ಜು. 19 ಹಾಗೂ 22ಕ್ಕೆ SSLC ಪರೀಕ್ಷೆ: ಯಾವ ಪರೀಕ್ಷೆ ಯಾವಾಗ? ಇಲ್ಲಿದೆ ಮಾಹಿತಿ

By Suvarna News  |  First Published Jun 28, 2021, 1:14 PM IST

* ಕೊರೋನಾ ಹಾವಳಿ ಮಧ್ಯೆ ಸ್ಥಗಿತಗೊಂಡ ಶಾಲೆ

* SSLC ಪರೀಕ್ಷೆ ಬಗ್ಗೆ ಸಭೆ ನಡೆಸಿದ ಸುರೇಶ್ ಕುಮಾರ್

* ಸುದ್ದಿಗೋಷ್ಠಿ ನಡೆಸಿ ಸಭೆಯ ಬಗ್ಗೆ ಮಾಹಿತಿ ಕೊಟ್ಟ ಸುರೇಶ್ ಕುಮಾರ್


ಬೆಂಗಳೂರು(ಜೂ.28): ಕೊರೋನಾ ಹಾವಳಿ ಮಧ್ಯೆ ಶಿಕ್ಷಣ ಕ್ಷೇತ್ರ ಬಹಳಷ್ಟು ನಲುಗಿದೆ. ಹೀಗಿರುವಾಗ ಸರ್ಕಾರ ಈ ಸಮಸ್ಯೆ ನೀಗಿಸಲು ಯತ್ನಿಸುತ್ತಿದ್ದಾರೆ. ಸದ್ಯ ಈ ನಿಟ್ಟಿನಲ್ಲಿ ಸಚಿವ ಸುರೇಶ್ ಕುಮಾರ್ ಡಿಸಿ ಹಾಗೂ ಶಿಕ್ಷಣ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ SSLC ಪರೀಕ್ಷೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಪರೀಕ್ಷೆ ಜುಲೈ 19 ಹಾಗೂ 22ರಂದು ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಕ್ಕಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಎರಡು ದಿನಗಳ ಪರೀಕ್ಷೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಸೆಕ್ಷ 144 ಜಾರಿಯಲ್ಲಿರಲಿದೆ ಎಂದಿದ್ದಾರೆ.

Tap to resize

Latest Videos

undefined

ಯಾವ ಪರೀಕ್ಷೆ ಯಾವಾಗ?

ಜುಲೈ 19: ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ

ಜುಲೈ 22: ಕನ್ನಡ, ಇಂಗ್ಲೀಷ್, ಹಿಂದಿ ಪರೀಕ್ಷೆ

ಸುದ್ದಿಗೋಷ್ಠಿಯ ಪ್ರಮುಖ ಅಂಶಗಳು:

* ಕಳೆದ ಬಾರಿ ಆರು ದಿನ ಪರೀಕ್ಷೆ ನಡೆಸಲಾಗಿತ್ತು. ಯಾವುದೇ ಅವಘಡ ಇಲ್ಲದೇ ಇವು ನಡೆದಿದ್ದವು. ಆದರೆ ಈ ಬಾರಿ ವಿಶೇಷ ಪರಿಸ್ಥಿತಿಯಲ್ಲಿ ಇದನ್ನು ನಡೆಸಲಾಗುತ್ತದೆ. 

* ಮಕ್ಕಳಿಗೆ ಮುಂದಿನ ಶಿಕ್ಷಣದಲ್ಲಿ ಆತ್ಮವಿಶ್ವಾಸ ಮೂಡಿಸಲು ಈ ಪರೀಕ್ಷೆ ನಡೆಸಲಾಗುತ್ತಿದೆ.

* ಈ ಬಾರಿ ಎರಡು ದಿನ ಪರೀಕ್ಷೆ ನಡೆಯುತ್ತದೆ. ಮೊದಲ ದಿನ ಕೋರ್ ಸಬ್ಜೆಕ್ಟ್, ಗಣಿತ, ಸಮಾಜ ವಿಜ್ಞಾನ ಹಾಗೂ ವಿಜ್ಞಾನ ಪರೀಕ್ಷೆ ನಡೆಯುತ್ತದೆ. ಜುಲೈ 19ರಂದು ನಡೆಯಲಿದೆ 10.30ರಿಂದ 1.30ವರೆಗೆ ನಡೆಯಲಿದೆ

* ಎರಡನೇ ದಿನ ಭಾಷಾ ವಿಷಯ ಕನ್ನಡ, ಇಂಗ್ಲೀಷ್, ಹಿಂದಿ ಪರೀಕ್ಷೆ ನಡೆಯಲಿದೆ. ಇದು ಜುಲೈ 22ಕ್ಕೆ ನಡೆಯಲಿದೆ

* ಬಹು ಆಯ್ಕೆಯು ಪ್ರಶ್ನೆಗಳು ಇರಲಿವೆ. OMR ಶೀಟ್‌ನಲ್ಲಿ ಉತ್ತರಿಸಬೇಕು. 

ಪರೀಕ್ಷಾ ಕೇಂದ್ರದ ಸುತ್ತಮುತ್ತ ಪರೀಕ್ಷೆ ದಿನ 144 ಸೆಕ್ಷನ್ ಜಾರಿಯಲ್ಲಿರುತ್ತದೆ.

ಶಾಲೆಗಳ ಮುಖ್ಯಸ್ಥರು ಜೂನ್ 30 ರಂದು ಹಾಲ್ ಟಿಕೆಟ್ ನೀಡಲಾಗುತ್ತೆ

* ಪರೀಕ್ಷಾ ಕೆಂದ್ರದತ್ತ ಪೋಷಕರು ಮಕ್ಕಳನ್ನು ಕರೆತರುವಾಗ ಜನಜಂಗುಳಿಯಾಗಬಾರದೆಂದು, ವಾಹನದಿಂದ ಟ್ರಾಫಿಕ್ ಆಗಬಾರದೆಂಬ ನಿಟ್ಟಿನಲ್ಲಿ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುತ್ತದೆ.

* ಈ ಬಾರಿ ಯಾವ ಮಕ್ಕಳು ತಂದೆ, ತಾಯಿ ಜೊತೆ ಬೇರೆ ಸ್ಥಳಕ್ಕೆ ತೆರಳಿದ್ದಾರೆ. ಅವರಿಗೆ ತಮ್ಮ ಮನೆ ಬಳಿ ಇರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. 

* ಮಕ್ಕಳ ಪರೀಕ್ಷಾ ಕೇಂದ್ರವಾಗಿರದೆ, ಸುರಕ್ಷಾ ಕೇಂದ್ರವಾಗಲಿದೆ.

* ಎಲ್ಲಾ‌ ಮಕ್ಕಳು ಕಡ್ಡಾಯವಾಗಿ ‌ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬೇಕು. ಉಚಿತವಾಗಿ ಎನ್ 95 ಮಾಸ್ಕ್ ಕೊಡಲಾಗುತ್ತೆ.

* ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಆರೋಗ್ಯ ತಪಾಸಣಾ ಕೊಠಡಿ ಇರಲಿದೆ

* ಪಾಸಿಟಿವ್ ಬಂದ ವಿದ್ಯಾರ್ಥಿ ಪರೀಕ್ಷೆ ಬರೆಯಲು ಅವಕಾಶ ಕೊಡಲಾಗಿದೆ. ಕೆಮ್ಮು, ಜ್ವರ ಇದ್ರೆ ಅಂತ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ

* ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ

* ಪರೀಕ್ಷಾ ‌ಕಾರ್ಯದಲ್ಲಿ ಭಾಗವಹಿಸಲು, ಕೆಲ ಸ್ವಯಂ ಸೇವಾ ಸಂಘಟನೆಗಳು ಮುಂದೆ ಬಂದಿವೆ.

* ಪಶ್ನೆ ಪತ್ರಿಕೆ ಹಾಗು ಉತ್ತರ ಪತ್ರಿಕೆ ತೆಗೆದುಕೊಂಡು ಹೋಗಲು ಪೊಲೀಸ್ ಇಲಾಖೆ ತಯಾರಾಗಿದೆ

​​​​​​​* ಪೊಲೀಸರು ಎಲ್ಲಾ ರೀತಿಯಲ್ಲಿ ಸಿದ್ದತೆ ನಡೆಸಿದ್ದಾರೆ, ಪೇಪರ್ ಲೀಕ್ ಆಗದಂತೆ ಎಚ್ಚರ ವಹಿಸಲಾಗಿದೆ. ಪರೀಕ್ಷಾ ಪೇಪರ್ ಬಹಳಾ ಸರಳವಾಗಿದೆ

​​​​​​​* ಆರಾಮಾದಾಯಕವಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು

​​​​​​​* ಎಲ್ಲಾ ಸೆಂಟರ್ ಗಳ ಬಳಿ 8:30ಕ್ಕೆ ವಿದ್ಯಾರ್ಥಿಗಳು ಹಾಜರು ಇರಬೇಕು.

* ಗಡಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ವಿಶೇಷ ಸಿದ್ಧತೆ

* 8.75 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಭಾಗಿಯಾಗುತ್ತಿದ್ದಾರೆ, 73 ಸಾವಿರದ 660 ಕೇಂದ್ರಗಳಲ್ಲಿ ನಡೆಯಲಿದೆ. ಕಳೆದ ಬಾರಿ 8 ಲಕ್ಷದ 46 ಸಾವಿರ ಮಕ್ಕಳು ಪರೀಕ್ಷೆ ಬರೆದಿದ್ದರು.

​​​​​​​* ಪರೀಕ್ಷಾ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ 18 ವರ್ಷ ಮೇಲ್ಪಟ್ಟವರಿಗೂ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಲು ಸೂಚನೆ

* 10 ಸಾಔಇರ ಮಕ್ಕಳು ಈಗಾಗಲೇ ತಮ್ಮ ಆಯ್ಕೆಯ ಕೇಂದ್ರ ಆರಿಸಿದ್ದಾರೆ. 

ದ್ವಿತೀಯ ಪಿಯು ಫಲಿತಾಂಶ:

​​​​​​​* ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಜುಲೈ ಎರಡನೇ ವಾರದಲ್ಲಿ ಪ್ರಕಟ ಆಗ್ತದೆ.

​​​​​​​* ಯಾರಿಗೂ ಅನ್ಯಾಯ ಆಯ್ತು ಎನ್ನುವ ಭಾವನೆ ಬರದಂತೆ ಫಲಿತಾಂಶ ನೀಡ್ತೆವೆ ..

​​​​​​​* ಅದಕ್ಕಾಗಿ 12 ಸದಸ್ಯರ ಕಮಿಟಿ ರಚನೆ ಆಗಿದೆ

​​​​​​​* ಪರೀಕ್ಷೆ ಬರೆದೇ ಮಾರ್ಕ್ಸ್ ಪಡೆಯುತ್ತೇವೆ ಎನ್ನೋರಿಗೆ ವ್ಯವಸ್ಥೆ ಮಾಡ್ತೇವೆ.

ಶಾಲೆ ಆರಂಭ ಯಾವಾಗ?

* ವಿಷಯ ಪಂಡಿತರು, ಅಡ್ವಯ್ಸರಿ ಕಮಿಟಿ ಸದಸ್ಯರು ಹಾಘೂ ಮಕ್ಕಳ ತಜ್ಞರು ಸೇರಿದಂತೆ ಟಾಸ್ಕ್ ಫೋರ್ಸ್‌ ರಚನೆ

* ಗ್ರಾಮೀಣ ಮಕ್ಕಳು ಕಲಿಕೆಯಿಂದ ವಂಚಿತವಾಗಬಾರದೆಂಬ ನಿಟ್ಟಿನಲ್ಲಿ ವಿದ್ಯಾಗಮಕ್ಕೆ ಒತ್ತು'

* ದೇವೀಶೆಟ್ಟಿ ಸಲಹೆಯಂತೆ ಕೇಂದ್ರೀಕೃತ ವ್ಯವಸ್ಥೆ ಬದಲು ಸ್ಥಳೀಯ ಅವಶ್ಯಕತೆಗನುಗುಣವಾಗಿ ಶಿಕ್ಷಣ ನೀಡುವ ಬಗ್ಗೆ ಯೋಜನೆ

* ಮಕ್ಕಳ ಕಲಿಕೆ ನಿರಂತರವಾಗಿರಬೇಕು, ಮೌಲ್ಯಾಂಕನವೂ ಆಗಲೇ ಆಗಬೇಕೆಂಬ ನಿಟ್ಟಿನಲ್ಲಿ ಟಾಸ್ಕ್‌ಫೋರ್ಸ್‌ ನಿರ್ಧರಿಸಲಿದೆ.

* ಜುಲೈ 1ರಿಂದ ಚಂದನ ವಾಹಿನಿ ಮೂಲಕ ಎಲ್ಲಾ ತರಗತಿಗಳಿಗೆ ಪಾಠಗಳು ಪ್ರಾರಂಭ. ವಿಶೇಷವಾಗಿ 8, 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಆರಂಭ.

* ಈ ಬಾರಿ ಇಂಗ್ಲೀಷ್ ಮಾಧ್ಯಮದಲ್ಲಿ ಪಾಠಗಳೂ ಇರಲಿವೆ.

* ದೀಕ್ಷಾ ಪೋರ್ಟಲ್‌ನಲ್ಲಿ ಈ ಎಲ್ಲಾ ಪಾಠಗಳ ವಿಡಿಯೋ ಹಾಗೂ ಆಡಿಯೋ ಲಭ್ಯವಿದೆ. ಈಗಾಗಲೇ 22 ಸಾವಿರ ಇ- ಕಂಟೆಂಟ್‌ ಲಭ್ಯವಿದೆ. 

* ಚಿಕ್ಕ ಮಕ್ಕಳಿಗಾಗಿ ಮಕ್ಕಳವಾಣಿ ಆರಂಭಿಸಲಾಗಿದೆ. ಅದು ಕೂಡಾ ಯೂಟ್ಯೂಬ್‌ನಲ್ಲಿ ಲಭ್ಯವಿದೆ.

* ಗ್ರಾಮೀಣ ಭಾಗದಲ್ಲಿ ಮಕ್ಕಳನ್ನು ಸಂಪರ್ಕಿಸಬೇಕು, ಪಾಠ ಹೆಹೇಳಿಕೊಡುವುದು ಹೇಗೆ ಎಂಬ ಬಗ್ಗೆ ಶಿಕ್ಷಣ ಅಧಿಕಾರಿಗಳು ಶಿಕ್ಷಕರಿಗೆ ವಿಸ್ಕೃತ ಮಾಹಿತಿ ಕಳುಹಿಸಿದ್ದಾರೆ. 

* ಕಳೆದ ವರ್ಷ ಮಕ್ಕಳು ಏನು ಕಲಿಯಲು ಆಗಲಿಲ್ಲ ಹಾಗೂ ಕಲಿತದ್ದನ್ನು ನೆನಪಿಸಿಕೊಳ್ಳಲು ಒಂದು ತಿಂಗಳ ಸೇತುಬಂಧ ಆರಂಭಿಸುತ್ತೇವೆ.

* ಕೊರೋನಾ ಅಲೆಗಳ ಮಧ್ಯೆ ವಾರ್ಷಿಕ ಪರೀಕ್ಷೆಯಾಚೆ ಯೋಚಿಸಬೇಕು. 

click me!