Video: ಉಡುಪಿ 28ರ ಹೋಟೆಲ್ ಉದ್ಯಮಿಯ ಅಕ್ರಮ ಸಂಬಂಧಕ್ಕೆ ಗಂಡನನ್ನೇ ಮಗಿಸಿದ 36ರ ಬ್ಯೂಟಿ ಆಂಟಿ!

By Sathish Kumar KH  |  First Published Oct 26, 2024, 7:51 PM IST

ಉಡುಪಿಯ ಹೋಟೆಲ್ ಉದ್ಯಮಿ ಬಾಲಕೃಷ್ಣ ಪೂಜಾರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ, ಐದು ದಿನಗಳ ನಂತರ ಅವರ ಸಾವು ಕೊಲೆಯೆಂದು ಬಹಿರಂಗವಾಯಿತು. ಅವರ ಪತ್ನಿ ಮತ್ತು ಪ್ರಿಯಕರನೇ ಕೊಲೆಗಾರರು ಎಂದು ತನಿಖೆಯಿಂದ ತಿಳಿದುಬಂದಿದೆ.


ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾದ ಕಡಲತಡಿ ಉಡುಪಿಯಲ್ಲಿ ಸುಂದರ ಕುಟುಂಬವೊಂದು ವಾಸವಿತ್ತು. ಈ ಕುಟುಂಬದಲ್ಲಿ ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಇದ್ದರು. ಗಂಡ ಹೋಟೆಲ್​​ ನಡೆಸುತ್ತಿದ್ದರೆ, ಹೆಂಡತಿ ಬ್ಯೂಟಿ ಪಾರ್ಲರ್​​​ ಇಟ್ಟುಕೊಂಡಿದ್ದಳು. ದುಡ್ಡು ಕಾಸಿಗೇನು ತಂದರೆ ಇರಲಿಲ್ಲ. ಆದರೆ, ಚಿಂತೆ ಇದ್ದಿದ್ದು ಗಂಡನ ಆರೋಗ್ಯ. ಇತ್ತಿಚೆಗೆ ಗಂಡನ ಆರೋಗ್ಯ ತುಂಬಾನೆ ಕೆಟ್ಟು ಹೋಗಿತ್ತು. ಹೆಂಡತಿ ಬೆಂಗಳೂರು ಸೇರಿದಂತೆ ಹಲವು ಕಡೆ ಆತನಿಗೆ ಚಿಕಿತ್ಸೆ ಕೊಡಿಸಿದ್ದಳು. ಆದರೆ, ಆವತ್ತೊಂದು ದಿನ ಆಸ್ಪತ್ರೆಯಿಂದ ಮನೆಗೆ ಬಂದವನು ಮಲಗಿದ್ದಾಗಲೇ ಹೆಣವಾಗಿಬಿಟ್ಟಿದ್ದನು. ಎಲ್ಲರೂ ಅನಾರೋಗ್ಯದಿಂದ ಸತ್ತ ಅಂತ ಅಂತ್ಯಕ್ರಿಯೇ ಮಾಡಿಮುಗಿಸಿದ್ದರು. ಆದರೆ, ಆತ ಸತ್ತ 5ನೇ ದಿನ ಆತನ ಸಾವಿಗೆ ಅಸಲಿ ಕಾರಣ ಗೊತ್ತಾಗಿತ್ತು. ಆತನನ್ನ ಹಂತಕರು ಕೊಲೆ ಮಾಡಿಬಿಟ್ಟಿದ್ದರು. ಹಾಗಾದರೆ, ಆತನನ್ನ ಕೊಂದದ್ದು ಯಾರು..? ಯಾಕಾಗಿ ಮರ್ಡರ್​​ ಮಾಡಿದರು, ಹೋಟೆಲ್​ ಉದ್ಯಮಿಯ ಸಾವಿನ ರಹಸ್ಯವೇ ಇವತ್ತಿನ ಎಫ್​​.ಐ.ಆರ್​​.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಔಟ್​ ಆಫ್​ ಡೇಂಜರ್​ ಅಂತ ಅನ್ನಿಸಿಕೊಂಡು ಮನೆಗೆ ಬಂದವನು ಕೆಲವೇ ಗಂಟೆಗಳಲ್ಲಿ ಹೆಣವಾಗಿದ್ದನು. ಆತನ ಕುಟುಂಬದವರಿಗೆ  ಸಾವಿನ ಬಗ್ಗೆ ಸಂಶಯ ಮೂಡುತ್ತದೆ. ಹೀಗಾಗಿ ಅಂತ್ಯಕ್ರಿಯೇಗೂ ಮುನ್ನ ಪೋಸ್ಟ್​​ ಮಾರ್ಟಮ್​ ಮಾಡಿಸುತ್ತಾರೆ. ಆದರೆ, ಪಿ.ಎಂ ರಿಪೋರ್ಟ್​ ಬರೋದಕ್ಕೂ ಮೊದಲೇ ಆತನ ಸಾವಿನ ಸೀಕ್ರೆಟ್​​ ಬಯಲಾಗುತ್ತದೆ. ಬಾಲಕೃಷ್ಣನ ಹೆಂಡತಿಯೇ ಗಂಡನ ಸಾವಿನ ರಹಸ್ಯವನ್ನ ಬಾಯಿಬಿಡುತ್ತಾಳೆ. ಹಾಗಾದರೆ ಬಾಲಕೃಷ್ಣ ಸತ್ತಿದ್ದು ಹೇಗೆ ಗೊತ್ತಾ?

Tap to resize

Latest Videos

undefined

ಇದನ್ನೂ ಓದಿ: ನಿಮ್ಮ ಹೆಂಡತಿ 'ಕರಿಮಣಿ ಮಾಲೀಕ ನೀನಲ್ಲ' ಎಂದು ರೀಲ್ಸ್ ಮಾಡಿದರೆ ಗಂಡಂದಿರೇ ಹುಷಾರ್!

ಮದುವೆಯಾಗಿ 18 ವರ್ಷ ಸಂತೋಷದಿಂದ ಜೀವನ ಮಾಡಿದ್ದ ಬಾಲಕೃಷ್ಣ ಪೂಜಾರಿ ಹಾಗೂ ಪ್ರತಿಮಾಗೆ ಕಳೆದೊಂದು ವರ್ಷದ ಹಿಂದೆ ಕಾರ್ಕಳದ ಹೋಟೆಲ್​ ಉದ್ಯಮಿಯೊಬ್ಬನ ಪರಿಚಯವಾಗುತ್ತದೆ. ನಂತರ ಸ್ನೇಹವಾಗಿ ಅನೈತಿಕ ಸಂಬಂಧಕ್ಕೆ ತಿರುಗುತ್ತದೆ.  ಆಕೆಗೆ 35 ವರ್ಷವಾದರೆ ಆ ಹೋಟೆಲ್​ ಉದ್ಯಮಿಗೆ ಕೇವಲ 28 ವರ್ಷ. ಆದರೆ, ಕೆಲ ದಿನಗಳ ಹಿಂದೆ ಈ ವಿಷಯ ಗಂಡನಿಗೆ ಗೊತ್ತಾಗಿ ಹೆಂಡತಿಗೆ ಬುದ್ಧಿ ಮಾತು ಹೆಳಿದ್ದಾನೆ. ಯಾವಾಗ ಗಂಡನಿಗೆ ವಿಷಯ ಗೊತ್ತಾಯ್ತೋ ಹೆಂಡತಿ ಮತ್ತು ಪ್ರೀಯಕರ ಸೇರಿ ಗಂಡನನ್ನೇ ಮುಗಿಸುವ ನಿರ್ಧಾರ ಮಾಡುತ್ತಾರೆ. ಆದರೆ, ಕಾನೂನಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಬಾಲಕೃಷ್ಣ ತಿನ್ನುವ ಊಟದಲ್ಲಿ ಸ್ಲೋ ಪಾಯ್ಸನ್​​ ಹಾಕೋದಕ್ಕೆ ಶುರು ಮಾಡುತ್ತಾಳೆ.

 

ಹೆಂಡತಿ ಕೊಡುತ್ತಿದ್ದ ಊಟದಲ್ಲಿ ಸ್ಲೋ ಪಾಯ್ಸನ್ ತಿಂದರೂ ಕೆಲ ದಿನಗಳ ಕಾಲ ಬದುಕುಳಿದ, ಅನಾರೋಗ್ಯದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಲಕೃಷ್ಣ ಮನೆಗೆ ಬರುತ್ತಾನೆ. ಆದರೆ, ಇಷ್ಟೊತ್ತಿಗೆ ಪ್ರತಿಮಾ ಮತ್ತು ಆಕೆಯ ಪ್ರೀಯತಮ ಸೇರಿ ಪ್ಲಾನ್​​ 'ಬಿ' ರೆಡಿ ಮಾಡಿಕೊಂಡಿದ್ದಾರೆ. ತಾವು ಮಾಡಿದ್ದ ಪ್ಲಾನ್​ ಬಿ ಅನ್ನ ಎಕ್ಸಿಕ್ಯೂಟ್​​ ಮಾಡಲು ಬಾಲಕೃಷ್ಣ ಆಸ್ಪತ್ರೆಯಿಂದ ಬಂದ ತಕ್ಷಣ ನೋಡಲು ಬಂದ ಎಲ್ಲ ಸಂಬಂಧಿಕರನ್ನು ಹೆಂಡತಿ ಉಪಾಯದಿಂದ ವಾಪಸ್​​ ಕಳಿಸಿಬಿಡುತ್ತಾಳೆ. ಅದೇ ರಾತ್ರಿ ವೇಳೆ ಗಂಡನನ್ನು ಕೊಲೆ ಮಾಡುತ್ತಾರೆ.

ಇದನ್ನೂ ಓದಿ: ಅಕ್ಕನ ಗಂಡನೊಂದಿಗೆ ಅಕ್ರಮ ಸಂಬಂಧಕ್ಕೆ ಗಂಡನಿಗೆ ಗುಂಡಿ ತೋಡಿದ ಸುಪನಾತಿ ಹೆಂಡತಿ!
 
ಇನ್ನೇನು ಸತ್ತೇಹೋದ ಎನ್ನುತ್ತಿದ್ದ ಬಾಲಕೃಷ್ಣ ಬದುಕಿಬಿಟ್ಟಿದ್ದಕ್ಕೆ, ಆತನ ಹೆಂಡತಿ ತೀರಾ ಕುಪಿತಗೊಂಡಿದ್ದಳು. ಮನೆಗೆ ಗಂಡನನ್ನು ನೋಡಲು ಬಂದಿದ್ದ ಎಲ್ಲಾ ಸಂಬಂದಿಕರನ್ನ ಅವರವರ ಮನೆಗೆ ಕಳಿಸಿದ ದಿನವೇ ಮಧ್ಯರಾತ್ರಿ ಪ್ರೀಯತಮನಿಗೆ ಕಾಲ್​ ಮಾಡಿದ್ದಾಳೆ. ಆತ ಹಿಂದಿನ ಬಾಗಿಲಿನಿಂದ ಬಂದು ಬಾಲಕೃಷ್ಣನ ಉಸಿರು ನಿಲ್ಲಿಸಿದ್ದಾನೆ. ನಂತರ ಹೆಂಡತಿ ನಾಟಕ ಮಾಡುತ್ತಾ, ಎಲ್ಲ ಸಂಬಂಧಿಕರಿಗೆ ಗಂಡ ಸತ್ತು ಹೋಗಿದ್ದಾನೆ ಎಂದು ಕರೆ ಮಾಡಿದ್ದಾಳೆ. ಆದರೆ, ಆತನ ಸಾವಿನ ಬಗ್ಗೆ ಅನುಮಾನ ಬದು ಪೋಸ್ಟ್ ಮಾರ್ಟಮ್ ಮಾಡಿಸಿದ್ದಾರೆ. ಆದರೆ, ಗಂಡನ ಕೊಲೆಯ ರಹಸ್ಯ ಬಯಲಾಗುತ್ತದೆ ಎನ್ನುವಾಗ ಸ್ವತಃ ಹೆಂಡತಿಯೇ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಕೊಲೆಯ ಸತ್ಯವನ್ನು ಬಾಯಿ ಬಿಟ್ಟಿದ್ದಾಳೆ. ಹೆಂಡತಿಯ ನಾಟಕ ಬಾಲಕೃಷ್ಣ ಸತ್ತು 5ನೇ ದಿನಕ್ಕೆ ಅಂತ್ಯವಾಗಿತ್ತು. ಆಕೆಯ ಅಣ್ಣನೇ ಅವಳ ಅಸಲಿ ಮುಖವನ್ನ ಬಯಲು ಮಾಡಿದ್ದನು.

click me!