ಸೀರೆಯಿಂದ ಬೇವಿನ ಮರಕ್ಕೆ ನೇಣು ಹಾಕಿಕೊಂಡು ಬಾಲಕಿ ಆತ್ಮ ಹತ್ಯೆ!

By Kannadaprabha News  |  First Published May 26, 2023, 6:45 AM IST

ಹದಿನಾರು ವರ್ಷದ ಬಾಲಕಿಯೊಬ್ಬಳು ಬೇವಿನ ಮರಕ್ಕೆ ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಡಚಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಚಡಚಣದ ರೂಪಾ ಬೈರಪ್ಪ ತೆಲಗಾಂವ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.


ಚಡಚಣ: ಹದಿನಾರು ವರ್ಷದ ಬಾಲಕಿಯೊಬ್ಬಳು ಬೇವಿನ ಮರಕ್ಕೆ ಸೀರೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಡಚಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಚಡಚಣದ ರೂಪಾ ಬೈರಪ್ಪ ತೆಲಗಾಂವ ಆತ್ಮಹತ್ಯೆ ಮಾಡಿಕೊಂಡ ಬಾಲಕಿ.

ವಿಬೂತಿ ಹಳ್ಳಿಯ ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ 9 ತರಗತಿ ಮುಗಿಸಿ ರಜೆಗಾಗಿ ಸ್ವಾಗ್ರಾಮ ಚಡಚಣಕ್ಕೆ ಆಗಮಿಸಿದ್ದ ಈ ವಿದ್ಯಾರ್ಥಿನಿ ಇನ್ನೇನು ಇಷ್ಟರಲ್ಲೇ ಎಸ್ಸೆಸ್ಸೆಲ್ಸಿ ತರಗತಿಗೆ ತೆರಳಬೇಕಿತ್ತು. ಆದರೆ, ಬುಧವಾರ ತಡರಾತ್ರಿ ಸಂಗಮೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಬೇವಿನ ಮರಕ್ಕೆ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಬಾಲಕಿ ತಂದೆ ಬೈರಪ್ಪ ತೆಲಗಾಂವ ಚಡಚಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Tap to resize

Latest Videos

ಪತ್ನಿ ಅನೈತಿಕ ಸಂಬಂಧ: ಮನನೊಂದ ಪತಿ ಆತ್ಮಹತ್ಯೆ

ಮೈಸೂರು: ಪತ್ನಿಯ ಅನೈತಿಕ ಸಂಬಂಧದಿಂದ ಮನನೊಂದು ಪತಿ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲೂಕು ಹಳ್ಳಿಕೆರೆಹುಂಡಿಯಲ್ಲಿ ನಡೆದಿದೆ. ಹಳ್ಳಿಕೆರೆಹುಂಡಿ ಗ್ರಾಮದ ಶಶಿಧರ್‌(39) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಇವರು ಬಾರ್‌ ಬೆಂಡಿಂಗ್‌ ಕೆಲಸ ಮಾಡಿಕೊಂಡಿದ್ದು, 10 ವರ್ಷದ ಹಿಂದ ಬನ್ನೂರು ಸಮೀಪದ ಬೆಟ್ಟಹಳ್ಳಿ ಗ್ರಾಮದ ಮಹಿಳೆಯನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ. ಆದರೆ, ಕಳೆದ ಹಲವು ತಿಂಗಳಿಂದ ಶಶಿಧರ್‌ ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದರು. ಈ ವಿಚಾರ ಗೊತ್ತಾಗಿ ಪತ್ನಿಗೆ ಬುದ್ಧಿವಾದ ಹೇಳಿದ್ದರೂ ಬದಲಾಗಿರಲಿಲ್ಲ. ಪತ್ನಿಯ ಈ ವರ್ತನೆಯಿಂದ ಮನನೊಂದಿದ್ದ ಶಶಿಧರ್‌ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ವರುಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ: ರೈತ ನೇಣಿಗೆ ಶರಣು

ಆಳಂದ: ಸಾಲಬಾಧೆಯಿಂದ ರೈತನೋರ್ವ ಮೃತಪಟ್ಟಘಟನೆ ತಾಲೂಕಿನ ಸಾಲೇಗಾಂವ ಗ್ರಾಮದಲ್ಲಿ ಬುಧವಾರ ಸಂಜೆ ನಡೆದ ಘಟನೆ ವರದಿಯಾಗಿದೆ. ರೈತ ಮಲ್ಲಿನಾಥ ಪರಮೇಶ್ವರ ಜವಳಗಾ (60), ಎಂಬಾತ ರೈತನೇ ತನ್ನ ಮನೆಯಲ್ಲೇ ನೇಣು ಬೀಗಿದುಕೊಂಡು ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ. ಒಂದುವರೆ ಎಕರೆ ಜಮೀನು ಇದ್ದು, ಪಿಕೆಜಿಬಿ ಬ್ಯಾಂಕ್‌ನಲ್ಲಿ ಕೃಷಿ ಸಾಲ 75 ಸಾವಿರ ಹಾಗೂ ಖಾಸಗಿ 4 ಲಕ್ಷ ರೂಪಾಯಿ ಸಾಲ ಮಾಡಿದ್ದು ಸಾಲ ತಿರಿಸಲಾಗದೆ ಜೀವನ ದುರಸ್ಥರವಾಗಿ ಮನನೋಂದು ನೇಣಿಗೆ ಶರಣಾಗಿದ್ದಾನೆ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಮೃತನಿಗೆ ಪತ್ನಿ, ಇಬ್ಬರು ಗಂಡು ಮಕ್ಕಳಲ್ಲಿ ವಿವಾಹಿತ ಓರ್ವ ಹಿರಿಯ ಮಗ ಕೆಲ ವರ್ಷಗಳ ಹಿಂದೆ ಅನಾರೋಗ ಪೀಡಿತದಿಂದ ಮೃತಪಟ್ಟಿದ್ದು, ಇನ್ನೂರ್ವ ಅವಿವಾಹಿತ ಮಗ, ಇಬ್ಬರು ವಿವಾಹಿತ ಹೆಣ್ಣು ಮಕ್ಕಳು ಇದ್ದಾರೆ.

click me!