ಲೇಡಿಸ್ ಪಿಜಿಗೆ ನುಗ್ಗಿ ಕತ್ತು ಕೊಯ್ದು ಯುವತಿಯ ಬರ್ಬರ ಹತ್ಯೆ: ಪ್ರಿಯತಮನಿಂದಲೇ ಕೃತ್ಯ

By Govindaraj S  |  First Published Jul 24, 2024, 9:31 AM IST

ತಡರಾತ್ರಿ 11.10 ರಿಂದ 11.30ರ ಸುಮಾರಿಗೆ ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ ಆರೋಪಿ, ಮೂರನೇ ಮಹಡಿಯಲ್ಲಿನ ರೂಮಿನ ಸಮೀಪದಲ್ಲೇ ಯುವತಿ ಮೇಲೆ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ. 


ಬೆಂಗಳೂರು (ಜು.24): ಮಹಿಳಾ ಪೇಯಿಂಗ್​ ಗೆಸ್ಟ್​ (ಪಿ.ಜಿ) ಒಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ಕೋರಮಂಗಲದ ವಿ.ಆರ್.ಲೇಔಟ್‌ನಲ್ಲಿ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ‌ (24) ಕೊಲೆಯಾದ ಯುವತಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೃತಿ ಕುಮಾರಿ ಕೆಲಸ ಮಾಡುತ್ತಿದ್ದರು. 

ತಡರಾತ್ರಿ 11.10 ರಿಂದ 11.30ರ ಸುಮಾರಿಗೆ ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ ಆರೋಪಿ, ಮೂರನೇ ಮಹಡಿಯಲ್ಲಿನ ರೂಮಿನ ಸಮೀಪದಲ್ಲೇ ಯುವತಿ ಮೇಲೆ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ. ಸ್ಥಳದಲ್ಲಿಯೇ ಕೃತಿ ಕುಮಾರಿ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಕೋರಮಂಗಲ ಪೊಲೀಸರು, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಚಯಸ್ಥ ವ್ಯಕ್ತಿಯಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪಿ.ಜಿಯಲ್ಲಿನ ಭದ್ರತಾ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tap to resize

Latest Videos

Union Budget 2024: ನಿರ್ಮಲಾ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ: ಸಿಎಂ ಸಿದ್ದರಾಮಯ್ಯ

ಕೃತಿ ಕುಮಾರಿ ಮೊಬೈಲ್ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಅಕೆಯ ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದಿದ್ದಾರೆ. ಕೊನೆಯದಾಗಿ ಯಾರಿಗೆ ಕಾಲ್ ಮಾಡಿದ್ದಾಳೆ. ಯಾವ ಯಾವ ನಂಬರ್ ನಿಂದ ಈಕೆಗೆ ಕಾಲ್ ಬಂದಿದೆ ಎಂದು ಪರಿಶೀಲನೆ ನಡೆಸುತ್ತಿದ್ದು, ಸಿಸಿಟಿವಿಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಪಿಜಿಗೆ ಯುವತಿ ಆಗಮಿಸಿದ್ದು ಯಾವಾಗ..? ಕೊನೆಯದಾಗಿ ಅಕೆ ಎಲ್ಲಿ ಎಲ್ಲಿ ಹೋಗಿದ್ದಾಳೆ ಎನ್ನುವ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದು, ಮೂರು ವಿಶೇಷ ತಂಡ ರಚಿಸಿ ಆರೋಪಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

 

ಪ್ರಿಯತಮನಿಂದಲೇ ಕೃತಿ ಕುಮಾರಿ ಕೊಲೆ: ಇನ್ನು  ಕೃತಿ ಕುಮಾರಿ ಪ್ರೀತಿಸುತ್ತಿದ್ದ ಯುವಕನಿಂದಲೇ ಕೊಲೆಯಾಗಿದ್ದಾಳೆ. 11:30 ಕ್ಕೆ ಕೃತಿ ಕುಮಾರಿಯೇ ಯುವಕನನ್ನ ಮೇಲ್ನೋಟಕ್ಕೆ ಕರೆದೊಯ್ಯಿರುರವ ಮಾಹಿತಿ ಸಿಕ್ಕಿದ್ದು, ಪಿಜಿಯಿಂದ ಹೊರ ಬಂದು ರಾತ್ರಿ ಊಟ ಮಾಡಿ ಕೃತಿ ಕುಮಾರಿ ಹಾಗೂ ಯುವಕ ಪಿಜಿಗೆ ವಾಪಸ್ ಆಗಿದ್ದಾರೆ. ಈ ವೇಳೆ ಕೃತಿಕುಮಾರಿಯೇ ಆತನನ್ನ ಕರೆದೊಯ್ದಿರುವ ಸಿಸಿಟಿವಿ ದೃಶ್ಯ ಪೊಲೀಸರಿಗೆ ಲಭ್ಯವಾಗಿದ್ದು, ನಂತರ ರೂಂ ನಲ್ಲಿ ಇಬ್ಬರ ಮಧ್ಯೆ ಗಲಾಟೆಯಾಗಿ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಯ ಮಾಹಿತಿಯನ್ನು ಕೊರಮಂಗಲ ಪೊಲೀಸರು ಕಲೆ ಹಾಕುತ್ತಿದ್ದಾರೆ.

ಪ್ರಕೃತಿ, ಚಾಮುಂಡಿದೇವಿ ಕಾಂಗ್ರೆಸ್‌ ಸರ್ಕಾರದ ಪರವಿದೆ: ಸಿಎಂ ಸಿದ್ದರಾಮಯ್ಯ

ಎರಡು ದಿನದ ಹಿಂದೆ ಪಿಜಿಗೆ ಸೇರಿದ್ದ ಯುವತಿ, ನಿನ್ನೆ ಲಗೇಜ್ ತೆಗೆದುಕೊಂಡು ಬಂದಿದ್ದ ಯುವಕನನ್ನ ಪಿಜಿ ಸೆಕ್ಯೂರಿಟಿ ಒಳ ಬಿಡುವುದಿಲ್ಲ ಎಂದಿದ್ದನಂತೆ. ನಂತರ ಪಿಜಿ ಸೆಕ್ಯುರಿಟಿ ಬಳಿ ನನ್ನ ಸಹೋದರ ಎಂದು ಹೇಳಿ ಬೇಗ ಕಳುಹಿಸುತ್ತೇನೆ ಎಂದು ಒಳ ಕರೆದುಕೊಂಡು ಕೃತಿ ಕುಮಾರಿ ಹೋಗಿದ್ದಳು ಎಂದು ತಿಳಿದು ಬಂದಿದೆ. ಕೋರಮಂಗಲದಲ್ಲಿ ರಾತ್ರಿ ಯುವತಿಯನ್ನ ಪಿಜಿಯಲ್ಲಿ ಕೊಲೆ ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಹುಡುಕಾಟ ನಡೆಸಲಾಗ್ತಿದೆ. ಬಿಹಾರ ಮೂಲದ ಯುವತಿ, ಟೆಕ್ ನಲ್ಲಿ ಕೆಲಸ ಮಾಡ್ತಿದ್ರು. ಕೊಲೆಗೆ ಕಾರಣ, ಕೊಲೆ ಮಾಡಿದವ್ರು ಯಾರು ಅನ್ನೋದು ತನಿಖೆ ಮಾಡ್ಬೇಕಿದೆ. ಪತ್ತೆಕಾರ್ಯ ನಡೀತಿದೆ. ಪಿಜಿಗಳಿಗೆ ಕೆಲ ರೂಲ್ಸ್ ಇದೆ‌. ಆತ ಒಳ ಹೋದ ಬಗ್ಗೆಯೂ ಪರಿಶೀಲನೆ ನಡೆಸಲಾಗ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ಹೇಳಿಕೆ ನೀಡಿದ್ದಾರೆ.

 

click me!