ಆಗಷ್ಟೇ ಕೆಲಸಕ್ಕೆ ಸೇರಿದ ಯುವಕ ಯುವತಿಯರಿನ್ನೂ ಕಾಲೇಜಿನ ಗುಂಗಲ್ಲೇ ಇರುತ್ತಾರೆ. ಇದರಿಂದಾಗಿ ಉದ್ಯೋಗ ಸ್ಥಳದಲ್ಲಿ ಹಲವು ತಪ್ಪುಗಳಾಗಬಹುದು. ಅವುಗಳು ಆಗದಂತೆ ನೋಡಿಕೊಳ್ಳುವುದು, ಒಮ್ಮೆ ಆದರೆ ತಿದ್ದಿಕೊಳ್ಳುವುದು ಒಳ್ಳೆಯ ಉದ್ಯೋಗಿಯ ಲಕ್ಷಣ.
ನೀವು ಎಷ್ಟೇ ಓದಿರಿ, ಏನೇ ಓದಿರಿ, ಉದ್ಯೋಗಕ್ಕೆ ಸೇರಿದ ಆರಂಭದಲ್ಲಿ ಕಲಿತುಕೊಳ್ಳಬೇಕಾದ ಕೆಲವೊಂದನ್ನು ಯಾವ ಶಿಕ್ಷಣ ಕೂಡಾ ಹೇಳಿಕೊಡುವುದಿಲ್ಲ. ವಿದ್ಯಾರ್ಥಿ ಜೀವನದಿಂದ ಉದ್ಯೋಗ ಜೀವನಕ್ಕೆ ಹೊಂದಿಕೊಳ್ಳುವ ಸಂದರ್ಭದಲ್ಲಿ ಒಂದಿಷ್ಟು ತಪ್ಪುಗಳಾಗುತ್ತವೆ. ಆದರೆ, ಅವನ್ನು ಅಲ್ಲಿಯೇ ತಿದ್ದಿಕೊಳ್ಳುವ ಜಾಣತನ ಹಾಗೂ ಚುರುಕು ನಿಮ್ಮಲ್ಲಿದ್ದರೆ ಖಂಡಿತಾ ಬೆಳೆಯಬಹುದು. ಸಾಮಾನ್ಯವಾಗಿ ಮೊದಲನೇ ಬಾರಿ ಉದ್ಯೋಗಕ್ಕೆ ಸೇರಿದಾಗ ಮಾಡುವ ತಪ್ಪುಗಳಿವು. ಇವನ್ನು ಮಾಡದಂತೆ ಎಚ್ಚರ ವಹಿಸಿ.
ಕೆಲಸದ ಇಂಟರ್‌ವ್ಯೂ ಎಂದರೆ ತಮಾಷೇನಾ?
ಲೇಟಾಗಿ ಹೋಗಿ ಬೇಗ ಹೊರಡುವುದು
ಬಹಳಷ್ಟು ಜನರಿಗೆ ಟೈಮ್ ಸೆನ್ಸ್ ಇರುವುದಿಲ್ಲ. ಅವುಗಳಲ್ಲಿ ನೀವೂ ಒಬ್ಬರಾಗಬೇಡಿ. ಕೆಲಸಕ್ಕೆ ತಡವಾಗುವುದಕ್ಕೆ ಟ್ರಾಫಿಕ್ಕು ಅದೂ ಇದೂ ಸಮಸ್ಯೆ ಹೇಳಿಕೊಂಡು ನೀವು ನುಣುಚಿಕೊಳ್ಳಲು ನೋಡಬಹುದು. ಆದರೆ, ಪ್ರತೀ ದಿನ ಇದೇ ರಾಗ ಹಾಡುವುದು ಸಮಂಜಸವಲ್ಲ. ಏಕೆಂದರೆ ಇದೀಗ ನಿಮ್ಮ ಸಮಯಕ್ಕೆ ಸಂಬಳ ಪಡೆಯುತ್ತಿದ್ದೀರಿ. ಅದನ್ನು ಸರಿಯಾಗಿ ನಿಭಾಯಿಸುವುದು ನಿಮ್ಮ ಕರ್ತವ್ಯ. ಯಾವಾಗಲೂ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಿ. ಮೀಟಿಂಗ್ ಹಾಗೂ ಇತರೆ ಅಪಾಯಿಂಟ್‌ಮೆಂಟ್‌ಗಳಿಗೆ 10 ನಿಮಿಷ ಮೊದಲೇ ಹಾಜರಿರಿ.
undefined
ಡೆಡ್ಲೈನ್ ಮಿಸ್ ಮಾಡುವುದು
ಉದಾಸೀನತೆ ನಿಮ್ಮ ಔದ್ಯೋಗಿಕ ಬದುಕಿಗೆ ಮುಳುವಾಗಕೂಡದು. ಶಾಲೆಯಲ್ಲಿ ತಿಂಗಳಿಡೀ ಆಡಿಕೊಂಡಿದ್ದು, ಪರೀಕ್ಷೆ ಹಿಂದಿನ ದಿನ ರಾತ್ರಿ ಇಡೀ ಕುಳಿತು ಪಾಸ್ ಆದಂತಲ್ಲ ಪ್ರಾಜೆಕ್ಟ್‌ಗಳು. ಹೆಚ್ಚು ಸಮಯವಿದ್ದರೂ ನಿಮಗೆ ಅಸೈನ್ ಆಗುತ್ತಿದ್ದಂತೆಯೇ ಆರಂಭಿಸಿ, ಆಗ ಹೊಸ ಹೊಸ ಐಡಿಯಾ ಹಾಕಿ ಬಹಳ ನೀಟ್ ಆಗಿ ಪ್ರಾಜೆಕ್ಟ್ ರೆಡಿ ಮಾಡಬಹುದು. ಬಹಳಷ್ಟು ಉದ್ಯೋಗ ಕ್ಷೇತ್ರಗಳಲ್ಲಿ ಟೀಂ ವರ್ಕ್ ಬೇಕಾಗುತ್ತದೆ. ಅಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಅವಲಂಬಿತರಾಗಿರುತ್ತಾರೆ. ನಿಮ್ಮ ಕಾರಣದಿಂದ ಉಳಿದವರು ತೊಂದರೆ ಅನುಭವಿಸುವಂತೆ ಮಾಡಬೇಡಿ.
ಪ್ರಾಣಿ ಫೋಟೋ ನೋಡಿದ್ರೆ ಹೆಚ್ಚುತ್ತೆ ಪ್ರೊಡಕ್ಟಿವಿಟಿ!
ಸಮಯ ನೋಡುತ್ತಿರುವುದು
ಪ್ರತಿ ದಿನ ಕೆಲಸ ಮಾಡುವಾಗ ಮಧ್ಯೆ ಮಧ್ಯೆ ಗಡಿಯಾರ ನೋಡುತ್ತಿರುವುದು ಒಳ್ಳೆಯ ಉದ್ಯೋಗಿಯ ಲಕ್ಷಣವಲ್ಲ. ಇದು ನಿಮಗೆ ಕೆಲಸದಲ್ಲಿ ಆಸಕ್ತಿ ಹಾಗೂ ಶಿಸ್ತಿಲ್ಲ ಎಂಬುದನ್ನು ಹೇಳುತ್ತದೆ. ಒಂದೊಂದು ದಿನ ತಡವಾಗಬಹುದು, ಕೆಲ ದಿನ ಬೇಗ ಕಚೇರಿಗೆ ಹೋಗಬೇಕಾಗಬಹುದು. ಆದರೆ, ಅದಕ್ಕೆಲ್ಲ ಅಳುತ್ತಾ, ಓವರ್‌ಟೈಂ ಕೆಲಸ ಮಾಡುತ್ತಿದ್ದೇನೆಂದು ಹಾರಾಡುವ ಅಗತ್ಯವಿಲ್ಲ. ದೊಡ್ಡ ದೊಡ್ಡ ಸ್ಥಾನಕ್ಕೆ ಹೋದ ಮೇಲೆ ಓವರ್‌ಟೈಂ ಬಗ್ಗೆ ಯೋಚಿಸಬಹುದು.
ಸೋಷ್ಯಲ್ ಮೀಡಿಯಾಗಳಲ್ಲಿ ಅನ್‌ಪ್ರೊಫೆಷನಲ್ ಪೋಸ್ಟ್‌ಗಳು
ಕ್ಯಾಂಪಸ್‌ನಿಂದ ಕ್ಯೂಬಿಕಲ್‌ಗೆ ಬದಲಾಗಿದ್ದೀರಿ ಎಂಬುದು ಗಮನದಲ್ಲಿರಲಿ. ಈ ಸಂದರ್ಭದಲ್ಲಿ ಅಫೆನ್ಸಿವ್ ಆದ, ಅನ್‌ಪ್ರೊಫೆಶನಲ್ ಆದ ಪೋಸ್ಟ್‌ಗಳು, ಫೋಟೋಗಳು ಸೋಷ್ಯಲ್ ಮೀಡಿಯಾದಲ್ಲಿದ್ದರೆ ಅದು ನಿಮ್ಮ ಘನತೆಗೆ ಧಕ್ಕೆ ತರುತ್ತದೆ. ಕೆಲಸಕ್ಕೆ ಅರ್ಜಿ ಸಲ್ಲಿಸುವಾಗಲೇ ಸೋಷ್ಯಲ್ ಮೀಡಿಯಾ ಸ್ವಚ್ಛತಾ ಅಭಿಯಾನ ನಡೆಸಿ. ಕಂಪನಿಗಳು ಖಂಡಿತವಾಗಿ ನಿಮ್ಮ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತವೆ. ಈ ತಾಣವನ್ನು ನಿಮ್ಮ ವೈಯಕ್ತಿಕ ಬ್ರಾಂಡ್ ಹುಟ್ಟುಹಾಕಲು ಬಳಸಿಕೊಳ್ಳಿ. ಉದ್ಯೋಗ ಕ್ಷೇತ್ರ ಬಯಸುವಂಥ ಪೋಸ್ಟ್‌ಗಳನ್ನು ಹಾಕಲು ಆರಂಭಿಸಿ.
ಸಂದರ್ಶನದಲ್ಲಿ 'ನಿಮ್ಮ ಬಗ್ಗೆ ಹೇಳಿ' ಎಂದಾಗ ಏನು ಹೇಳ್ಬೇಕು?
ಕೆಟ್ಟ ಆ್ಯಟಿಟ್ಯೂಡ್
ಇದು ಶಾಲೆಯಲ್ಲಾದರೂ ಅಷ್ಟೆ, ಕಚೇರಿಯಲ್ಲಾದರೂ ಅಷ್ಟೆ, ಮನೆಯಲ್ಲಿ ಕೂಡಾ ಯಾರಿಗೂ ಸಂತೋಷ ನೀಡುವುದಿಲ್ಲ. ನಿಮ್ಮ ಹತ್ತಿರ ಬರಬೇಕೆನಿಸುವುದಿಲ್ಲ, ಒಳ್ಳೆಯ ಅಭಿಪ್ರಾಯ ಹುಟ್ಟು ಹಾಕುವುದಿಲ್ಲ. ಜನರು ತಮಗಿಷ್ಟವಾಗುವ ಜನರೊಂದಿಗೆ ಮಾತ್ರ ಬಿಸ್ನೆಸ್ ಮಾಡಬಯಸುತ್ತಾರೆ. ನೀವು ಮತ್ತೊಬ್ಬರನ್ನು ಅಗೌರವದಿಂದ ಕಂಡರೆ, ಕೆಲಸದಲ್ಲಿ ಅನಾಸಕ್ತಿ ತೋರಿಸಿದರೆ, ಅದನ್ನು ನಿಮ್ಮ ಸಹೋದ್ಯೋಗಿಗಳು ಹಾಗೂ ಸುಪೀರಿಯರ್ಸ್ ಗಮನಿಸಿಯೇ ಗಮನಿಸುತ್ತಾರೆ. ನಿಮ್ಮನ್ನು ಜನರು 20 ವರ್ಷಗಳ ಬಳಿಕವೂ ನೆನೆಸಿಕೊಳ್ಳಬೇಕೆಂದರೆ ನಿಮ್ಮ ವರ್ತನೆ ಹಾಗೂ ಆ್ಯಟಿಟ್ಯೂಡ್ನಲ್ಲಿ ಶಿಸ್ತು, ಪ್ರೀತಿ, ನ್ಯಾಯ ಎಲ್ಲವೂ ಇರಬೇಕು.
ಹೋಂವರ್ಕ್ ಮಾಡದೇ ಇರುವುದು
ಕೆಲಸವಾದ ಕೂಡಲೇ ಆ ಕಂಪನಿಯ ಇತಿಹಾಸ, ಸಂಸ್ಕೃತಿ, ಉದ್ಯೋಗಿಗಳು, ಸ್ಪರ್ಧಿಗಳು ಹಾಗೂ ನಿರ್ವಾಹಕ ಮಂಡಳಿಯ ಕುರಿತು ಸಾಧ್ಯವಾದಷ್ಟು ರಿಸರ್ಚ್ ಮಾಡಿ ತಿಳಿದುಕೊಳ್ಳಿ. ಹೊಸ ಉದ್ಯೋಗಿಗಳು ತಮ್ಮ ಕಂಪನಿಯ ಸಿಇಒ, ಮಾಲೀಕ, ಮ್ಯಾನೇಜರ್ ಮುಂತಾದವರನ್ನು ಮುಖ ನೋಡಿದರೆ ಗುರುತಿಸುವಷ್ಟು ಶಕ್ತರಿರಬೇಕು. ಎಲಿವೇಟರ್ ಅಥವಾ ಮೀಟಿಂಗ್ ಕೋಣೆಯಲ್ಲಿ ಈ ಬಗ್ಗೆ ತಿಳಿಯದೆ ಅವಮಾನ ಅಥವಾ ಮುಜುಗರಕ್ಕೀಡಾಗುವಂತೆ ಮಾಡಿಕೊಳ್ಳಬೇಡಿ.
ಎಷ್ಟೇ ಎತ್ತರಕ್ಕೇರಿದರೂ ಹತ್ತಿದ ಏಣಿನ ಒದೆಯಬೇಡಿ!
ಭಾಗಿಯಾಗದಿರುವುದು
ಮೀಟಿಂಗ್‌ಗಳಲ್ಲಿ ತೆಪ್ಪಗೆ ಕುಳಿತೆದ್ದು ಬರುವುದು ಅಥವಾ ಇನ್ಯಾರಿಗೂ ಮಾತಾಡಲೇ ಅವಕಾಶ ನೀಡದಷ್ಟು ಮಾತನಾಡುವುದು- ಎರಡೂ ಅಭ್ಯಾಸಗಳು ಸರಿಯಲ್ಲ. ಗಂಪುಚರ್ಚೆಗಳಲ್ಲಿ ಪ್ರಶ್ನೆ ಕೇಳುವುದು, ಎಲ್ಲರ ಅಭಿಪ್ರಾಯ ಕೇಳುವುದು, ನಿಮ್ಮ ಅಭಿಪ್ರಾಯ ಹೇಳುವುದು- ಇದರಿಂದ ಉತ್ತಮ ಇಂಪ್ರೆಶನ್ ಕ್ರಿಯೇಟ್ ಮಾಡುವ ಜೊತೆಗೆ ಕಲಿಕೆಗೂ ಅವಕಾಶ ಸಿಗುತ್ತದೆ.