ಮಹಾಲಕ್ಮೀ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮೂರು ಹಂತಗಳಲ್ಲಿ ಕೈಗೊಂಡಿದ್ದಾರೆ: ಮೊಬೈಲ್ ಫೋನ್ ವಿಶ್ಲೇಷಣೆ, ಸಿಸಿಟಿವಿ ಪರಿಶೀಲನೆ ಮತ್ತು ಪೋಸ್ಟ್ ಮಾರ್ಟಮ್ ವರದಿ. ಈ ಸುಳಿವುಗಳು ಆರೋಪಿಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆ ಎಂದು ಭಾವಿಸಲಾಗಿದೆ.
ಬೆಂಗಳೂರು (ಸೆ.22): ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಮಹಾಲಕ್ಮೀ ಕೊಲೆ ಪ್ರಕರಣದಲ್ಲಿ ಪೊಲೀಸರು ತನಿಖೆಯನ್ನು ಇನ್ನಷ್ಟು ತೀವ್ರ ಮಾಡಿದ್ದಾರೆ. ಪೋಸ್ಟ್ ಮಾರ್ಟ್ ನಡೆದು, ವರದಿ ಕೈಸೇರುವ ಹೊತ್ತಿಗಾಗಲೇ ಈ ಕೇಸ್‌ನ ಬಗ್ಗೆ ಇನ್ನಷ್ಟು ಮಾಹಿತಿ ಕಲೆ ಹಾಕಿರುವ ಪೊಲೀಸರು ಒಟ್ಟು ಮೂರೂ ಹಂತದಲ್ಲಿ ತನಿಖೆ ಮಾಡಲು ನಿರ್ಧಾರ ಮಾಡಿದ್ದಾರೆ. ಮೂರು ಹಂತಗಳಲ್ಲಿ ಆರೋಪಿಯ ಪತ್ತೆಗೆ ಪೊಲೀಸರು ಮುಂದಾಗಲಿದ್ದಾರೆ. ಈ ಪ್ರಕರಣದಲ್ಲಿ ಮೊದಲ ಎರಡು ಸುಳಿವು ಮಹತ್ವದ ತನಿಖೆ ಎನಿಸಿಕೊಳ್ಳಲಿದೆ ಪ್ರಕರಣದ ಮೊದಲ ಸುಳಿವು ಏನೆಂದರೆ, ಮೊಬೈಲ್ ರಿಟ್ರಿವ್, ಟವರ್ ಡಂಪ್ ಹಾಗೂ ಸಿಡಿಆರ್ ದಾಖಲೆಗಳು. ಸೆಪ್ಟೆಂಬರ್ 2ನೇ ತಾರೀಖು ಮಹಾಲಕ್ಮೀಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಸ್ವಿಚ್ ಆಫ್ ಆಗಿರುವ ಮೊಬೈಲ್ ಪೋನ್ ಲಾಕ್ ಓಪನ್ ಮಾಡಲಾಗುತ್ತದೆ. ಮೊಬೈಲ್ ಫೋನ್‌ನಲ್ಲಿರುವ ಚಾಟಿಂಗ್, ಗ್ಯಾಲರಿ ಪರಿಶೀಲನೆ ಮಾಡಲಾಗುತ್ತದೆ. ಈ ಚಾಟಿಂಗ್ ಗಳಲ್ಲಿ ಆಕೆಯೊಂದಿಗೆ ಗಲಾಟೆ ಅಥವಾ ತುಂಬಾ ಕ್ಲೋಸ್ ಇರುವವರ ಪತ್ತೆ ಮಾಡಲಾಗುತ್ತದೆ.
ಆ ಬಳಿಕ ಕೊಲೆಯಾದ ಸ್ಥಳದಲ್ಲಿ ಟವರ್ ಡಂಪ್ ಮಾಡಲಾಗುತ್ತದೆ. ಯಾವ ಯಾವ ನೆಟ್ವರ್ಕ್ ಇತ್ತು ಅನ್ನೋದು ಪತ್ತೆ ಹಚ್ಚಲಾಗುತ್ತದೆ. ಆ ನಂಬರ್ ಗಳ ಪರಿಶೀಲನೆ ಕೂಡ ನಡೆಯಲಿದೆ. ಅದರೊಂದಿಗೆ ಮಹಾಲಕ್ಷ್ಮಿಯ ಲಾಸ್ಟ್ ಕಾಲ್‌ಗಳನ್ನೂ ಕೂಡ ತನಿಖೆ ಮಾಡಲಿದ್ದಾರೆ. ಮಹಾಲಕ್ಷ್ಮಿ ನಂಬರ್ ಸಿಡಿಆರ್ ಗೆ ಹಾಕಿ ಆಕೆಗೆ ಯಾರೆಲ್ಲಾ ಕರೆ ಮಾಡಿದ್ದಾರೆ ಅನ್ನೊದು ಪತ್ತೆ ಮಾಡಲಾಗುತ್ತದೆ.
undefined
ಇನ್ನು 2ನೇ ಸುಳಿವು ಸಿಸಿಟಿವಿ ಪರಿಶೀಲನೆ: ಮಹಾಲಕ್ಷ್ಮಿ ಯಾವಾಗ ಮನೆಗೆ ಬಂದಿದ್ದಾಳೆ ಎಂಬುದನ್ನ ಸಿಸಿಟಿವಿ ಮೂಲಕ ಪತ್ತೆ ಮಾಡಲಾಗುತ್ತದೆ. ಆಕೆಯ ಹಿಂದೆ ಯಾರು ಬಂದಿದ್ದಾರೆ ಅನ್ನೋದು ಕೂಡ ಪರಿಶೀಲನೆಯಾಗಲಿದೆ. ಮನೆಗೆ ತೆರಳಿರೋದು ಅಲ್ಲಿಂದ ವಾಪಸ್ ಆಗಿರೋದು ಪತ್ತೆ ಮಾಡಲಾಗುತ್ತದೆ. ಸಿಕ್ಕ ಸಿಸಿಟಿವಿ ಬೆನ್ನು ಹತ್ತಿ ಆತನ ಮೂಲ ಹಾಗೂ ವಶಕ್ಕೆ ಪಡೆಯುವ ಕೆಲಸ ಆಗಲಿದೆ.
ಮೂರನೇ ಸುಳಿವು ಪಿಎಂ ರಿಪೋರ್ಟ್: ಈ ಕೇಸ್‌ನಲ್ಲಿ ಮೂರನೇ ಸುಳಿವು ಪೋಸ್ಟ್ ಮಾರ್ಟಮ್ ರಿಪೋರ್ಟ್. ಮೇಲಿನ ಎರಡು ಮಾಹಿತಿ ಕಷ್ಟವಾದಾಗ ಪಿಎಂ ರಿಪೋರ್ಟ್ ಪರಿಶೀಲನೆ ಮಾಡಲಾಗುತ್ತದೆ. ಪಿಂಎ ರಿಪೋರ್ಟ್ ನಲ್ಲಿ ಕೊಲೆ ಭೀಕರತೆ ತಿಳಿದುಕೊಳ್ಳಲಾಗುತ್ತದೆ. ದೇಹ ತುಂಡರಿಸುವುದಕ್ಕಿಂತ ಮುಂಚೆ ಕೊಲೆ ಬಗ್ಗೆ ಮಾಹಿತಿ ಕಲೆಹಾಕಿದ್ದು, ಮೃತ ಪಟ್ಟಿರೋದು ಮಹಿಳೆಯಾಗಿರುವ ಕಾರಣ ಲೈಂಗಿಕ ವಿಚಾರಕ್ಕಾಗಿ ಕೊಲೆಯಾಗಿದೆಯೇ? ಆಕೆಯ ಮೇಲೆ ಹಲ್ಲೆ ನಡೆದಿದೆಯೇ? ಕೊಲೆ ಯಾವ ರೀತಿ ಆಗಿದೆ ಅನ್ನೊದರ ಮೂಲ ಪತ್ತೆ ಮಾಡಲಾಗುತ್ತದೆ. ಸದ್ಯ ಪ್ರಕರಣದ ಬೆನ್ನುಬಿದ್ದಿರುವ ಪೊಲೀಸರಿಗೆ ಇಷ್ಟೂ ಮಾಹಿತಿ ಆರೋಪಿಯ ಸುಳಿವಿನ ಮಾಹಿತಿ ಆಗಲಿದ್ದು, ಇದೇ ಆಯಾಮದಲ್ಲಿ ಪೊಲೀಸರ ತನಿಖೆ ಸಾಗುತ್ತಿದೆ.
Bengaluru Fridge Murder: ಮಹಾಲಕ್ಷ್ಮೀ ಪೀಸ್ ಮರ್ಡರ್, ಯಾರ ಮೇಲಿದೆ ಮನೆಯವರ ಅನುಮಾನ?
ಮಗಳ ದೇಹ ಕಾಣುತ್ತಿದ್ದಂತೆ ಓಡಿ ಹೋದ ತಾಯಿ: ಫ್ರಿಡ್ಜ್ ಓಪನ್ ಮಾಡಿ ಮಗಳ ಮೃತ ದೇಹ ನೋಡುತ್ತಿದ್ದಂತೆ ಮನೆಯಿಂದ ಓಡಿದ ಮಹಾಲಕ್ಷ್ಮಿ ತಾಯಿ ಮೀನಾ ರಾಣಾ ಕೂಗುತ್ತಲೇ ಓಡಿ ಹೋಗಿದ್ದಾರೆ. ಮಗಳ ಸ್ಥಿತಿಯನ್ನ ನೋಡಲಾರದೆ ತಾಯಿ ಮನೆಯಿಂದ ಓಡಿ ಹೋಗಿದ್ದಾರೆ. ಹೆತ್ತ ಕರುಳು ತುಂಡು ತುಂಡಾಗಿರುವ ಮಗಳ ಮೃತದೇಹ ನೋಡಲಾರದೆ ಚೀರಾಟ ಮಾಡಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ.
Bengaluru Fridge Murder: ಮಹಾಲಕ್ಷ್ಮಿಯ ದೇಹ 30 ಪೀಸ್, ಫ್ರಿಜ್‌ನಿಂದ ಹೊರಬರ್ತಿತ್ತು ಹುಳಗಳು!