ಶಿಕ್ಷಣದ ಮೇಲೆಯೂ ಸರ್ಕಾರದ ಜಿಎಸ್‌ಟಿ, ಪ್ರಖ್ಯಾತ ಐಐಟಿಗೆ 120 ಕೋಟಿ ಟ್ಯಾಕ್ಸ್‌ ನೋಟಿಸ್‌!

By Santosh Naik  |  First Published Aug 16, 2024, 7:55 PM IST

GST on Education ಈ ಮೊತ್ತ ಹಾಗೂ ಇದಕ್ಕೆ ಸಂಬಂಧಿತ ದಂಡವನ್ನು ನಿಮ್ಮಿಂದ ಯಾಕೆ ಸಂಗ್ರಹ ಮಾಡಬಾರದು ಎನ್ನುವುದನ್ನು ವಿವರಿಸಲು ಐಐಟಿಗೆ ನೋಟಿಸ್‌ ನೀಡಿದ ದಿನದಿಂದ 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.


ನವದೆಹಲಿ (ಆ.16): ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗುಪ್ತಚರ ನಿರ್ದೇಶನಾಲಯವು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ದೆಹಲಿ (ಐಐಟಿ-ಡಿ) ಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.  2017 ಮತ್ತು 2022ರ ನಡುವೆ ಐಐಟಿ ದೆಹಲಿ ಸ್ವಾಧೀನಪಡಿಸಿಕೊಂಡಿರುವ ಸಂಶೋಧನಾ ನಿಧಿಯ ಮೇಲೆ 120 ಕೋಟಿ ರೂಪಾಯಿ ಜಿಎಸ್‌ಟಿ ಪಾವತಿ, ಮತ್ತು ಬಡ್ಡಿ ಹಾಗೂ ದಂಡವನ್ನು ಕೋರಿ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ. ಆದರೆ, ಐಐಟಿ ದೆಹಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜಿಎಸ್‌ಟಿಯ ವಿಂಗ್‌ ಈ ರೀತಿಯ ನೋಟಿಸ್‌ ನೀಡಿದ್ದು ಅತ್ಯಂತ ದುರಾದೃಷ್ಟದ ಸಂಗತಿ ಎಂದು ಹೇಳಿದ್ದಾರೆ. ಸರ್ಕಾರವು ಬೆಂಬಲಿಸುವ ಸಂಶೋಧನೆಗಳನ್ನು ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ಯೈಟಿ ದೆಹಲಿ ಕೂಡ ಈ ನೋಟಿಸ್‌ಅನ್ನು ಚಾಲೆಂಜ್‌ ಮಾಡಬೇಕು ಎಂದು ತಿಳಿಸಿದ್ದಾರೆ. ಇದೊಂದು ತಪ್ಪು ವ್ಯಾಖ್ಯಾನ ಎಂದು ನಾವು ನಂಬುತ್ತೇವೆ. ನಮ್ಮ ದೃಷ್ಟಿಯಲ್ಲಿ ಸರ್ಕಾರಿ ಅನುದಾನಿತ ಸಂಶೋಧನೆಗೆ ಯಾವುದೇ ಕಾರಣಕ್ಕೂ ಜಿಎಸ್‌ಟಿ ಹೇರಬಾರದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ರೀತಿಯ ನೋಟಿಸ್‌ಗಳನ್ನು ಯಾವ ಕಾರಣಕ್ಕಾಗಿ ಕಳಿಸುತ್ತಾರೆ ಅನ್ನೋದೇ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ನಾವು ಸಂಶೋಧನೆಯನ್ನು "ತೆರಿಗೆಗೆ ಒಳಪಡುವ ಘಟಕ" ಎಂದು ನೋಡುವುದಕ್ಕಿಂತ ಹೆಚ್ಚಾಗಿ ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ. ಈ ಮೊತ್ತ ಹಾಗೂ ಇದಕ್ಕೆ ಸಂಬಂಧಿತ ದಂಡವನ್ನು ನಿಮ್ಮಿಂದ ಯಾಕೆ ಸಂಗ್ರಹ ಮಾಡಬಾರದು ಎನ್ನುವುದನ್ನು ವಿವರಿಸಲು ಐಐಟಿಗೆ ನೋಟಿಸ್‌ ನೀಡಿದ ದಿನದಿಂದ 30 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.
ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಪ್ರಸಿದ್ಧ ಐಐಟಿಗಳು ಮತ್ತು ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಸೇರಿದಂತೆ ಹಲವಾರು ಶಿಕ್ಷಣ ಸಂಸ್ಥೆಗಳು ಜಿಎಸ್‌ಟಿ ಅಧಿಕಾರಿಗಳಿಂದ ಇದೇ ರೀತಿಯ ಅಧಿಸೂಚನೆಗಳನ್ನು ಸ್ವೀಕರಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Tap to resize

Latest Videos

undefined

ಇನ್ಫೋಸಿಸ್‌ಗೆ 32000 ಕೋಟಿ ರು. ತೆರಿಗೆ ನೋಟಿಸ್‌?: ಈ ಮೊತ್ತ ಸಂಸ್ಥೆಯ ಒಂದಿಡೀ ವರ್ಷದ ಲಾಭಕ್ಕೆ ಸಮ

ಅನಾಮಧೇಯತೆಯ ಷರತ್ತಿನ ಮಾತನಾಡಿರುವ ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯದ ಮುಖ್ಯಸ್ಥರು ಹಣಕಾಸಿನ ಹೊರೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ವಿಶ್ವವಿದ್ಯಾನಿಲಯಗಳಿಗೆ ಸಂಶೋಧನಾ ನಿಧಿಗಳ ಮೇಲೆ GST ಜಾರಿಗೊಳಿಸುವುದು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೆ 'ಪ್ರಮುಖ ಹಿನ್ನಡೆ' ಎಂದು ಹೇಳಿದ್ದಾರೆ. ಈಗಾಗಲೇ ಜಿಎಸ್‌ಟಿ ವ್ಯಾಪ್ತಿಗೆ ಒಳಪಡುವ ಉಪಭೋಗ್ಯ ವಸ್ತುಗಳು ಮತ್ತು ಆಸ್ತಿಗಳನ್ನು ಖರೀದಿಸಲು ಗಮನಾರ್ಹ ಪ್ರಮಾಣದ ಹಣವನ್ನು ಬಳಸಲಾಗುತ್ತಿದೆ ಎಂಬುದನ್ನು ಗಮನಿಸಲು ಹಣಕಾಸು ಸಚಿವಾಲಯ ವಿಫಲವಾಗಿದೆ ಎಂದು ತಿಳಿಸಿದ್ದಾರೆ. "ಶಿಕ್ಷಣ ಸಂಸ್ಥೆಗಳನ್ನು ತೆರಿಗೆ ಆದಾಯದ ಮೂಲಗಳಾಗಿ ನೋಡುವುದರಿಂದ ಶಿಕ್ಷಣದ ವೆಚ್ಚ ಹೆಚ್ಚಾಗುತ್ತದೆ" ಎಂದು ಅವರು ಹೇಳಿದರು.

'ಜೀವವಿಮೆ, ವೈದ್ಯಕೀಯ ವಿಮೆ ಮೇಲಿನ ಶೇ. 18 ಜಿಎಸ್‌ಟಿ ತೆಗೆದುಹಾಕಿ..' ವಿತ್ತ ಸಚಿವೆಗೆ ನಿತಿನ್‌ ಗಡ್ಕರಿ ಪತ್ರ!

click me!