ಆಂಧ್ರ ಪ್ರದೇಶದ ನಂತರ ಕೇರಳದಲ್ಲೊಂದು ಪ್ರಕರಣ/ ಅಲ್ಲಾಗಾಗಿ ಮಗವನ್ನು ತ್ಯಾಗ ಮಾಡಿದೆ/ ಬಾತ್ ರೂಂನಲ್ಲಿ ಮಗುವಿನ ಹೆಣ ಬಿದ್ದಿತ್ತು/ ಮಗುವನ್ನು ತ್ಯಾಗ ಮಾಡಿದೆ ಎನ್ನುತ್ತಿರುವ ಮಹಿಳೆ
ತಿರುವನಂತಪುರ(ಫೆ. 07) ಭಾನುವಾರ ಬೆಳಗಿನ ಜಾವ ಪಳಕ್ಕಾದ್ ಪೊಲೀಸ್ ಠಾಣೆಗೆ ಒಂದು ಕರೆ ಬರುತ್ತದೆ. ಆ ಕಡೆಯಿಂದ ಮಾತನಾಡುತ್ತಿದ್ದ ಮಹಿಳೆ ಶಾಕಿಂಗ್ ವಿಚಾರವೊಂದನ್ನು ಹೇಳುತ್ತಾರೆ.
ನಾನು ನನ್ನ ಆರು ವರ್ಷದ ಮಗುವನ್ನು ಹತ್ಯೆ ಮಾಡಿದ್ದೇನೆ. ಮಗು ಅಮಿಲ್ ನನ್ನು ಅಲ್ಲಾಗಾಗಿ ತ್ಯಾಗ ಮಾಡಿದ್ದೇನೆ ಎನ್ನುತ್ತಾರೆ. ಕರೆ ಮಾಡಿದ್ದ ಶಹಿದಾ ಮನೆಗೆ ಕೂಡಲೆ ಪೊಲೀಸರು ದೌಡಾಯಿಸುತ್ತಾರೆ.
ದೇವರ ಹೆಸರಿನಲ್ಲಿ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನೇ ಕೊಂದರು
ಬಾತ್ ರೂಂನಲ್ಲಿ ರಕ್ತಸಿಕ್ತವಾಗಿ ಮಗುವಿನ ದೇಹ ಬಿದ್ದುಕೊಂಡಿತ್ತು. ಮಗುವಿನ ಕುತ್ತಿಗೆ ಸೀಳಲಾಗಿತ್ತು. ವರದಿಗಳು ಹೇಳುವಂತೆ ಆಶಹೀದಾ ಗಂಡ ಸುಲೇಮಾನ್ ಮತ್ತು ಇನ್ನು ಇಬ್ಬರು ಮಕ್ಕಳ ಇನ್ನೊಂದು ಕೋಣೆಯಲ್ಲಿ ನಿದ್ದೆ ಮಾಡುತ್ತಿದ್ದರು.
ಸುಲೇಮಾನ್ ಗಲ್ಫ್ ದೇಶಗಳಲ್ಲಿ ಕೆಲಸ ಮಾಡಿ ಹಿಂದಿರುಗಿದ್ದವರು. ಮಹಿಳೆ ಹತ್ತಿರದ ಮದರಸಾ ಒಂದರಲ್ಲಿ ಟೀಚರ್ ಆಗಿ ಕೆಲಸ ಮಾಡುತ್ತಿದ್ದು ಮೂರು ತಿಂಗಳ ಗರ್ಭಿಣಿ .
ಅಲ್ಲಾನಿಗೆ ಪ್ರಾರ್ಥನೆ ಮಾಡಿ ಮಗುವನ್ನು ತ್ಯಾಗ ಮಾಡಿದ್ದೇನೆ ಎಂದು ಮಹಿಳೆ ವಿಚಾರಣೆ ವೇಳೆ ಹೇಳಿದ್ದು ಆಕೆ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಹತ್ಯೆ ಮಾಡಿದ ತಾಯಿಯ ಕೈಗಳಿಗೂ ಗಾಯವಾಗಿದೆ. ಮಹಿಳೆ ಪಕ್ಕದ ಮನೆಯವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆಂಧ್ರ ಪ್ರದೇಶದಲ್ಲಿಯೂ ಕೆಲ ದಿನಗಳ ಹಿಂದೆ ಇಂಥದ್ದೆ ಘಟನೆ ನೆಡೆದಿತ್ತು. ಹೆಣ್ಣು ಮಕ್ಕಳನ್ನು ಪ್ರೊಫೆಸರ್ ತಂದೆ ತಾಯಿಯೇ ಬಲಿ ಕೊಟ್ಟಿದ್ದರು.