ಭಾನುವಾರ ಬೆಳಗ್ಗೆ ನಗರದ ಮಲ್ಪೆ ಪ್ರದೇಶದಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಂದು ಮತ್ತೊಬ್ಬ ಹಿರಿಯ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪದಲ್ಲಿ ಏರ್ ಇಂಡಿಯ ಉದ್ಯೋಗಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಅವನು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಉಡುಪಿ (ನ.17): ಭಾನುವಾರ ಬೆಳಗ್ಗೆ ನಗರದ ಮಲ್ಪೆ ಪ್ರದೇಶದಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಂದು ಮತ್ತೊಬ್ಬ ಹಿರಿಯ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪದಲ್ಲಿ ಏರ್ ಇಂಡಿಯ ಉದ್ಯೋಗಿ ಪ್ರವೀಣ್ ಚೌಗುಲೆಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು ಅವನು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ನಾಲ್ವರ ಪೈಕಿ 21-ವರ್ಷ ವಯಸ್ಸಿನ ಯುವತಿ ಅಯ್ನಾಝ್ ಪ್ರವೀಣ್‌ನ ಸಹೋದ್ಯೋಗಿದ್ದಳು. ಅಯ್ನಾಝ್ ವಿಚಾರದಲ್ಲಿ ಪ್ರವೀಣ್ ಬಹಳ ಪಾಸೆಸಿವ್ ಆಗಿದ್ದ.
ಅಯ್ನಾಝ್‌ಳನ್ನು ಅತಿಯಾಗಿ ಹಚ್ಚಿಕೊಂಡಿದ್ದ ಪ್ರವೀಣ್ ಚೌಗುಲೆ, ತನ್ನ ನಿಯಂತ್ರಣದಲ್ಲೇ ಇರಬೇಕು ಎಂಬ ಮನಸ್ಥಿತಿ ಹೊಂದಿದ್ದ. ಅಸೂಯೆ ಮತ್ತು ದ್ವೇಷದಿಂದ ಅಯ್ನಾಝ್ ಳನ್ನು ಕೊಲೆ ಮಾಡಲು ನಿರ್ಧಾರ ಮಾಡಲಾಗಿದ್ದು, ತನ್ನ ಜೊತೆ ಮಾತ್ರ ಮಾತನಾಡಬೇಕು, ನನ್ನ ಜೊತೆ ಮಾತ್ರ ಬೆರೆಯಬೇಕು ಎಂಬ ನಿಯಮವನ್ನು ಪ್ರವೀಣ್ ಹಾಕುತ್ತಿದ್ದ ಎಂದು ವಿಚಾರಣೆ ವೇಳೆ ಪ್ರವೀಣ್ ಹೇಳಿದನ್ನು ಉಡುಪಿ ಎಸ್.ಪಿ ಡಾ. ಅರುಣ್.ಕೆ ಮಾಹಿತಿ ನೀಡಿದ್ದಾರೆ.
undefined
ಇನ್ನು ಈ ಪ್ರಕರಣ ಸಬಂಧಪಟ್ಟಂತೆ ಹಂತಕ ಪ್ರವೀಣ್ ಅರುಣ್ ಚೌಗುಲೆ ಫೋಟೋಗೆ ಕಿರೀಟ ತೊಡಿಸಿ ಹಿಂದೂ ಮಂತ್ರ ಇನ್ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡುವ ಮುಖಾಂತರ ಸ್ಟೇಟಸ್ ಹಾಕಲಾಗಿದೆ. 15 ನಿಮಿಷದಲ್ಲಿ 4 ಕೊಲೆ ಇದು ವಲ್ಡ್ ರೆಕಾರ್ಡ್ ಎಂದು ಬರೆದು ವಿಕೃತಿ ಮೆರೆದಿದ್ದಾರೆ. ಘಟನೆ ಗಮನಕ್ಕೆ ಬರುತ್ತಿದ್ದಂತೆ ಕ್ರಮ ಕೈಗೊಂಡ ಉಡುಪಿ ಪೋಲಿಸರು, ಪೋಸ್ಟ್ ಹಾಕಿದವರ ವಿರುದ್ದ ಸೆನ್ ಠಾಣೆಯಲ್ಲಿ ಸುಮೋಟೋ ಪ್ರಕರಣ ದಾಖಲು ಮಾಡಿದ್ದಾರೆ. ಕೇಸ್ ದಾಖಲಾಗುತ್ತಿದ್ದಂತೆ ಹಿಂದೂ ಮಂತ್ರ ಖಾತೆಯಲ್ಲಿ ಆ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ಯತೀಂದ್ರ ಮೊಬೈಲ್ ಸಂಭಾಷಣೆ ವಿಚಾರ ತನಿಖೆಯಾಗಲಿ: ಆರಗ ಜ್ಞಾನೇಂದ್ರ
ಕೊಲೆ ಆರೋಪಿ 14 ದಿನ ಪೊಲೀಸ್ ಕಸ್ಟಡಿಗೆ: ಕೊಲೆ ಆರೋಪಿ ಪ್ರವೀಣ್ ಅರುಣ್ ಚೌಗುಲೆಯನ್ನು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಈ ವೇಳೆ ಪ್ರಕರಣದ ಬಗ್ಗೆ ಮಾಹಿತಿ ಪಡೆದ ನ್ಯಾಯಾಧೀಶರು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ 14 ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯುವಂತೆ ಆದೇಶ ಹೊರಡಿಸಿದರು. ಅಂದರೆ, ನವೆಂಬರ್ 28ರವರೆಗೆ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ಮಾಡಲು ಅನುಮತಿ ನೀಡಲಾಗಿದೆ.