ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆಯಿಂದ ಗೈಡ್ ಲೈನ್ಸ್ ಬಿಡುಗಡೆ..!

By Suvarna News  |  First Published Nov 9, 2020, 7:06 PM IST

ನವೆಂಬರ್ 17 ರಂದು ಯುಜಿ,ಪಿಜಿ ವಿದ್ಯಾರ್ಥಿಗಳಿಗೆ ಕಾಲೇಜು ಆರಂಭ ಹಿನ್ನಲೆಯಲ್ಲಿ ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಗೈಡ್ ಲೈನ್ಸ್ ಬಿಡುಗಡೆ ಮಾಡಿದೆ. ಅದು ಈ ಕೆಳಗಿನಂತಿದೆ.


ಬೆಂಗಳೂರು,(ನ.06): ಕೊರೋನಾ ಭೀತಿ ನಡುವೆಯೇ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಿದೆ. ಇನ್ನೂ ಸಹ ಶಾಲೆಗಳ ಆರಂಭದ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಆದರೆ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಇದೇ ನವೆಂಬರ್ 17ರಿಂದ ಪ್ರಾರಂಭವಾಗಲಿವೆ. 

ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಯುಜಿಸಿ ಮಾರ್ಗಸೂಚಿಗಳನ್ನು ಕರ್ನಾಟಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಿದೆ. 

Tap to resize

Latest Videos

undefined

ಕರ್ನಾಟಕದಲ್ಲಿ ಡಿಸೆಂಬರ್‌ ತಿಂಗಳಲ್ಲಿ ಶಾಲೆ ಓಪನ್ ?

ಕಾಲೇಜು ಆರಂಭಕ್ಕೆ ಶಿಕ್ಷಣ ಇಲಾಖೆ ಗೈಡ್ ಲೈನ್ಸ್ ಇಂತಿವೆ
* ಮಾಸ್ಕ್,ಸ್ಯಾನಿಟೈಸರ್ ದೈಹಿಕ ಅಂತರ ಕಡ್ಡಾಯ
* ಕಾಲೇಜು ಪ್ರಾರಂಭಕ್ಕೆ ‌ಮೂರು ದಿನ‌ ಮುಂಚೆ ಕೋವಿಡ್ ಟೆಸ್ಟ್
* ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಕಾಲೇಜು ಸಿಬ್ಬಂದಿ ಕೋವಿಡ್ ಟೆಸ್ಟ್ ಕಡ್ಡಾಯ
* ಹತ್ತೀರದ ಆಸ್ಪತ್ರೆಯಲ್ಲಿ ಟೆಸ್ಟ್ ಮೂಡಿಸುವುದು ಕಡ್ಡಾಯ
* ನೆಗೆಟಿವ್ ರಿಪೋರ್ಟ್ ಕಾಪಿ ಇದ್ರೆ ಮಾತ್ರ ಕಾಲೇಜಿಗೆ ಪ್ರವೇಶ
* ಸಾಮಾಜಿಕ ಅಂತರ ೬ ಅಡಿಯಷ್ಟು ಪಾಲನೆ‌ ಮಾಡ್ಬೇಕು
* ಶುಚಿತ್ವ,‌ ಶುದ್ದ ಕುಡಿಯುವ ನೀರು ಕಡ್ಡಾಯ
* ಕಾಲೇಜು ಆವರಣವನ್ನ ಸ್ವಚ್ಛ ವಾಗಿಟ್ಟುಕೊಳ್ಳಬೇಕು
* ಖಾಸಗಿ ವಾಹನಗಳು, ಕಾಲೇಜು ಬಸ್ ಗಳನ್ನ ಸತತವಾಗಿ ಸ್ಯಾನಿಟೈಸ್ ಮಾಡಬೇಕು
* ಕೈಗಳನ್ನ ಸೋಪಿನಿಂದ ೪೦-೬೦ ಸೆಕೆಂಡ್ಗಳ ಕಾಲ  ಸತತವಾಗಿ ತೊಳಿಯಬೇಕು
* ವಿಧ್ಯಾರ್ಥಿಗಳ ಆರೋಗ್ಯದ ಬಗ್ಗೆ ಗಮನಕೊಡೋಕೆ ಕಡ್ಡಾಯ ಆರೋಗ್ಯ ಸಮಿತಿ ರಚನೆ ಮಾಡ್ಬೇಕು
* ಕಾಲೇಜು ಆವರಣರಲ್ಲಿ ಉಗುಳುವುದನ್ನ ಕಡ್ಡಾಯವಾಗಿ ನಿಷೇಧ
* ವಿದ್ಯಾರ್ಥಿಗಳು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಅನ್ನು ಇನ್ ಸ್ಟಾಲ್ ಮಾಡ್ಬೇಕು.

ಕಾಲೇಜು ಆರಂಭಕ್ಕೆ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳು...
1.ಯುಜಿಸಿ ಹಾಗೂ ಮಿನಿಸ್ಟರಿ ಆಫ್ ಎಜುಕೇಶನ್ ಗೈಡ್ ಲೈನ್ಸ್  ಕಡ್ಡಾಯವಾಗಿ ಪಾಲನೆ ಮಾಡ್ಬೇಕು
2.ಕಾಲೇಜು ಆರಂಭಿಕ್ಕಿಂತ ಮೊದಲು ಆರೋಗ್ಯ ಇಲಾಖೆ ಹಾಗೂ ಉನ್ನತ ಶಿಕ್ಷಣ ಇಲಾಖೆಯಿಂದ- ಕೋವಿಡ್ 19 ನಿಂದ ಪ್ರದೇಶ ಸುರಕ್ಷಿತವಾಗಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು/
3.ಯುಜಿಸಿ ಗೈಡ್ ಲೈನ್ಸ್ ಹಾಗೂ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಗೈಡ್ ಲೈನ್ ಕಡ್ಡಾಯ ಪಾಲನೆ
4.ಆರೋಗ್ಯ ಹಿತದೃಷ್ಟಿಯಿಂದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಎಲ್ಲಾ ವಿವಿಯ ಪಾಲಿಸಬೇಕು
5. ಕಂಟೋನ್ಮೆಂಟ್ ಜೋನ್ ಹೊರಗೆ ಇರುವ ಕಾಲೇಜು ಹಾಗೂ ವಿವಿಗಳನ್ನ ಓಪನ್ ಮಾಡಬಹುದ
6.ಕಂಟೋನ್ಮೆಂಟ್ ಜೋನ್ ನಲ್ಲಿರುವ ವಿದ್ಯಾರ್ಥಿಗಳು, ಸಿಬ್ಬಂದಿ ಕಾಲೇಜಿಗೆ ಬರುವಂತಿಲ್ಲ..
7. ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಕಡ್ಡಾಯ
8.ಕಾಲೇಜುಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸ್ ಕಡ್ಡಾಯವಾಗಿ ಮಾಡಬೇಕು
9.ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ಹರಿಸಬೇಕು
10.ತರಗತಿಗಳನ್ನ ಆರಂಭ ಮಾಡೋದಕ್ಕೆ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು
11.ಕಾಲೇಜುಗಳು ಏನೆಲ್ಲಾ ಕ್ರಮಗಳನ್ನ ಕೈಗೊಳ್ಳಬೇಕು
12ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಗುಂಪು ಸೇರಿದಂತೆ ನೋಡಿಕೊಳ್ಳಬೇಕು
13.ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಬಾರದೆ ಅಂತ ವಿದ್ಯಾರ್ಥಿಗಳಿಗೆ ಆನ್ ಲೈನ್ ಸ್ಟಡಿ‌ಮೆಟಿರಿಯಲ್
14.ವಿದೇಶಿ ವಿದ್ಯಾರ್ಥಿಗಳಿಗೆ ಆನ್ ಲೈನ್ ನಲ್ಲಿ ಪಾಠ ಮುಂದುವರಿಸುವ ಅವಕಾಶ.
15.ಹವಾನಿಯಂತ್ರಿತ ಅತಿಹೆಚ್ಚಾಗಿ ಬಳಸಬಾರದು
16.ಕಾಲೇಜು ತರಗತಿಯೊಳಗೆ ಬೆಳಕು ಹಾಗೂ ಗಾಳಿಯ ಪ್ರಮಾಣ ಚೆನ್ನಾಗಿರಬೇಕು.
17. ಕಾಲೇಜುಗಳಲ್ಲಿ ಸ್ವಿಮ್ಮಿಂಗ್ ಪುಲ್ ಇದ್ದರೆ ಮುಚ್ಚಬೇಕು. ಕಾಲೇಜಿನ ಎಲ್ಲಾ ಸಿಬ್ಬಂದಿಗಳು, ವಯಸ್ಸಾದವರು, ಗರ್ಭಿಣಿಯರು ಜಾಗರೂಕರಾಗಿರಬೇಕು. ಇಂಥವರು ವಿದ್ಯಾರ್ಥಿಗಳ ನೇರ ಸಂಪರ್ಕ ಇಟ್ಟುಕೊಳ್ಳಬಾರದು.
18. ತೀರ ಅಗತ್ಯ ಇದ್ದರೆ ಮಾತ್ರ  ಹಾಸ್ಟೆಲ್ ಓಪನ್ ಮಾಡಬೇಕು. ರೋಗ ಲಕ್ಷಣ ಇರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳಲು ಅವಕಾಶ ಇಲ್ಲ.
19.  ಹೊರ ರಾಜ್ಯ ಹೊರ ಜಿಲ್ಲೆಯಿಂದ ಬರುವ ವಿದ್ಯಾರ್ಥಿಗಳಿಗೆ 14 ದಿನ ಕ್ವಾರೆಂಟೈನ್ ಮುಗಿಸಿ ತರಗತಿಗೆ ಪ್ರವೇಶ( ರಾಜ್ಯ ಸರ್ಕಾರ ನಿರ್ದೇಶನ) ನೀಡಲಾಗುತ್ತದೆ.
20. ಕೋವಿಡ್ ನೆಗೆಟಿವ್ ವರದಿ ಇದ್ದರೂ 14 ದಿನ ಕ್ವಾರಂಟೈನ್ ಇರಲೇಬೇಕು.

click me!