Latest Videos

ಪ್ರೀತಿ ನಿರಾಕರಿಸಿದಳೆಂದು ಯುವತಿ ಮನೆಗೆ ಕಲ್ಲು ತೂರಿದ ಪಾಗಲ್ ಪ್ರೇಮಿ!

By Ravi JanekalFirst Published May 25, 2024, 12:51 PM IST
Highlights

ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಬೆಳಗಾವಿ ಜಿಲ್ಲೆಯ ಕಿಣೆ ಗ್ರಾಮದಲ್ಲಿ ಅಂತಹದ್ದೇ ಆರೋಪ ಕೇಳಿಬಂದಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೇಮ ಅಂತಾ ಯುವತಿಗೆ ಕಿರುಕುಳ ಕೊಡುತ್ತಿರುವ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27). ಯುವತಿ ಅದೇ ಗ್ರಾಮದವಳಾಗಿದ್ದು, ಬಿಕಾಂ ಓದುತ್ತಿದ್ದಾಳೆ. ಆದರೆ ಯುವತಿ ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದು ಇದರಿಂದ ಯುವತಿ ರೋಸಿಹೋಗಿದ್ದಾಳೆ.

ಬೆಳಗಾವಿ (ಮೇ.25): ಹುಬ್ಬಳ್ಳಿಯ ನೇಹಾ, ಅಂಜಲಿ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಬೆಳಗಾವಿ ಜಿಲ್ಲೆಯ ಕಿಣೆ ಗ್ರಾಮದಲ್ಲಿ ಅಂತಹದ್ದೇ ಆರೋಪ ಕೇಳಿಬಂದಿದೆ.

ಕಳೆದ ಮೂರು ವರ್ಷಗಳಿಂದ ಪ್ರೀತಿ ಪ್ರೇಮ ಅಂತಾ ಯುವತಿಗೆ ಕಿರುಕುಳ ಕೊಡುತ್ತಿರುವ ಕಿಣೆಯ ಗ್ರಾಮದ ತಿಪ್ಪಣ್ಣ ಡೋಕರೆ (27). ಯುವತಿ ಅದೇ ಗ್ರಾಮದವಳಾಗಿದ್ದು, ಬಿಕಾಂ ಓದುತ್ತಿದ್ದಾಳೆ. ಆದರೆ ಯುವತಿ ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದು ಇದರಿಂದ ಯುವತಿ ರೋಸಿಹೋಗಿದ್ದಾಳೆ.

ಹುಬ್ಬಳ್ಳಿ: ನೇಹಾ, ಅಂಜಲಿ ಹಂತಕರ ಪರ ವಕಾಲತ್ತು ವಹಿಸಲು ವಕೀಲರೇ ಸಿಗುತ್ತಿಲ್ಲ..!

ದಿನನಿತ್ಯ ಪ್ರೀತಿ ಪ್ರೇಮ ಅಂತಾ ಪೀಡಿಸುತ್ತಿರುವ ಪಾಗಲ್ ಪ್ರೇಮಿಯ ಕಾಟಕ್ಕೆ ಕಾಲೇಜಿಗೆ ಹೋಗದಂತಾಗಿದೆ. ಮನೆಯಿಂದ ಕಾಲೇಜಿಗೆ ಹೋಗೋದನ್ನೇ ಕಾಯುತ್ತ ಕೂರತನಂತೆ ಪಾಗಲ್ ಪ್ರೇಮಿ. ಕಾಲೇಜಿಗೆ ಹೋಗುವಾಗೆಲ್ಲ ಹಿಂದೆ ಬಿದ್ದು ಪ್ರೀತಿಸುವಂತೆ ಕಾಟ ಕೊಡೋದು ಮಾಡ್ತಾನಂತೆ ಇದರಿಂದ ಬೇಸತ್ತಿರುವ ಯುವತಿ ಕಾಲೇಜಿಗೆ ಹೋಗುವುದನ್ನೇ ನಿಲ್ಲಿಸಿಬಿಟ್ಟಿದ್ದಾಳೆ.  

ಹುಬ್ಬಳ್ಳಿ, ಧಾರವಾಡದಲ್ಲಿ ಮುಂದುವರಿದ ಪುಂಡರ ಹಾವಳಿ; ಕವಿವಿ ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಗೆ ಹಲ್ಲೆ ನಡೆಸಿದ ಕಿಡಿಗೇಡಿ!

ಅಷ್ಟಕ್ಕೂ ಸುಮ್ಮನಾಗದ ಪಾಗಲ್‌ ಪ್ರೇಮಿ, ಪ್ರೀತಿ ನಿರಾಕರಿಸಿದ್ದಾಳೆಂದು ಯುವತಿ ಮನೆ ಮೇಲೆ ಕಲ್ಲು ತೂರಿ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಲ್ಲದೇ ಕೊಲೆ ಬೆದರಿಕೆ ಹಾಕಿದ್ದಾನಂತೆ ಕಿರಾತಕ. ಹುಬ್ಬಳ್ಳಿ ಅಂಜಲಿ ಪ್ರಕರಣದಲ್ಲೂ ಹೀಗೆ ಆಯ್ತು, ಮೊದಲಿಗೆ ಅಂಜಲಿಗೆ ಕೊಲೆ ಬೆದರಿಕೆ ಹಾಕಿದ್ದ. ಅದನ್ನ ಪೊಲೀಸರಿಗೆ ತಿಳಿಸಿದರೂ ಅವೈಡ್ ಮಾಡಿದ್ದ ಪೊಲೀಸರು. ಕೊನೆಗೆ ಅಂಜಲಿ ಕೊಂದೇ ಬಿಟ್ಟ. ಇದೀಗ ಬೆಳಗಾವಿ ಪಾಗಲ್ ಪ್ರೇಮಿ ಸಹ ಅದೇ ರೀತಿ ಯುವತಿಗೆ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದ್ದು, ಅನಾಹುತ ನಡೆಯುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. 

click me!