Bengaluru Crime News: ನೇಕಾರನ ಹತ್ಯೆ ಕೇಸ್‌ಗೆ ಟ್ವಿಸ್ಟ್:‌ ಪ್ರಿಯಕರನ ಜತೆ ಸೇರಿ ಪತಿಯನ್ನೆ ಕೊಂದ ಪತ್ನಿ

By Manjunath Nayak  |  First Published Oct 27, 2022, 1:22 PM IST

Bengaluru Crime News: ಮೃತನ ಹೆಂಡತಿ ಹಾಗೂ ಪ್ರಿಯಕರ ಸೇರಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಕೃತ್ಯಕ್ಕೂ ಮೊದಲು ಆರೋಪಿ ಹಾಗೂ ಮೃತನ ಪತ್ನಿ ಹಲವು ಬಾರಿ ಡಿಸ್ಕಷನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ


ಬೆಂಗಳೂರು (ಅ. 27): ಆಂಧ್ರದ ಮೂಲದ ವ್ಯಕ್ತಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದು ಪರಾರಿಯಾಗಿದ್ದ ಘಟನೆ ಯಲಹಂಕ (Yelahanka) ಸಮೀಪ ನಡೆದಿತ್ತು.ಈ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು (Police) ಮೃತನ ಪತ್ನಿ ಹಾಗೂ ಪ್ರಿಯಕರ ಸೇರಿ ಕೊಲೆಗೆ ಸಂಚು ರೂಪಿಸಿದ್ದ ಬಗ್ಗೆ ಮಾಹಿತಿ ನೀಡಿದ್ದಾರೆ. ಅಕ್ಟೋಬರ್‌ 22ರಂದು ಕೊಂಡಪ್ಪ ಲೇಔಟ್‌ ನಿವಾಸಿ ಚಂದ್ರಶೇಖರ್‌ (33) ಹತ್ಯೆಯಾಗಿತ್ತು. ಮೃತ ಚಂದ್ರಶೇಖರ್ ವೃತ್ತಿಯಲ್ಲಿ ನೇಯ್ಗೆ ಕೆಲಸ ಮಾಡುತ್ತಿದ್ದರು. ಮನೆಯ ಮಹಡಿಯಲ್ಲಿ ರಾತ್ರಿ ನಿಂತಿದ್ದಾಗ ಚಂದ್ರಶೇಖರ್‌ ಮೇಲೆ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದರು. ಪ್ರಕರಣ ಕೈಗೆತ್ತಿಕೊಂಡಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಮೃತನ ಹೆಂಡತಿ ಹಾಗೂ ಪ್ರಿಯಕರ ಸೇರಿ ಚಂದ್ರಶೇಖರ್‌ ಕೊಲೆ ಮಾಡಿರುವುದು ಈಗ ತನಿಖೆಯಲ್ಲಿ ಬಯಲಾಗಿದೆ. 

ಕೃತ್ಯಕ್ಕೂ ಮೊದಲು ಆರೋಪಿ ಹಾಗೂ ಮೃತನ ಪತ್ನಿ ಹಲವು ಬಾರಿ ಡಿಸ್ಕಷನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಪತ್ನಿಯನ್ನು ಆರೋಪಿ ಅವತ್ತೆ ಮೀಟ್ ಆಗಿದ್ದಾನೆ. ಕೊಲೆಯಾದ ದಿನ ಚಂದ್ರಶೇಖರ್‌ನನ್ನು ನೀರು ಬಿಡಲು ಪತ್ನಿ ಟೆರೆಸ್‌ಗೆ ಕಳುಹಿಸಿದ್ದಾಳೆ. ಆರೋಪಿ ಟೆರೇಸ್ ಮೇಲೆ ಮೊದಲೇ ಕಾದುಕುಳಿತಿದ್ದು ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಹಲ್ಲೆಯ ನಂತರ ಪತ್ನಿ ಏನು ತಿಳಿಯದಂತೆ ನಾಟಕ ಮಾಡಿ ಆಸ್ಪತ್ರೆಗೆ ಪತಿಯನ್ನು ಕರೆತಂದಿದ್ದಾಳೆ. ಆಸ್ಪತ್ರೆಯಿಂದ ವ್ಯಕ್ತಿ ಹತ್ಯೆ ಆಗಿರುವ ಬಗ್ಗೆ ಪೊಲೀಸರಿಗೆ ಕರೆ ಬಂದಿದೆ. 

Tap to resize

Latest Videos

ಪತ್ನಿಗೆ ಬೇರೆಯವರ ಜೊತೆ ಸಂಬಂಧ ಪತ್ತೆ: ಹಿಂದೂಪುರದಿಂದ ಓರ್ವ ವ್ಯಕ್ತಿ ಬಂದು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಹಿಂದೂಪುರದ ಕಿಯಾ ಕಾರ್ ಶೋ ರೂಂ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಆರೋಪಿತೆ ಸರ್ಕಾರಿ ಕಾರ್ಯಕ್ರಮಗಳಿಗೆ ವಾಲೆಂಟಿಯರ್ ಆಗಿ ಕೆಲಸ ಮಾಡುತ್ತಿದ್ದಳು. ಊರಲ್ಲಿದ್ದಾಗ ಇಬ್ಬರಿಗೂ ಪ್ರೀತಿಯಾಗಿತ್ತು. ಇಷ್ಟವಿಲ್ಲದಿದ್ರು ಚಂದ್ರು ಜೊತೆಗೆ ಮನೆಯವರು ಮದುವೆ ಮಾಡಿಸಿದ್ದರು. ಮೃತ ಚಂದ್ರುಗೆ ಪತ್ನಿಗೆ ಬೇರೆ ವ್ಯಕ್ತಿಯ ಜೊತೆ ಸಂಬಂಧ ಇರೋದು ಗೊತ್ತಾಗಿದೆ. ಈ ಸಂಬಂಧ ಹಿಂದೂಪುರದಲ್ಲಿ ದೂರನ್ನ ಕೂಡ ನೀಡಿದ್ದರು. 

ಅಕ್ರಮ ಸಂಬಂಧ ಬಯಲು; ಹೆಂಡತಿಯ ಮೇಲೆ ಕಾರು ಹತ್ತಿಸಿದ ಸಿನೆಮಾ ನಿರ್ಮಾಪಕ

ಹೀಗಾಗಿ ಪತಿ ಜೊತೆ ಹೊಂದಾಣಿಕೆ ಇಲ್ಲದ ಕಾರಣ ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ ಸಂಚು ರೂಪಿಸಿದ್ದಾಳೆ. ಅಲ್ಲದೇ ಕೃತ್ಯಕ್ಕೂ ಮೊದಲು ಆರೋಪಿಗೆ ಪೋನ್ ಮಾಡಲು ಈಕೆಯೇ ಹಿಂದೂಪುರಕ್ಕೆ ತೆರಳಿ ಹೊಸ ಸಿಮ್ ಕೊಟ್ಟಿದ್ದಾಳೆ. ಮೂರೂವರೆ ವರ್ಷಗಳ ಹಿಂದೆ ಆಂಧ್ರಪ್ರದೇಶ ರಾಜ್ಯ ಹಿಂದೂಪುರ ತಾಲೂಕಿನ ಪೆಡಿಹಟ್ಟಿಗ್ರಾಮದ ಮೃತ ಚಂದ್ರಶೇಖರ್‌ ಹಾಗೂ ಶ್ವೇತಾ ವಿವಾಹವಾಗಿದ್ದು, ಐದು ತಿಂಗಳ ಹಿಂದೆ ಯಲಹಂಕಕ್ಕೆ ಬಂದು ದಂಪತಿ ನೆಲೆಸಿದ್ದರು. ನೇಯ್ಗೆ ಕೇಂದ್ರದಲ್ಲಿ ಚಂದ್ರಶೇಖರ್‌ ಕೆಲಸ ಮಾಡುತ್ತಿದ್ದರೆ, ಎಂಎಸ್ಸಿ ಓದಿದ್ದ ಶ್ವೇತಾ ಗೃಹಿಣಿಯಾಗಿದ್ದರು. 

click me!