ಪಾಸಾಗಬೇಕಂದ್ರೆ ಗಿಡ ನೆಡಿ: ಭೂ ರಮೆ ಹಸಿರಾಗಲು ಇನ್ನೇನು ಬೇಕೇಳಿ?

By Web DeskFirst Published Jun 8, 2019, 3:21 PM IST
Highlights

ಫಿಲಿಪೈನ್ಸ್‌ನಲ್ಲಿ ಬಹುತೇಕ ಕಾಡನ್ನು ಕಳೆದುಕೊಂಡು ಕಂಗೆಟ್ಟಿರೋ ಸರ್ಕಾರ ಕನಿಷ್ಠ 10 ಗಿಡ ನೆಟ್ರೆ ಮಾತ್ರ ವಿದ್ಯಾರ್ಥಿಗಳು ಪಾಸಾಗಬಹುದು ಎಂಬ ಹೊಸ ನಿಯಮ ತಂದಿದೆ. ಈ ರೂಲ್ಸ್ ಎಲ್ಲ ಕಡೆ ಬಂದ್ರೆ ಒಳ್ಳೇದು. ಏನಂತೀರಾ?

ಪಾಸಾಗ್ಬೇಕು, ಹೈಯರ್ ಎಜುಕೇಶನ್ ಬೇಕು ಅಂದ್ರೆ ಕಷ್ಟ ಪಟ್ಟು ಓದ್ಬೇಕು. ಆದ್ರೆ ಫಿಲಿಪೈನ್ಸ್‌ನಲ್ಲಿ ಅಷ್ಟೇ ಸಾಲಲ್ಲ, ಪಾಸಾಗಬೇಕು ಎಂದ್ರೆ ಕನಿಷ್ಠ 10 ಗಿಡಗಳನ್ನಾದ್ರೂ ನೆಟ್ಟು ಬೆಳೆಸ್ಬೇಕು. ಹೌದು, ದೇಶದ ಅರಣ್ಯ ಪ್ರದೇಶ ಶೇ.70ರಿಂದ ಶೇ.20ಕ್ಕೆ ಇಳಿದಿರುವುದರಿಂದ ಎಚ್ಚೆತ್ತಿರುವ ಫಿಲಿಪೈನ್ಸ್ ಸರ್ಕಾರ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ವರ್ಷಕ್ಕೆ ಸುಮಾರು 175 ದಶಲಕ್ಷ ಮರಗಳನ್ನು ಬೆಳೆಯಬಹುದಾಗಿದೆ. 

ಕೆಲಸದ ಸಂದರ್ಶನ: ಫೇಲ್ ಆಗೋದೆಲ್ಲಿ?

ಗ್ರ್ಯಾಜುಯೇಶನ್ ದಿನ ಗಿಡ ನೆಟ್ಟು ಸಂಭ್ರಮ ಆಚರಿಸುವ ಸತ್ ಸಂಪ್ರದಾಯ ಹಲವೆಡೆ ಇದೆ. ಆದರೆ ಅದನ್ನು ಕಡ್ಡಾಯಗೊಳಿಸುವ ಮೂಲಕ ಈ ದ್ವೀಪರಾಷ್ಟ್ರ ಒಂದು ಹೆಜ್ಜೆ ಮುಂದೆ ಹೋಗಿದೆ. ಶಿಕ್ಷಣ ವಿಭಾಗ, ಉನ್ನತ ಶಿಕ್ಷಣ ಸಮಿತಿ ಹಾಗೂ ಕೃಷಿ ವಿಭಾಗಗಳು ಸೇರಿ ಈ ನಿಯಮಕ್ಕೆ ಒಮ್ಮತದ ಸಮ್ಮಿತಿ ಸೂಚಿಸಿವೆ. ಪ್ರೈಮರಿ, ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿಗಳೆಲ್ಲರಿಗೂ ಈ ನಿಮಯ ಅನ್ವಯವಾಗಲಿದ್ದು, ಇದರಿಂದ ಮಕ್ಕಳಲ್ಲಿಯೂ ಪರಿಸರ ಜಾಗೃತಿ ಮೂಡಿಸಿದಂತಾಗುತ್ತದೆ. ಈ ಸಸಿಗಳನ್ನು ಎಲ್ಲೆಲ್ಲಿ ನೆಡಬೇಕು ಎಂಬುದನ್ನು ಸರ್ಕಾರವೇ ನಿರ್ಧರಿಸುತ್ತದೆ. ಒಮ್ಮೆ ಸಸಿ ನೆಟ್ಟ ಬಳಿಕ ಸ್ಥಳೀಯ ಆಡಳಿತಗಳು ಆಯಾ ಪ್ರದೇಶದ ಸಸ್ಯಗಳ ಪಾಲನೆ ಪೋಷಣೆ ಜವಾಬ್ದಾರಿ ವಹಿಸಿಕೊಳ್ಳಬೇಕು. 

ಸ್ಮಾರ್ಟ್ ಆದ್ರೂ ಕೆಲವರು ಉದ್ಯೋಗದಲ್ಲೇಕೆ ಫೇಲ್ಯೂರ್ ಆಗ್ತಾರೆ?

175 ದಶಲಕ್ಷ ಸಸಿಗಳಲ್ಲಿ ಶೇ.10ರಷ್ಟು ಗಿಡಗಳು ಮರವಾದರೂ ತಲೆಮಾರು ದಾಟುವಷ್ಟರಲ್ಲಿ 525 ದಶಲಕ್ಷ ಮರಗಳು ಹಸಿರು ಹರಡುತ್ತವೆ ಎಂಬುದು ಸರಕಾರದ ಲೆಕ್ಕಾಚಾರ.  ಹೆಚ್ಚುತ್ತಿರುವ ಪರಿಸರ ಮಾಲಿನ್ಯಕ್ಕೆ ಬ್ರೇಕ್ ಹಾಕಲು, ಅರಣ್ಯ ಉಳಿಸಿ ಬೆಳೆಸಲು, ಏರುತ್ತಿರುವ ತಾಪಮಾನಕ್ಕೆ ಕಡಿವಾಣ ಹಾಕಲು, ಮುಂದಿನ ತಲೆಮಾರಿಗೆ ಭೂಮಿಯನ್ನು ವಾಸಯೋಗ್ಯವಾಗಿಯೇ ಉಳಿಸಿಕೊಡಲು ಅವರನ್ನೇ ಬಳಸಿಕೊಂಡು ಇಂಥ ಕೈಂಕರ್ಯಕ್ಕೆ ಮುಂದಾದರೆ, ಆ ಮಕ್ಕಳಲ್ಲಿ ಪರಿಸರ ಜಾಗೃತಿ ಚೆನ್ನಾಗಿ ಮೂಡುವುದಲ್ಲವೇ? ಮತ್ತು ಅವರು ಈ ಸಂಪ್ರದಾಯವನ್ನು ಭವಿಷ್ಯದ ತಲೆಮಾರುಗಳುದ್ದಕ್ಕೂ ಹರಿಯಗೊಡುತ್ತಾರೆ. ಅಂದ ಮೇಲೆ ಎಲ್ಲ ದೇಶಗಳಲ್ಲೂ ಇಂಥ ನಿಯಮವನ್ನು ಸರ್ಕಾರವೇ ಜಾರಿಗೊಳಿಸಿ, ಕಟ್ಟುನಿಟ್ಟಾಗಿ ನಡೆಸಿಕೊಂಡು ಹೋದರೆ ಭೂಮಿಯ ಭವಿಷ್ಯವನ್ನೂ, ಆ ಮೂಲಕ ಮಕ್ಕಳ ಭವಿಷ್ಯವನ್ನೂ ಕಾಯ್ದಿಟ್ಟಂತಾಯಿತು. 

2019 ರ ಡಿಮ್ಯಾಂಡಿಂಗ್ ಕೆಲಸಗಳು ಯಾವುವು ಗೊತ್ತಾ?

click me!