5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

By Suvarna News  |  First Published Jan 21, 2021, 3:26 PM IST

ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಅದರಿಂದಾಗುವ ಲಾಭಗಳಷ್ಟೇ ನಷ್ಟವೂ ಇದ್ದೇ ಇರುತ್ತದೆ. ಸೈಬರ್ ಕಳ್ಳರು ನಮ್ಮ ಮಾಹಿತಿಯನ್ನು ಕದಿಯಲು ಹೊಂಚು ಹಾಕತ್ತಿರುತ್ತಾರೆ. ಈ ಹಂತದಲ್ಲಿ ಸೈಬರ್ ಸೆಕ್ಯುರಿಟಿ ಸ್ಕಿಲ್ ಎನ್ನುವುದು ಹೆಚ್ಚು ಮಹತ್ವ ಪಡೆದುಕೊಳ್ಳತ್ತದೆ. ಈ ಹಿನ್ನೆಲೆಯಲ್ಲಿ ಭಾರತದ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಸ್ಕಿಲ್ ಟ್ರೈನಿಂಗ್ ನೀಡಲಾಗುತ್ತದೆ.


ಟೆಕ್ನಾಲಜಿ ಅಡ್ವಾನ್ಸ್‌ಡ್ ಆದಷ್ಟೇ ವೇಗವಾಗಿ ಹೈಟೆಕ್ ಸೈಬರ್ ಖದೀಮರ ಸಂಖ್ಯೆಯೂ ಹೆಚ್ಚಾಗ್ತಾನೆ ಇದೆ. ಇಂಟರ್‌ನೆಟ್ ಆಳ-ಅಗಲವನ್ನ ಸೈಬರ್ ಎಕ್ಸ್‌ಪರ್ಟ್‌ಗಳಿಗಿಂತಲೂ ವೇಗವಾಗಿ ತಿಳಿದಿರೋ ಹ್ಯಾಕರ್ಸ್ ಕನ್ನ ಹಾಕೋಕೆ ಕಾಯ್ತಾ ಇರುತ್ತಾರೆ.

ಇತ್ತೀಚೆಗೆ ಸೈಬರ್ ಕೇಸ್‌ಗಳು ಹೆಚ್ಚಾಗ್ತಿವೆ. ಖದೀಮರು ಎಷ್ಟೇ ಎಕ್ಸ್‌ಪರ್ಟ್ ಇದ್ದರೂ, ಪೊಲೀಸರ ಕೈಗೇ ಸಿಕ್ಕಾಕಿಕೊಳ್ಳದೇ ಇರಲ್ಲ. ಕಾಲಕ್ಕೆ ತಕ್ಕಂತೆ ಸೈಬರ್ ಸೆಕ್ಯೂರಿಟಿ ಭದ್ರಗೊಳಿಸುವುದು, ಖದೀಮರ ಕೃತ್ಯಗಳ ಮೇಲೆ ನಿಗಾ ಇಡುವುದು, ಹ್ಯಾಕರ್ಸ್ ಬಳಸುವ ಟೆಕ್ನಿಕ್ಸ್, ಡಿವೈಸ್‌ಗಳನ್ನ ಪತ್ತೆ ಮಾಡುವುದರಲ್ಲಿ ಪೊಲೀಸರು ಕೂಡ ಕಮ್ಮಿಯೇನಿಲ್ಲ.

Tap to resize

Latest Videos

undefined

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಖಾಲಿ ಹುದ್ದೆಗೆ ನೇಮಕ, ಜ.24 ಕೊನೇ ದಿನ

ಹ್ಯಾಕರ್ಸ್ ಎಷ್ಟೇ ಬುದ್ಧಿವಂತನಾದ್ರೂ, ಅವನ ಜಾಡು ಪತ್ತೆ ಹಚ್ಚೋದ್ರಲ್ಲಿ ಸೈಬರ್ ಎಕ್ಸ್‌ಪರ್ಟ್ಸ್  ಸ್ಟ್ರಾಂಗು. ದೇಶದಲ್ಲಿ ಲಾಕ್ ಡೌನ್ ಸಂದರ್ಭದಲಿ ಅತಿ ಹೆಚ್ಚು ಸೈಬರ್ ಅಟ್ಯಾಕ್‌ನಂತಹ ಪ್ರಕರಣಗಳು ನಡೆದಿವೆ. ಇಂಟರ್‌ನೆಟ್ ಮೂಲಕ ಮೋಸ ಹೋಗೋದನ್ನ ತಪ್ಪಿಸಲು ಹೆಚ್ಚು ಜಾಗರೂಕರಾಗಿರಬೇಕು. ಹೀಗಾಗಿಯೇ ಇತೀಚೆಗೆ ಸೈಬರ್ ತರಬೇತಿಯಂತಹ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗ್ತಿದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳನ್ನ ಸೈಬರ್  ಸೆಕ್ಯುರಿಟಿಯಂತಹ ಚಟುವಟಿಕೆಗಳಲ್ಲಿ ತೊಡಗಿಸಿದ್ರೆ, ಮುಂದೆ ಸೈಬರ್ ಅಪರಾಧ ಕೃತ್ಯಗಳನ್ನ ತಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸೈಬರ್ ಪೀಸ್ ಫೌಂಡೇಷನ್, ಹೊಸ ಕಾರ್ಯಕ್ರಮವೊಂದನ್ನ ರೂಪಿಸಿದೆ.

ಸೈಬರ್ ಭದ್ರತೆ ಹಾಗೂ ನಿಯಮಗಳ ಪರಿಣಿತರನ್ನೊಳಗೊಂಡ ಸೈಬರ್ ಪೀಸ್ ಫೌಂಡೇಷನ್ ಎಂಬ ಎನ್‌ಜಿಓ, ಶಿಕ್ಷಣ ಇಲಾಖೆ ಹಾಗೂ ಕೈಗಾರಿಕೆ,, ಅಕಾಡೆಮಿ, ಸರ್ಕಾರಿ ಮತ್ತು ಖಾಸಗಿ ಸೊಸೈಟಿಗಳನ್ನ ಒಳಗೊಂಡಿರೋ ಎಐಸಿಟಿಇ ಜೊತೆಗೂಡಿ ಜಂಟಿಯಾಗಿ ತರಬೇತಿ ಕಾರ್ಯಕ್ರಮವನ್ನ ಪ್ರಾರಂಭಿಸಿದೆ.  

ಸೈಬರ್ ಅಪರಾಧಗಳು, ಕಿರುಕುಳ, ನಿಂದನೆಯಂತಹ ಸಮಸ್ಯೆಗಳನ್ನು ತಾಂತ್ರಿಕ ಪ್ರಗತಿಯ ಹಿನ್ನೆಲೆಯಲ್ಲಿ  ಪರಿಹರಿಸುವುದು. ಜೊತೆಗೆ ದೇಶದ ಯುವಕರಿಗೆ ಇಂಟರ್‌ನೆಟ್ ಬಲವಾಗಿರುವಂತೆ ಸೈಬರ್ ಸುರಕ್ಷತೆ ಸಮುದಾಯಗಳ ಸುರಕ್ಷಿತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಆನ್‌ಲೈನ್‌ನಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಪತ್ತೆ ಹಚ್ಚುವುದು,  ಆ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಇಂಟರ್‌ನೆಟ್‌ನಲ್ಲಿ ಯುವಜನರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಮತ್ಷಷ್ಟು ಹೆಚ್ಚಿಸಿಕೊಳ್ಳಲು ಈ ಕಾರ್ಯಕ್ರಮ ಅನುವು ಮಾಡಿಕೊಡುತ್ತದೆ.

ಕಾರ್ಯಕ್ರಮದ ಅಂಗವಾಗಿ, 50 ಸೈಬರ್‌ಪೀಸ್ ಕ್ಲಬ್‌ಗಳು, 5 ಲಕ್ಷ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸೈಬರ್‌ಪೀಸ್ ಮತ್ತು ಸೈಬರ್‌ ಸೆಕ್ಯುರಿಟಿ ಚಟುವಟಿಕೆಗಳಾದ ಹ್ಯಾಕಥಾನ್ಸ್, ಗ್ಲೋಬಲ್ ಸೈಬರ್‌ಪೀಸ್ ಚಾಲೆಂಜ್ ಮತ್ತು ಇರಾಕ್ಷಾ ಸ್ಪರ್ಧೆಗಳಲ್ಲಿ ತೊಡಗಿಸಿಕೊಳ್ಳುತ್ತವೆ.

ವಿದ್ಯಾರ್ಥಿಗೆ ಸ್ಕೂಲ್‌ಗೆ ಲೇಟ್ ಆಗುತ್ತೆ ಅಂತ ಬಸ್ ಟೈಮಿಂಗ್ ಬದಲಿಸಿದ್ರು!

ವಿದ್ಯಾರ್ಥಿ ಅಭಿವೃದ್ಧಿ ಕ್ರಮಗಳಾದ ವ್ಯಾಲೆಂಟರಿ ಇಂಡಕ್ಷನ್ ಕಾರ್ಯಾಗಾರಗಳು ಮತ್ತು   ತಾಂತ್ರಿಕ-ಸಾಮಾಜಿಕ ಸಂಶೋಧನೆಯಲ್ಲಿ ಭಾಗವಹಿಸುವವರನ್ನು ಒಳಗೊಂಡ ಜಾಗೃತಿ ಕಾರ್ಯಾಗಾರಗಳು, ಉದ್ಯಮ, ಅಕಾಡೆಮಿ ಮತ್ತು ನಾಗರಿಕ ಸಮಾಜಗಳ ಸಹಯೋಗದೊಂದಿಗೆ ಸೈಬರ್‌ಪೀಸ್ ಮಾತುಕತೆ, ಆನ್‌ಲೈನ್ ಸಮುದಾಯಗಳ ಜೊತ ಸಂವಹನ ನಡೆಸಲಾಗುತ್ತದೆ. ಯುವಕರ ಬೆಂಬಲ ಮತ್ತು 25,000 ಸೈಬರ್‌ಪೀಸ್ ಕಾರ್ಪ್ಸ್ ವಾಲೆಂಟಿಯರ್ಸ್ ನೆಟ್‌ವರ್ಕ್ ಅನ್ನು ಸ್ಥಾಪನೆ ಮಾಡಲಾಗುತ್ತದೆ. ಇವರೆಲ್ಲರೂ ಕಾರ್ಯಕ್ರಮದ ಅಗತ್ಯ ಭಾಗಗಳಾಗಿರುತ್ತಾರೆ.

ಸೈಬರ್‌ಸೆಕ್ಯೂರಿಟಿ ವೆಂಚರ್ಸ್‌ನ ಅಂಕಿಅಂಶದ ಪ್ರಕಾರ, 2021 ರ ವೇಳೆಗೆ ಜಾಗತಿಕವಾಗಿ 3.5 ಮಿಲಿಯನ್ ಸೈಬರ್‌ ಸುರಕ್ಷತಾ ಸ್ಥಾನಗಳು ಖಾಲಿ ಇರುತ್ತವೆ. ಸೈಬರ್ ತರಬೇತಿಯಲ್ಲಿ ಈ ಎಲ್ಲಾ ಉಪಕ್ರಮಗಳು ಮತ್ತು ಚಟುವಟಿಕೆಗಳೊಂದಿಗೆ ಭಾಗವಹಿಸುವವರು ತಮ್ಮ ಡಿಜಿಟಲ್ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಅರಿವು ಪಡೆಯಬಹುದು. ಸುರಕ್ಷಿತ, ಚುರುಕಾದ, ತಿಳುವಳಿಕೆಯುಳ್ಳ ಆಯ್ಕೆಗಳನ್ನು ಮಾಡುವ ಮೂಲಕ ಪ್ರಜ್ಞಾಪೂರ್ವಕವಾಗಿ ಸೈಬರ್ ಜಾನ ಹೆಚ್ಚಿಸಿಕೊಳ್ಳಬಹುದು. ಅಲ್ಲದೇ ಸೈಬರ್‌ ಸೆಕ್ಯುರಿಟಿ ಕ್ಷೇತ್ರದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಪಡೆಯಲು ಪ್ರೋಗ್ರಾಂ ಶ್ರಮಿಸುತ್ತದೆ. ಆರೋಗ್ಯಕರ ಆನ್‌ಲೈನ್ ಅಭ್ಯಾಸಗಳು, ಆನ್‌ಲೈನ್ ಅಪಾಯವನ್ನು ಗುರುತಿಸಿ ಮತ್ತು ನಿರ್ವಹಿಸಿ ಮತ್ತು ನಿಯಮಗಳು ಮತ್ತು ನಿಯಮಗಳನ್ನು ಅನುಸರಿಸೋ ಮೂಲಕ ವಿದ್ಯಾರ್ಥಿಗಳು ಜವಾಬ್ದಾರಿಯುತ ನೆಟಿಜನ್‌ಗಳಾಗುವರು.

5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿರುವ ಸೈಬರ್‌ಪೀಸ್ ಫೌಂಡೇಶನ್ ಮೂಲಕ ಸೈಬರ್ ಸೆಕ್ಯುರಿಟಿಯಲ್ಲಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ. ಇದು 2 ಕೋಟಿಗೂ ಹೆಚ್ಚು ಉದ್ಯೋಗಗಳು ಇರುವ ಪ್ರಮುಖ ಕ್ಷೇತ್ರವಾಗಿದೆ ಅಂತಾರೆ ಎಸಿಐಟಿಯು ಅಧ್ಯಕ್ಷ ಪ್ರೊ. ಅನಿಲ್ ಸಹಸ್ರಬುದ್ದೆ.

click me!