ಆತ್ಮನಿರ್ಭರ ತಾಂತ್ರಿಕ ಶಿಕ್ಷಣ; ಸ್ಥಳೀಯ ಭಾಷೆಗಳಲ್ಲೇ ಎಂಜಿನಿಯರಿಂಗ್ ಕೋರ್ಸು!

By Suvarna News  |  First Published Jul 10, 2021, 5:31 PM IST

ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿದ್ದು, ಸ್ಥಳೀಯ ಭಾಷೆಗಳಲ್ಲಿ ಎಂಜಿನಿಯರಿಂಗ್ ಕೋರ್ಸುಗಳನ್ನು ಕಲಿಸಲು ಐಐಟಿ ಸೇರಿದಂತೆ ಎಲ್ಲ ತಾಂತ್ರಿಕ ಸಂಸ್ಥೆಗಳು ಮುಂದಾಗಲಿವೆ. ಈಗಾಗಲೇ ಕೆಲವು ಸ್ಥಳೀಯ ಭಾಷೆಗಳಲ್ಲಿ ಈ ಕುರಿತು ಸಿದ್ಧತೆ ಜೋರಾಗಿದೆ. ಪ್ರಧಾನಿ ಮೋದಿ ಕೂಡ ಮಾತೃಭಾಷೆಯಲ್ಲಿ ಕೋರ್ಸು ನೀಡಲು ಕರೆ ನೀಡಿದ್ದಾರೆ.


ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ವೃತ್ತಿಪರ ಕೋರ್ಸ್‌ಗಳು ಯಾವತ್ತಿಗೂ ಕಬ್ಬಿಣದ ಕಡಲೆಯೇ. ವೃತ್ತಿಪರ ಕೋರ್ಸ್‌ಗಳು ಆಂಗ್ಲ ಭಾಷೆಯಲ್ಲೇ ಇರೋದ್ರಿಂದ ಹೇಗಾದ್ರೂ ಮಾಡಿ ಕಲಿಯಲೇಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳದ್ದು. 

ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ಇನ್ನಿತರೆ ಟೆಕ್ನಿಕಲ್ ಕೋರ್ಸ್‌ಗಳನ್ನ ಅಭ್ಯಾಸ ಮಾಡಲು ಇಂಗ್ಲೀಷ್ ಬೇಕೆ ಬೇಕು. ಪಠ್ಯ ಕೂಡ ಆಂಗ್ಲಭಾಷೆಯಲ್ಲೇ ಇರೋದ್ರಿಂದ ಕಷ್ಟಪಟ್ಟು ಅರ್ಥೈಸಿಕೊಂಡು ಓದುವ ಜವಾಬ್ದಾರಿ ಹೆಚ್ಚಿರುತ್ತದೆ. ಹೀಗೆ ಇಂಗ್ಲೀಷ್ ಭಾಷೆಯಲ್ಲೇ ಕೋರ್ಸ್‌ಗಳನ್ನ ಮುಗಿಸಿ ಲಕ್ಷಾಂತರ ವಿದ್ಯಾರ್ಥಿಗಳು ಹೊರಗೆ ಬರುತ್ತಿದ್ದಾರೆ. ಆದ್ರೆ ಇನ್ಮುಂದೆ ಟೆಕ್ನಿಕಲ್ ಕೋರ್ಸ್ ಮಾಡುವ ವಿದ್ಯಾರ್ಥಿಗಳಿಗೆ ಭಾಷೆಯ ಟೆನ್ಷನ್ ಇರೋದಿಲ್ಲ. 

Latest Videos

undefined

ಎಸ್‌ಬಿಐನಲ್ಲಿ  6100 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜೀಸ್ (ಐಐಟಿ) ಸೇರಿದಂತೆ ದೇಶದ ಎಲ್ಲ ತಾಂತ್ರಿಕ ಸಂಸ್ಥೆಗಳು ಶೀಘ್ರದಲ್ಲೇ ನಿಮ್ಮ ಮಾತೃಭಾಷೆಯಲ್ಲಿ ಎಂಜಿನಿಯರಿಂಗ್ ತರಗತಿಗಳನ್ನ ನೀಡಲಿವೆ. ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020 ರ ಅನುಷ್ಠಾನದ ಭಾಗವಾಗಿ 2021 ರಲ್ಲಿ ಮಾತೃಭಾಷೆಯಲ್ಲಿ ತರಗತಿಗಳು ಪ್ರಾರಂಭವಾಗುವ ನಿರೀಕ್ಷೆಯಿದೆ. 

ಜುಲೈ 8 ರಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಡೆದ ಸಭೆಯಲ್ಲಿ ಮಾತೃಭಾಷೆಯಲ್ಲಿ ಕೋರ್ಸ್ ಕಲಿಕೆ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಐಐಟಿ ಮೂಲಗಳು ತಿಳಿಸಿವೆ. ಕೇಂದ್ರದಿಂದ ಅನುದಾನ ಪಡೆಯುವ ತಾಂತ್ರಿಕ ಸಂಸ್ಥೆಗಳು, ಕಡ್ಡಾಯವಾಗಿ ಭಾರತೀಯ ಭಾಷೆಗಳಲ್ಲಿ ಶೈಕ್ಷಣಿಕ ವಿಷಯಗಳನ್ನು ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು. ನಾವು ಭಾರತೀಯ ಭಾಷೆಗಳಲ್ಲಿ ತಾಂತ್ರಿಕ ಶಿಕ್ಷಣದ ಇಕೋಸಿಸ್ಟಮ್ ಅನ್ನು ಅಭಿವೃದ್ಧಿ ಪಡಿಸುವ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ.
 

ಎನ್ಇಪಿ ಭಾಗವಾಗಿರುವ  ಶೈಕ್ಷಣಿಕ ಸಚಿವಾಲಯವು ಈಗಾಗಲೇ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದು, ಮಾತೃಭಾಷೆಯಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಬಗ್ಗೆ ನೀಲ ನಕ್ಷೆ ತಯಾರಾಗಿದೆ. ಮೊದಲ ಹಂತವಾಗಿ ಈ ಯೋಜನೆ ಐಐಟಿಯ ಇಂಜಿನಿಯರಿಂಗ್/ ಬಿ.ಟೆಕ್ ಜಾರಿಗೆ ಬರುವ ನಿರೀಕ್ಷೆಯದೆ. ಇದು ಯಾವುದೇ ಭಾಗದ  ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣ ಪಡೆಯಲು ನೆರವು ಕಲ್ಪಿಸಿದಂತಾಗಿದೆ. ಜೊತೆಗೆ ಅನುವಾದಿತ ಜರ್ನಲ್ ಗಳು ಲಭ್ಯವಾಗಲಿದೆ. 

ಭಾರತ್ ಪೆಟ್ರೋಲಿಯಂನಲ್ಲಿ ಅಪ್ರೆಂಟಿಸ್ಎಂಜಿನಿಯರ್ ‌ಹುದ್ದೆಗಳಿಗೆ ಅರ್ಜಿ ಆಹ್ವಾನ

ಸ್ಥಳೀಯ ಭಾಷೆಗಳಲ್ಲಿ ಸಂಶೋಧನಾ ಜರ್ನಲ್‌ಗಳನ್ನು ಅನುವಾದಿಸಲು ಪಿಎಂ ಕರೆ ನೀಡುದ್ದಾರೆ. ಈಗಾಗಲೇ 10 ಮಿಲಿಯನ್ ಪತ್ರಿಕೆಗಳನ್ನು ಎಲ್ಲಾ ಸ್ಥಳೀಯ ಭಾಷೆಗಳಿಗೆ ಪರಿವರ್ತಿಸುತ್ತೇವೆ ಎನ್ನುತ್ತಾರೆ ತಜ್ಞರು. ಸದ್ಯ ಯಾವುದೇ ಡೆಡ್ ಲೈನ್ ಇಲ್ಲದಿದ್ದರೂ ಈ ವರ್ಷಾಂತ್ಯದಲ್ಲಿ ಅಂದ್ರೆ ಡಿಸೆಂಬರ್‌ನಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಅಂದ ಹಾಗೆ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಕಲಿಕೆಗೆ ಅವಕಾಶ ವಿದ್ದರೂ, ಇಂಗ್ಲೀಷ್ ಕಡ್ಡಾಯ ಎನ್ನಲಾಗ್ತಿದೆ.

ಸ್ಥಳೀಯ ಭಾಷೆಗಳ ಮೇಲಿನ ಒತ್ತಡದ ಹೊರತಾಗಿ, ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ರಕ್ಷಣಾ ಮತ್ತು ಸೈಬರ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಭವಿಷ್ಯದ ಪರಿಹಾರಗಳನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುವಂತೆ ಪಿಎಂ ಮೋದಿ ಈ ಸಂಸ್ಥೆಗಳಿಗೆ ಸಲಹೆ ನೀಡಿದ್ದಾರೆ.

ಹಿಂದಿನ ಐಐಟಿ ಕೌನ್ಸಿಲ್ ಸಭೆಯು ತಂತ್ರಜ್ಞಾನದ ಬಳಕೆಯನ್ನು ಪರಿಶೀಲಿಸಲು ಕಾರ್ಯಪಡೆ ರಚಿಸುವಂತೆ ಕರೆ ನೀಡಿತ್ತು. ಇದು ಡಿಜಿಟಲ್ ಪರಿಕರಗಳ ನಿಯೋಜನೆ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಬಳಕೆಯನ್ನು ಒಳಗೊಂಡಿರುತ್ತದೆ.

PU ಪಾಸಾದವರಿಗೆ ಆಯಿಲ್ ಇಂಡಿಯಾ ಕಂಪನಿಯಲ್ಲಿ ಕೆಲಸ, ಅಪ್ಲೈ ಮಾಡಿ

ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಬೇಕು ಎಂಬುದು ಬಹಳ ದಿನಗಳ ಕೂಗ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೇ ಇದೇ ಅಂಶಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಹಾಗಾಗಿಯೇ ವೃತ್ತಿಪರ ಕೋರ್ಸುಗಳನ್ನು ಸ್ಥಳೀಯ ಭಾಷೆಗಳಲ್ಲಿ ನೀಡಲು ಈಗ ಯೋಜಿಸಲಾಗುತ್ತಿದೆ. ಒಂದೊಮ್ಮೆ ಇದು ಕಾರ್ಯಸಾಧ್ಯವಾದರೆ, ಎಂಜಿನಿಯರಿಂಗ್‌ ಕಲಿಕೆಯಲ್ಲಿ ಹೊಸ ಮನ್ವಂತರ ಶುರುವಾಗಬಹುದು. ಗ್ರಾಮೀಣ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

click me!