ಆಗಿಯೂ, ಇನ್ನೊಂದು ವಿಷಯವನ್ನು ಮೈನರ್‌ ವಿಷಯವನ್ನಾಗಿ ಅಥವಾ ಎರಡೂ ವಿಷಯಗಳನ್ನು ಮೇಜರ್‌ ಆಗಿ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಬಹುದು. ಇವುಗಳ ಜತೆಗೆ, ಕನ್ನಡ ಮತ್ತು ಇನ್ನೊಂದು ಭಾಷಾ ವಿಷಯವನ್ನು, ಪ್ರೋಗ್ರಾಮ್‌ ವಿನ್ಯಾಸಕ್ಕೆ (ಕರಿಕ್ಯುಲಮ್‌ ಸ್ಟ್ರಕ್ಚರ್‌) ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು.

ಪಿಯುಸಿ ಅಥವಾ 10+2 ಹಂತದಲ್ಲಿ ಕನ್ನಡ ಕಲಿಯದವರಿಗೆ ಅಥವಾ ಕನ್ನಡ ಮಾತೃ ಭಾಷೆಯಲ್ಲದವರಿಗೆ ಕನ್ನಡದ ಬೇರೆ ಪಠ್ಯಕ್ರಮ ರೂಪಿಸಿ ಬೋಧಿಸಲು ಅವಕಾಶ ನೀಡಲಾಗಿದ್ದು, ಮಾತೃಭಾಷೆ ಕಲಿಕೆಗೆ ಈ ನೀತಿಯಲ್ಲಿ ಹೆಚ್ಚು ಮಹತ್ವ ನೀಡಲಾಗಿದೆ ಎಂದು ಹೇಳಿದರು.

ಬಿ.ಕಾಂ, ಬಿಸಿಎ, ಬಿಬಿಎ, ವಿಬಿಎ ಸೇರಿದಂತೆ ವಿಷಯಾಧಾರಿತ ಪದವಿ ಅಧ್ಯಯನದಲ್ಲಿ ವಿಷಯಗಳನ್ನು ಬಹುಶಿಸ್ತೀಯ ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಅವರು ಹಾಗೂ ಮತ್ತೊಂದು ಭಾಷೆ ಮತ್ತು ಪಠ್ಯಕ್ರಮಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬೇಕು. ಮೂರು ವರ್ಷದ ಪದವಿ ಅಧ್ಯಯನ ವೇಳೆ ಯಾವುದೇ ವರ್ಷದ ಅಧ್ಯಯನ ಪೂರ್ಣಗೊಂಡ ಬಳಿಕ ಮೊದಲ ವರ್ಷಕ್ಕೆ ಪ್ರಮಾಣ ಪತ್ರ, ಎರಡನೇ ವರ್ಷಕ್ಕೆ ಡಿಪ್ಲೊಮಾ, ಮೂರನೇ ವರ್ಷಕ್ಕೆ ಪದವಿ ಪ್ರಮಾಣ ಪತ್ರ ನೀಡಲು ಅವಕಾಶವಿದೆ. ಮೊಟಕುಗೊಳಿಸಿದವರು ಯಾವಾಗ ಬೇಕಾದರೂ ಮತ್ತೆ ಅಧ್ಯಯನ ಮುಂದುವರೆಸಬಹುದು. ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡುತ್ತಿರುವ ಮಹಾವಿದ್ಯಾಲಯದಲ್ಲಿ ನಾಲ್ಕನೇ ವರ್ಷದ ಅಧ್ಯಯನ ಲಭ್ಯವಿದ್ದಲ್ಲಿ ರಾಷ್ಟ್ರೀಯ ಕುಶಲತೆಯ ಅರ್ಹತಾ ಚೌಕಟ್ಟಿನಲ್ಲಿ ಆಯ್ಕೆ ಮಾಡಿದ ಐಚ್ಛಿಕ ವಿಷಯಗಳ ಅಧ್ಯಯನ ಮುಂದುವರೆಸಿ ಅಧ್ಯಯನ ಪೂರ್ಣಗೊಳಿಸಿದರೆ ಸ್ನಾತಕ ಹಾನರ್ಸ್‌ ಪದವಿ ಪಡೆಯಬಹುದು. ನಾಲ್ಕನೇ ವರ್ಷದಲ್ಲಿ ಸಂಶೋಧನೆಯು ಅಧ್ಯಯನದ ಭಾಗವಾದರೆ, ಅಂತಹ ಸ್ನಾತಕ ಹಾನರ್ಸ್‌ ಪದವೀಧರರು ನೇರವಾಗಿ ಡಾಕ್ಟರೇಟ್‌ (ಪಿಎಚ್‌ಡಿ) ಪದವಿ ಅಧ್ಯಯನಕ್ಕೆ ಸೇರಲು ಅರ್ಹರು ಎಂದು ತಿಳಿಸಿದರು.

ಒಂದು ವೇಳೆ ವಿದ್ಯಾರ್ಥಿಯು ಅಧ್ಯಯನ ಮಾಡುತ್ತಿರುವ ಕಾಲೇಜಿನಲ್ಲಿ ಸ್ನಾತಕ ಹಾನರ್ಸ್‌ ಪದವಿ ಲಭ್ಯವಿಲ್ಲದಿದ್ದರೆ, ಬೇರೊಂದು ಕಾಲೇಜಿನಲ್ಲಿ ಅಧ್ಯಯನ ಮುಂದುವರೆಸಬಹುದು ಎಂದು ತಿಳಿಸಿದರು.

ಬೆಂಗಳೂರಿನ ಮಲ್ಲೇಶ್ವರದಲ್ಲಿ ಮಹಿಳಾ ಪದವಿ ಕಾಲೇಜು

ಬೆಂಗಳೂರಿನ ಮಲ್ಲೇಶ್ವರದ 13ನೇ ಕ್ರಾಸ್‌ನಲ್ಲಿರುವ ಪಿಯುಸಿ ಕಾಲೇಜು ಆವರಣದಲ್ಲಿ ನೂತನ ಮಹಿಳಾ ಪದವಿ ಕಾಲೇಜು ಆರಂಭಿಸುವ ಮತ್ತೊಂದು ಆದೇಶಕ್ಕೂ ಡಾ.ಅಶ್ವತ್ಥನಾರಾಯಣ ಸಹಿ ಹಾಕಿದರು.
 

click me!