*ಇಂಗ್ಲಿಷ್ ಕಲಿತರೆ ಉದ್ಯೋಗ ಗ್ಯಾರಂಟಿ. ಅದರಲ್ಲೂ ಇಂಗ್ಲಿಷ್ ಸಾಹಿತ್ಯ ಓದಿದ್ದರೆ ನಾನಾ ಉದ್ಯೋಗಗಳಿವೆ.
*ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್ ಸಾಹಿತ್ಯ ಓದಿದವರಿಗೆ ಹೊಸ ನಮೂನೆಯ ಉದ್ಯೋಗಿಗಳು ಹೆಚ್ಚಾಗುತ್ತಿವೆ.
*ಒಟಿಟಿ, ಸೋಷಿಯಲ್ ಮೀಡಿಯಾ ಸೇರಿದಂತೆ ಅನೇಕ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಿವೆ
ಇಂಗ್ಲಿಷ್ (English) ಜಗತ್ತಿನ ಸಾರ್ವತ್ರಿಕ ಭಾಷೆ. ಅತ್ಯಂತ ವ್ಯಾಪಕವಾಗಿ ಬಳಕೆಯಾಗುವ, ದೇಶ-ವಿದೇಶಗಳ ನಡುವೆ ಸಂವಹನಕ್ಕೆ ಬಳಕೆಯಾಗುವ ಸಮಾನ್ಯ ಭಾಷೆಯಾಗಿದೆ. ಈ ಭಾಷೆಯಲ್ಲಿ ಪದವಿ ಗಳಿಸಿದ್ರೆ ನಿಮಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ.
ಅದರಲ್ಲೂ ಆಂಗ್ಲ ಸಾಹಿತ್ಯ (English Literature) ಇಂಗ್ಲೀಷ್ ಲಿಟ್ರೇಚರ್(ಆಂಗ್ಲ ಸಾಹಿತ್ಯ)ದಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು ವಿಮರ್ಶಾತ್ಮಕ, ವಿಶ್ಲೇಷಣಾತ್ಮಕ ಮತ್ತು ಸಂವಹನ ಕೌಶಲ್ಯಗಳ ಗುಂಪನ್ನು ಅಭಿವೃದ್ಧಿಪಡಿಸುತ್ತಾರೆ. ಉದ್ಯೋಗದಾತರು ಅವರಲ್ಲಿನ ಈ ಎಲ್ಲ ಕೌಶಲ್ಯಗಳನ್ನು ಗೌರವಿಸುತ್ತಾರೆ.
ಹೀಗಾಗಿ ಸಾಕಷ್ಟು ಉದ್ಯಮ ವಲಯಗಳಲ್ಲಿ ಇಂಗ್ಲೀಷ್ ಸಾಹಿತ್ಯ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಡಿಮ್ಯಾಂಡ್ ಇದೆ. ಹಾಗಾಗಿ, ಉತ್ತಮ ಉದ್ಯೋಗ ಪಡೆಯಲು ಇಂಗ್ಲಿಷ್ ಕಲಿಕೆ ಅತ್ಯಗತ್ಯವಾಗಿದೆ.ಈ ಹಿನ್ನೆಲೆಯಲ್ಲಿ ಅನೇಕ ಸರಕಾರಗಳು ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ (Medium) ಕಲಿಕೆ ಶಿಕ್ಷಣ(Education)ವನ್ನು ಆರಂಭಿಸುವ ಪ್ರಯತ್ನವನ್ನು ಮಾಡುತ್ತಿವೆ ಎಂದು ಹೇಳಬಹುದು. ಹಾಗಾದರೆ, ಇಂಗ್ಲಿಷ್ ಸಾಹಿತ್ಯ ಕಲಿತರೆ ಏನೆಲ್ಲ ಉದ್ಯೋಗ ಸಿಗಬಹುದು ಎಂಬ ಕುತೂಹಲ ಇದ್ದೇ ಇರುತ್ತದೆ. ಯಾವ ಉದ್ಯೋಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಇಲ್ಲಿ ಪಟ್ಟಿ ಮಾಡಿದ್ದೇವೆ. ಓದಿ.
ಸೋಷಿಯಲ್ ಮೀಡಿಯಾ: ಸಾಮಾಜಿಕ ಮಾಧ್ಯಮ ಕ್ರಾಂತಿಯು ಇಂಗ್ಲಿಷ್ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಯಾರಿಗಾದರೂ ಅವಕಾಶಗಳನ್ನು ತೆರೆದಿದೆ. ನೀವು ಉತ್ತಮ ವಿಷಯವನ್ನು ಮತ್ತು ಹೊಸ ಟ್ರೆಂಡ್‌ಗಳನ್ನು ಗುರುತಿಸುವ ಯೋಗ್ಯತೆ ವೃದ್ಧಿಸಿಕೊಳ್ಳುವುದು ಅತ್ಯವಶ್ಯಕ.
ಜಾಹೀರಾತು: ಕಾಪಿರೈಟರ್(Copy Writer)ನಿಂದ ಹಿಡಿದು ಸೃಜನಶೀಲ ನಿರ್ದೇಶಕರವರೆಗೆ ಇಂಗ್ಲಿಷ್ ಸಾಹಿತ್ಯ ಪದವೀಧರರಿಗೆ ಜಾಹೀರಾತು ಏಜೆನ್ಸಿಯು ಬಹಳಷ್ಟು ಪಾತ್ರಗಳನ್ನು ಹೊಂದಿದೆ. ಕಾಪಿರೈಟರ್ ಆಗಿ ನೀವು ಜಾಹೀರಾತು ನಕಲುಗಳು, ಟ್ಯಾಗ್‌ಲೈನ್‌ಗಳು ಮತ್ತು ಪ್ರಚಾರಗಳ ವಿಷಯವನ್ನು ಬರೆಯಬಹುದು
SBI NSE Academy online courses: NSE ಅಕಾಡೆಮಿ ಜತೆಗೂಡಿ 5 ಆನ್‌ಲೈನ್ ಕೋರ್ಸ್ ಆರಂಭಿಸಿದ ಎಸ್‌ಬಿಐ.
ಸಾರ್ವಜನಿಕ ಸಂಪರ್ಕ: ಸಾರ್ವಜನಿಕ ಸಂಪರ್ಕ (PR) ಏಜೆನ್ಸಿಗಳನ್ನು ಹೊರತುಪಡಿಸಿ, PR ಅಧಿಕಾರಿಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಅಥವಾ ಶಿಕ್ಷಣ ಸಂಸ್ಥೆಗಳು ನೇಮಿಸಿಕೊಳ್ಳುತ್ತವೆ. ಮಾಧ್ಯಮ ಮತ್ತು ಸಂಸ್ಥೆಯ ನಡುವೆ ಸಂಪರ್ಕ ಸಾಧಿಸುವುದು PR ಅಧಿಕಾರಿಗಳ ಪ್ರಾಥಮಿಕ ಕೆಲಸ. ಇದಕ್ಕೆ ಇಂಗ್ಲಿಷ್ ಭಾಷೆಯಲ್ಲಿ ಮೂಲಭೂತ ನಿರರ್ಗಳತೆ ಮತ್ತು ಪತ್ರಿಕಾ ಪ್ರಕಟಣೆಗಳನ್ನು ತ್ವರಿತವಾಗಿ ಬರೆಯುವ ಸಾಮರ್ಥ್ಯದ ಅಗತ್ಯವಿರುತ್ತದೆ.
ಭಾಷಾಂತರ ಮತ್ತು ಅನುವಾದ: ಲಿಪ್ಯಂತರರು ರೆಕಾರ್ಡಿಂಗ್‌ಗಳನ್ನು ಆಲಿಸುತ್ತಾರೆ ಮತ್ತು ಅದನ್ನು ಇಂಗ್ಲಿಷ್‌ನಲ್ಲಿ ಟೈಪ್ ಮಾಡುತ್ತಾರೆ. ಟ್ರಾನ್ಸ್‌ಕ್ರೈಬರ್‌ಗಳನ್ನು ಮುಖ್ಯವಾಗಿ ವೈದ್ಯಕೀಯ, ಕಾನೂನು, ವ್ಯಾಪಾರ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ನೇಮಿಸಿಕೊಳ್ಳಲಾಗುತ್ತದೆ. ಅದೇ ರೀತಿ ಮುದ್ರಣ ವಲಯದಲ್ಲೂ ಭಾಷಾ ಅನುವಾದಕಾರರಿಗೆ ಭಾರೀ ಬೇಡಿಕೆಯಿದೆ.
ಕಂಟೆಂಟ್ ರೈಟಿಂಗ್: ಕಂಟೆಂಟ್ ರೈಟಿಂಗ್ (Content Writing) ಮಾರ್ಕೆಟಿಂಗ್‌ನ ಅತ್ಯಗತ್ಯ ಲಕ್ಷಣವಾಗಿದೆ. ನಿಮ್ಮ ಆಲೋಚನೆಗಳನ್ನು ನೀವು ಇಂಗ್ಲೀಷ್ ಭಾಷೆಯಲ್ಲಿ ಸಂಕ್ಷಿಪ್ತವಾಗಿ ವ್ಯಕ್ತಪಡಿಸಲು ಸಾಧ್ಯವಾದರೆ, ಸದ್ಯದ ಮಾರುಕಟ್ಟೆಗಳಲ್ಲಿ ಯುವ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳಿವೆ.
ಪ್ರಕಾಶನ: ಅಂದರೆ, Publishing. ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿ ನೀವು ಪಬ್ಲಿಷಿಂಗ್ ಹೌಸ್ (Publishing House)ಗಳಲ್ಲಿ ಸಂಪಾದಕರಿಂದ ಹಿಡಿದು ಮಾರ್ಕೆಟಿಂಗ್ ವೃತ್ತಿಪರರವರೆಗೆ ವಿವಿಧ ಪಾತ್ರಗಳಲ್ಲಿ ಕೆಲಸ ಮಾಡಬಹುದು. ಭಾಷೆ ಮತ್ತು ಪ್ರಚಾರ ಕೌಶಲ್ಯಗಳ ಉತ್ತಮ ಗ್ರಹಿಕೆ ಹೊಂದಿದ್ದರೆ ಸಾಕು, ನೀವು ಮಾರ್ಕೆಟಿಂಗ್ ವೃತ್ತಿಪರ ಅಥವಾ ಸಾಹಿತ್ಯಿಕ ಏಜೆಂಟ್ ಆಗಬಹುದು.
ಪ್ರೂಫ್ ರೀಡಿಂಗ್: ಪ್ರೂಫ್ ರೀಡಿಂಗ್ ಎನ್ನುವುದು ಸಂಪಾದಕೀಯ ಪ್ರಕ್ರಿಯೆಯ ಅಂತಿಮ ಹಂತ. ಪ್ರೂಫ್ ರೀಡರ್ (Proof Reader) ಆಗಿ, ತಪ್ಪು ಕಾಗುಣಿತ ಮತ್ತು ವ್ಯಾಕರಣ, ಮೇಲ್ಮೈ ದೋಷಗಳನ್ನು ತೆಗೆದುಹಾಕುವುದು ನಿಮ್ಮ ಕೆಲಸವಾಗಿರುತ್ತದೆ.
Sampriti Yadav Google Job: 50 ಸಂದರ್ಶನ ಫೇಲ್ ಬಳಿಕ ಗೂಗಲ್‌ನಿಂದ 1 ಕೋಟಿ ರೂ. ಪ್ಯಾಕೇಜ್ ಉದ್ಯೋಗ!
ಎಡಿಟಿಂಗ್: ಸಾಮಾನ್ಯವಾಗಿ ವಿಷಯ ಮತ್ತು ಭಾಷೆಯ ಪುನರ್ರಚನೆಯನ್ನು ಸಂಪಾದಕೀಯ ಒಳಗೊಂಡಿರುತ್ತದೆ. ವೃತ್ತಿಪರ ಸಂಪಾದಕರಾಗಿ (Professional Editor), ವ್ಯಾಕರಣ ಮತ್ತು ಶೈಲಿಯನ್ನು ಸುಧಾರಿಸುವ ಮೂಲಕ ನೀವು ಲೇಖನವನ್ನು ಉತ್ತಮಗೊಳಿಸಬೇಕಾಗುತ್ತದೆ.
ಮನರಂಜನೆ: OTT ಪ್ಲಾಟ್‌ಫಾರ್ಮ್‌ಗಳ ಪರಿಚಯದೊಂದಿಗೆ ಮನರಂಜನಾ ಉದ್ಯಮವು ಎತ್ತರಕ್ಕೆ ಬೆಳಯುತ್ತಿದೆ. ವಿದೇಶಿ ಚಲನಚಿತ್ರಗಳಿಗೆ ಇಂಗ್ಲಿಷ್‌ನಲ್ಲಿ ಮೂಲ ಸ್ಕ್ರಿಪ್ಟ್(Script)ಗಳು ಮತ್ತು ಉಪಶೀರ್ಷಿಕೆಗಳ(Sub Title) ಅಗತ್ಯವಿರುತ್ತದೆ. ನಿಮ್ಮ ಇಂಗ್ಲೀಷ್ ಭಾಷಾ ಜ್ಞಾನದೊಂದಿಗೆ ನೀವು ಸ್ಕ್ರಿಪ್ಟ್ ರೈಟರ್ ಆಗಬಹುದು ಅಥವಾ ಉಪಶೀರ್ಷಿಕೆಗಳ ಘಟಕದ ಅವಿಭಾಜ್ಯ ಸದಸ್ಯರಾಗಬಹುದು.