ಇನ್ನೂ ಅಚ್ಚರಿಯೇನೆಂದರೆ, ಇದೇ ಶಾಲೆಯಲ್ಲಿ ಅವರ ಹಿರಿಯ ಮಗ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದು, ಅವರಿಗೆ ವಾರ್ಷಿಕ 3.2 ಲಕ್ಷ ಶುಲ್ಕ ಕಟ್ಟುತ್ತಿದ್ದಾರೆ. ಆದರೆ, ಕಿರಿಯ ಮಗನನ್ನು ಎಲ್‌ಕೆಜಿಗೆ ಸೇರಿಸಲು ಹಿರಿಯ ಮಗನಿಗೆ ನೀಡುವ ಶುಲ್ಕಕ್ಕಿಂತ ಕೇವಲ 50 ಸಾವಿರ ರೂಪಾಯಿ ಕಡಿಮೆ ಎಂದಿದ್ದಾರೆ
ಹೈದರಾಬಾದ್ (ಫೆ.15): ಶಿಕ್ಷಣದ ವಿಚಾರವಾಗಿ ನಮ್ಮ ಸಂವಿಧಾನ ಅದೆಷ್ಟೇ ನಿಯಮಗಳನ್ನು ಮಾಡಿದ್ದರೂ, ಬಡಮಕ್ಕಳ ಪಾಲಿಗೆ ಶಿಕ್ಷಣ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಇನ್ನು ಅದು ಯಾವುದೇ ಸರ್ಕಾರಗಳು ಬಂದರೂ ದೇಶದಲ್ಲಿ ಖಾಸಗಿ ಶಾಲೆ ಹಾಗೂ ಕಾಲೇಜುಗಳು ಧನದಾಹಕ್ಕೆ ಕೊನೆ ಎನ್ನುವುದೇ ಇಲ್ಲ. ದೇಶದಲ್ಲಿ ಖಾಸಗಿ ಶಾಲೆಗಳು ವಿಧಿಸುವ ಶುಲ್ಕಗಳ ಬಗ್ಗೆ ಸರ್ಕಾರಗಳ ಖಂಡಿತವಾಗಿ ಗಮನಹರಿಸಬೇಕಾದ ಅಗತ್ಯವಿದೆ ಎನ್ನುವುದು ಇತ್ತೀಚೆಗೆ ಹೈದರಾಬಾದ್‌ನಲ್ಲಿ ಆಗಿರುವ ಘಟನೆಯಿಂದಲೇ ತಿಳಿಯಬೇಕಿದೆ. ತಮ್ಮ ನಾಲ್ಕು ವರ್ಷದ ಪುತ್ರನನ್ನು ನರ್ಸರಿಯಿಂದ ಎಲ್‌ಕೆಜಿಗೆ ಸೇರಿಸುವ ಸಲುವಾಗಿ ಪೋಷಕರು ಖಾಸಗಿ ಶಾಲೆಗೆ ಭೇಟಿ ನೀಡಿದ್ದಾಗ ಅವರು ಹೇಳಿದ ಶುಲ್ಕ ಕೇಳಿ ಹೌಹಾರಿಹೋಗಿದ್ದಾರೆ. ನರ್ಸರಿಯಿಂದ ಎಲ್‌ಕೆಜಿಗೆ ಸೇರಿಸುವ ವೇಳೆ ಶುಲ್ಕನದಲ್ಲಿ ಬರೋಬ್ಬರಿ ಶೇ. 65ರಷ್ಟು ಏರಿಕೆಯಾಗಿದೆ. ಹೈದರಾಬಾದ್‌ನ ಬುಚ್ಚಪಲ್ಲಿಯಲ್ಲಿ ಪ್ರಖ್ಯಾತ ಸ್ಕೂಲ್‌ನಲ್ಲಿ ಕಳೆದ ವರ್ಷ ಎಲ್‌ಕೆಜಿಗೆ 2.3 ಲಕ್ಷ ಶುಲ್ಕವಿದ್ದರೆ, ಈ ವರ್ಷಕ್ಕೆ ಅದು 3.7 ಲಕ್ಷಕ್ಕೆ ಏರಿಕೆಯಾಗಿದೆ. ಏಪ್ರಿಲ್ ವೇಳೆ ತಮ್ಮ ಮಗುವನ್ನು ಎಲ್‌ಕೆಜಿಗೆ ಸೇರಿಸಲು ತಂದೆ-ತಾಯಿ ಬಯಸಿದ್ದರು. ಈಗ ಶಾಲೆಯ ಶುಲ್ಕವನ್ನು ಕೇಳಿ ಅವರು ಅಚ್ಚರಿಪಟ್ಟಿದ್ದಾರೆ.
ಪೋಷಕರ ಪ್ರಕಾರ, ಶಾಲಾ ಆಡಳಿತವು ಶುಲ್ಕ ಏರಿಕೆಯನ್ನು ಸರ್ಮಥಿಸಿಕೊಂಡಿದ್ದು, ಈ ವರ್ಷದಿಂದ ಐಬಿ (ಇಂಟರ್‌ನ್ಯಾಷನಲ್ ಬ್ಯಾಕಲೌರಿಯೇಟ್) ಕರಿಕ್ಯುಲಮ್‌ಗೆ ಶಿಫ್ಟ್ ಆಗುತ್ತಿರುವ ಕಾರಣ ಶುಲ್ಕದಲ್ಲಿ ಕಡಿಮೆ ಸಾಧ್ಯವಿಲ್ಲ ಎಂದು ಹೇಳಿದ್ದಾಗಿ ತಿಳಿಸಿದ್ದಾರೆ. ಮಗನನ್ನು ಶಾಲೆಗೆ ಸೇರಿಸಲು ಹೋದಾಗ ಅವರು 1ನೇ ಕ್ಲಾಸ್‌ಗೆ ಹೋಗುವವರೆಗೂ ಶುಲ್ಕವು ಹೆಚ್ಚೂ ಕಡಿಮೆ ಸ್ಥಿರವಾಗಿರಲಿದೆ ಎಂದು ನಾವು ನಿರೀಕ್ಷೆ ಮಾಡಿದ್ದೆವು. ಆದರೆ, ನರ್ಸರಿಂದ ಎಲ್‌ಕೆಜಿಗೆ ಶಿಫ್ಟ್ ಮಾಡುವ ಹಾದಿಯಲ್ಲಿಯೇ ಶಾಲೆ ಹೊಸ ಶುಲ್ಕದ ಬ್ರಾಕೆಟ್‌ನಲ್ಲಿ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದು ಇದು ಶೇ. 70ರಷ್ಟು ಹೆಚ್ಚಾಗಿದೆ ಎಂದು ಮಗುವಿನ ಪೋಷಕರು ತಿಳಿಸಿದ್ದಾರೆ.
undefined
ಇನ್ನು ತಮ್ಮ ಹಿರಿಯ ಮಗ ಕೂಡ ಅದೇ ಶಾಲೆಯಲ್ಲಿ 4ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ. ಆತನಿಗೆ ಒಂದು ವರ್ಷಕ್ಕೆ 3.2 ಲಕ್ಷ ಶುಲ್ಕ ಕಟ್ಟುತ್ತಿದ್ದೇವೆ. ಆದರೆ, ಕಿರಿಯ ಮಗನಿಗೆ ಎಲ್‌ಕೆಜಿಗೆ ಸೇರಿಸಲು ಇನ್ನೂ 50 ಸಾವಿರ ಹೆಚ್ಚಿನ ಹಣ ಕಟ್ಟಬೇಕಿದೆ ಎಂದಿದ್ದಾರೆ. "ಆರ್ಥಿಕವಾಗಿ, ಇದು ನಮಗೆ ಸಾಕಷ್ಟು ಹೊರೆಯಾಗಲಿದೆ. ನಾವು ಈಗ ಇಬ್ಬರೂ ಮಕ್ಕಳ ಶಾಲೆಯನ್ನು ಬದಲಾಯಿಸಲು ಯೋಚಿಸುತ್ತಿದ್ದೇವೆ. ಆದರೆ, ಇನ್ನೇನು ಶಾಲೆಗಳು ಆರಂಭವಾಗಲು ಕೆಲವೇ ತಿಂಗಳು ಇರಲಿರುವ ಕಾರಣ ಹೊಸ ಶಾಲೆಯನ್ನು ಹುಡುಕುವುದೂ ಕೂಡ ಸವಾಲಾಗಿದೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಇದು ವ್ಯಾಪಕ ಕಾಳಜಿ ಹುಟ್ಟುಹಾಕಿದೆ. ಹೆಚ್ಚಿನವರು ಇದೇ ರೀತಿಯ ಆತಂಕ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಶಾಲೆಗಳಲ್ಲಿ ಒಂದು ಶೈಕ್ಷಣಿಕ ವರ್ಷಕ್ಕೆ ಶುಲ್ಕದ ಹೆಚ್ಚಳವು ಶೇ. 10 ರಿಂಧ 12 ಆಗಿದ್ದರೆ, ಮೂಲ ದರಗಳು ಲಕ್ಷದಲ್ಲಿ ಇರುತ್ತದೆ. ಇದು ಶಿಕ್ಷಣದ ಒಟ್ಟಾರೆ ವೆಚ್ಚ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ. ಪೋಷಕರು ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಲು ಹಿಂಜರಿಯುತ್ತಾರೆ, ಆದರೆ 1 ಮತ್ತು ಅದಕ್ಕಿಂತ ಹೆಚ್ಚಿನ ತರಗತಿಗಳಲ್ಲಿ, ವಿಶೇಷವಾಗಿ ಐಬಿ ಮತ್ತು ಕೇಂಬ್ರಿಡ್ಜ್ ಶಾಲೆಗಳಲ್ಲಿ ಪ್ರವೇಶದ ಕೊರತೆಯಿಂದಾಗಿ, ಅವರು ತಮ್ಮ ಮಕ್ಕಳನ್ನು LKG ಯಿಂದಲೇ ಸೇರಿಸಲು ಒತ್ತಾಯಿಸಲ್ಪಡುತ್ತಾರೆ, ಇದರಿಂದಾಗಿ ವಿಪರೀತ ಶುಲ್ಕಗಳನ್ನು ಶಾಲೆಗಳು ವಿಧಿಸುತ್ತದೆ" ಎಂದು ಪೋಷಕರೊಬ್ಬರು ಹೇಳಿದ್ದಾರೆ.
Kalaburagi: ವಿಶ್ವವಿದ್ಯಾಲಯದ ಲೈಬ್ರೆರಿಯಲ್ಲಿ ಸರಸ್ವತಿ ಪೂಜೆಗೆ ವಿರೋಧ, 'ಇದೇನು ದೇವಸ್ಥಾನವಲ್ಲ' ಎಂದ ವಿದ್ಯಾರ್ಥಿ!
ಸಿಬಿಎಸ್‌ಇ ಶಾಲೆಗಳಲ್ಲಿ ಹೆಚ್ಚು ಆರ್ಥಿಕ ಆಯ್ಕೆಗಳ ಲಭ್ಯತೆಯ ಹೊರತಾಗಿಯೂ, ವಿಧಿಸಲಾಗುವ ಶುಲ್ಕಗಳು ಸಾಮಾನ್ಯವಾಗಿ ಸೂಕ್ತವಾಗಿಲ್ಲ ಎಂದೇ ಪೋಷಕರು ಹೇಳುತ್ತಾರೆ. 'ಈ ವರ್ಷ ನನ್ನ ಮಗನನ್ನು 1ನೇ ತರಗತಿಗೆ ಸೇರಿಸಬೇಕು ಈಗಾಗಲೇ ನಾನು ಕುಕಟ್‌ಪಲ್ಲಿಯಲ್ಲಿ 7-10 ಶಾಲೆಗಳ ಹುಡುಕಾಟ ನಡೆಸಿದ್ದೇನೆ. ಸಾಮಾನ್ಯವಾಗಿ ಶುಲ್ಕ 4 ಲಕ್ಷದವರೆಗೆ ಇದೆ. ಕಡಿಮೆ ಎಂದರೆ 1 ಲಕ್ಷ. ಶಾಲೆಗಳು ಮೂಲಸೌಕರ್ಯಕ್ಕಾಗಿ ಈ ಹಣ ಖರ್ಚು ಮಾಡುತ್ತೇವೆ ಎನ್ನುತ್ತಾರೆ. ಆದರೆ, ಕಿರಿಯ ಪ್ರಾಥಮಿಕ ತರಗತಿಗಳಿಗೆ ಪ್ರಾಥಮಿಕ ಗಮನವನ್ನು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ನೀಡಬೇಕು. ಶುಲ್ಕ 1 ಲಕ್ಷ ಮೀರಬಾರದು ಎಂದು ಸಾಫ್ಟ್‌ವೇರ್ ಇಂಜಿನಿಯತ್ ಪೀಯೂಶ್ ಜರೋಲಿ ಹೇಳಿದ್ದಾರೆ.
ವಿದೇಶಿ ವಿದ್ಯಾರ್ಥಿಗಳಿಗೆ ಕರ್ನಾಟಕವೇ ನಂ.1 ಆಯ್ಕೆ, ನಮ್ ರಾಜ್ಯದಲ್ಲಿ ವಿವಿಧ ದೇಶಗಳ 6000 ವಿದ್ಯಾರ್ಥಿಗಳು
ಇನ್ನು ವಿವಿಧ ಶಾಲೆಗಳ ಆಡಳಿತ ಮಂಡಳಿ ಶುಲ್ಕ ಹೆಚ್ಚಳವನ್ನು ಸಮರ್ಥಿಸಿಕೊಳ್ಳುತ್ತಾರೆ. ಹೆಚ್ಚಿನ ಶಾಲೆಗಳು ಈ ವರ್ಷ 8 ರಿಂದ 10ರಷ್ಟು ಶುಲ್ಕ ಏರಿಕೆ ಮಾಡಿವೆ. ಟೀಚರ್‌ಗಳ ವೇತನಕ್ಕೆ ಹಾಗೂ ಮಾರುಕಟ್ಟೆ ಏರಿಕೆಗೆ ಪೂರಕವಾಗಿ ಇದನ್ನು ಮಾಡಲಾಗುತ್ತದೆ. ಅನುಭವಿ ಸಿಬ್ಬಂದಿಯನ್ನು ಉಳಿಸಿಕೊಳ್ಳಲು ನಾವು ಸ್ಪರ್ಧಾತ್ಮಕ ಸಂಬಳವನ್ನು ನೀಡಬೇಕು. ಶಾಲೆಗಳ ಮಾನವ ಸಂಪನ್ಮೂಲ ವಿಭಾಗಕ್ಕೆ ಹೆಚ್ಚಿನ ಗಣ ವೆಚ್ಚವಾಗುತ್ತದೆ ಎಂದು ಹೈದರಬಾದ್‌ನ ನಗರದ ಶಾಲೆಯ ಪ್ರಿನ್ಸಿಪಾಲ್ ಆಗಿರುವ ಹಾಗೂ ಹೈದರಾಬಾದ್ ಸಹೋದಯ ಶಾಲಾ ಸಂಕೀರ್ಣದ ಖಜಾಂಚಿಯೂ ಆಗಿರುವ ಸನಿರ್ ನಗಿ ಹೇಳಿದ್ದಾರೆ.