ಯಲ್ಲವ್ವ ರೇವಪ್ಪ ಪೂಜೇರಿ, ಬೌರವ್ವ ಭೀಮಪ್ಪ ಮಿರ್ಜಿ ಎಂಬಿಬ್ಬರನ್ನು ಕಬ್ಬಿಣದ ರಾಡಿನಿಂದ ಹೊಡೆದಿದ್ದಲ್ಲದೇ, ಮನೆಯಂಗಳಕ್ಕೆ ಎಳೆದೊಯ್ದು ದೊಡ್ಡ ಕಲ್ಲಿನಿಂದ ತಲೆಗೆ ಜಜ್ಜಿ ಬರ್ಬರವಾಗಿ ಹತ್ಯೆಗೈದ ಕಾಡಪ್ಪ ಯಲ್ಲಪ್ಪ ಭುಜಂಗ.
ರಬಕವಿ-ಬನಹಟ್ಟಿ(ಮಾ.15): ಕ್ಷುಲ್ಲಕ ಕಾರಣಕ್ಕೆ ತನ್ನ ಅಕ್ಕನ ಇಬ್ಬರು ನಾದಿನಿಯರನ್ನು ಕೊಲೆಗೈದ ಘಟನೆ ಸೋಮವಾರ ಸಂಜೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಕಾಡಪ್ಪ ಯಲ್ಲಪ್ಪ ಭುಜಂಗ(30) ಬಂಧಿತ ಆರೋಪಿ. ಈತ ಯಲ್ಲವ್ವ ರೇವಪ್ಪ ಪೂಜೇರಿ, ಬೌರವ್ವ ಭೀಮಪ್ಪ ಮಿರ್ಜಿ ಎಂಬಿಬ್ಬರನ್ನು ಕಬ್ಬಿಣದ ರಾಡಿನಿಂದ ಹೊಡೆದಿದ್ದಲ್ಲದೇ, ಮನೆಯಂಗಳಕ್ಕೆ ಎಳೆದೊಯ್ದು ದೊಡ್ಡ ಕಲ್ಲಿನಿಂದ ತಲೆಗೆ ಜಜ್ಜಿ ಬರ್ಭರವಾಗಿ ಹತ್ಯೆಗೈದಿದ್ದ. ಅಕ್ಕನನ್ನು ತವರು ಮನೆಗೆ ಕರೆದೊಯ್ಯಲು ಬಿಡಲಿಲ್ಲ ಎಂಬ ಕಾರಣಕ್ಕೆ ಕುಪಿತನಾಗಿ ಈ ಕೃತ್ಯವೆಸಗಿದ್ದಾನೆ.
undefined
ಬೆಂಗಳೂರಲ್ಲಿ ಮತ್ತೊಬ್ಬ ನಕಲಿ ಎಸ್‌ಪಿ: ಬರೋಬ್ಬರಿ 2.5 ಕೋಟಿ ಪಂಗನಾಮ ಹಾಕಿದ ಖದೀಮ..!
ಏನಿದು ಘಟನೆ?:
ಯಲ್ಲಪ್ಪ ಸೋಮವಾರ ಸಂಜೆ, ಬನಹಟ್ಟಿಯ ಸೋಮವಾರಪೇಟೆ ಕುರುಬರ ಓಣಿಯಲ್ಲಿದ್ದ ಅಕ್ಕ ಬಂದವ್ವ ಮಿರ್ಜಿ ಮನೆಗೆ ಬಂದು ನಾಲ್ಕೈದು ದಿನ ಊರಿಗೆ ಹೋಗೋಣ ಬಾ.. ಎಂದು ಪತಿಯನ್ನು ಕಳೆದುಕೊಂಡಿದ್ದ ಅಕ್ಕಳನ್ನು ಕರೆದಿದ್ದಾನೆ. ಆದರೆ, ನಾದಿನಿಯರಾದ ಯಲ್ಲವ್ವ, ಬೌರವ್ವ ಇದಕ್ಕೆ ಅಡ್ಡಿಪಡಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಆರೋಪಿ ಯಲ್ಲಪ್ಪ ಇಬ್ಬರ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಪರಿಣಾಮ ಈ ಇಬ್ಬರೂ ಸಹೋದರಿಯರು ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಘಟನೆ ಸಂಬಂಧ ಬಂದವ್ವ ಸತೀಶ ಮಿರ್ಜಿ ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಶಾಂತವೀರ, ಸಿಪಿಐ ಸುನೀಲ ಪಾಟೀಲ, ಪಿಎಸ್‌ಐ ರಾಘವೇಂದ್ರ ಖೋತ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ಮುಂದುವರೆಸಿದ್ದಾರೆ.