ಬೆಟ್ಟಿಂಗ್ ಹಣ ಹೊಂದಿಸಲು ತಾಯಿ-ತಂಗಿಯನ್ನೇ ಹತ್ಯೆ ಮಾಡಿದ ಎಂಟೆಕ್ ಸ್ಟೂಡೆಂಡ್

By Suvarna News  |  First Published Dec 1, 2020, 10:19 PM IST

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಅಪಾರ ನಷ್ಟ/ ಮನೆ ಆಸ್ತಿ ಮಾರಲು ತಾಯಿ ಮತ್ತು ತಂಗಿಯನ್ನೇ ಹತ್ಯೆ ಮಾಡಿದ/ ಅಪ್ಪನ ವಿಮೆ ಹಣ ನೀರು ಬಿಟ್ಟು ಆಗಿತ್ತು/ ಎಂ ಟೆಕ್ ವಿದ್ಯಾರ್ಥಿ ಮಾಡಿದ ಕೆಲಸ


ಹೈದರಾಬಾದ್(ಡಿ.  01) ಕ್ರಿಕೆಟ್ ಬೆಟ್ಟಿಂಗ್ ಎಂಬ ಭೂತ ಯುವಕರನ್ನು ದಾರಿತಪ್ಪಿಸಿ ಬಹಳ ಕಾಲ ಆಗಿಹೋಯ್ತು. ಬೆಟ್ಟಿಂಗ್ ಗಾಗಿ ಮೈತುಂಬಾ ಸಾಲ ಮಾಡಿಕೊಂಡಿದ್ದ ಯುವಕ ಸಾಲವನ್ನು ತೀರಿಸಲು ಹೆತ್ತ ತಾಯಿ ಹಾಗೂ ಒಡ ಹುಟ್ಟಿದ ತಂಗಿಯನ್ನು ಹತ್ಯೆ ಮಾಡಿದ್ದಾನೆ.

ತೆಲಂಗಾಣದ ರಾವಲ್‌ಕೊಲ್‌ನ ಮೆದ್ಚಾಲ್‌ ಎಂಬಲ್ಲಿ ನಡೆದಿದೆ. ಎಂ ಟೆಕ್ ವಿದ್ಯಾರ್ಥಿ ಸಾಯಿನಾಥ್‌ ರೆಡ್ಡಿ(23) ಎಂಬ ಯುವಕ ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ 20 ಲಕ್ಷ ರೂ. ಗೂ ಅಧಿಕ  ಹಣವನ್ನು ಕಳೆದುಕೊಂಡಿದ್ದಾನೆ. ಹಣ ನೀಡುವಂತೆ ಬೆಟ್ಟಿಂಗ್‌ ಮಾಡಿಕೊಂಡಿದ್ದ ಜನರು ಕೇಳುತ್ತಿದ್ದರು. ಆದರೆ ಸಾಯಿನಾಥ್‌ ಬಳಿ ಹಣವಿರಲಿಲ್ಲ. ಹೀಗಾಗಿ ಬೆಟ್ಟಿಂಗ್‌ ಹಣ ತೀರಿಸಲು ತನ್ನ ಕುಟುಂಬದ ಆಸ್ತಿ ಮಾರಲು ಮುಂದಾಗಿದ್ದಾನೆ. ಆಸ್ತಿ ಮಾರಲು ತಾಯಿ ಹಾಗೂ ಸಹೋದರಿ ಅಡ್ಡಿಯಾಗುವ ಸಾಧ್ಯತೆಯನ್ನು ಅರಿತು ಅವರಿಬ್ಬರನ್ನು ಮುಗಿಸಲು ಸಂಚು ರೂಪಿಸಿದ್ದಾನೆ. 

Tap to resize

Latest Videos

ತಾಯಿ ಪಿ ಸುನಿತಾ(44) ಹಾಗೂ ಸಹೋದರಿ ಅನುಜಾ ರೆಡ್ಡಿ(22)ಗೆ ಆಹಾರದಲ್ಲಿ ವಿಷವನ್ನು ಬೆರೆಸಿ ನೀಡಿ ಹತ್ಯೆ ಮಾಡಿದ್ದಾನೆ ನ.  23  ರಂದು ಹತ್ಯೆ ಮಾಡಿದ್ದಾನೆ.

ಪೊಲೀಸರಿಗೆ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂಬ ವಾಸನೆ ಸಿಕ್ಕಿದೆ. ಸಾಯಿನಾಥ್‌ನನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ಸತ್ಯ ಒಪ್ಪಿಕೊಂಡಿದ್ದಾನೆತಂದೆಯ ವಿಮಾ ಹಣವನ್ನು ಬೆಟ್ಟಿಂಗ್ ಗೆ ಹಾಕಿ ಕಳೆದುಕೊಂಡಿದ್ದವ ಮೈತುಂಬಾ ಸಾಲ ಮಾಡಿಕೊಂಡು ಇದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಮಾರಲು ಮುಂದಾಗಿದ್ದ.

click me!