ಅನೈತಿಕ ಸಂಬಂಧ: ತಮ್ಮನ ಕತ್ತು ಕುಯ್ದು ಬರ್ಬರವಾಗಿ ಹತ್ಯೆ ಮಾಡಿದ ಅಣ್ಣ!

By Ravi Janekal  |  First Published Oct 3, 2023, 11:46 AM IST

ಅನೈತಿಕ ಸಂಬಂಧ ವಿಚಾರಕ್ಕೆ ಸ್ವಂತ ಅಣ್ಣನೇ ತಮ್ಮನ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗಂಗಾವತಿ ತಾಲೂಕಿನ ಎಚ್ ಆರ್ ಎಸ್ ಕಾಲೋನಿಯಲ್ಲಿ ನಡೆದಿದೆ.


ಗಂಗಾವತಿ (ಅ.3): ಅನೈತಿಕ ಸಂಬಂಧ ವಿಚಾರಕ್ಕೆ ಸ್ವಂತ ಅಣ್ಣನೇ ತಮ್ಮನ ಕತ್ತು ಕುಯ್ದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಗಂಗಾವತಿ ತಾಲೂಕಿನ ಎಚ್ ಆರ್ ಎಸ್ ಕಾಲೋನಿಯಲ್ಲಿ ನಡೆದಿದೆ.

ಮೌಲಾ ಹುಸೇನ್  (30) ಹತ್ಯೆಯಾದ ವ್ಯಕ್ತಿ. ನೂರ್ ಅಹ್ಮದ್ ಕೊಲೆ ಮಾಡಿದ ಆರೋಪಿ. ಹತ್ಯೆಯಾದ ಹುಸೇನ್ ಮತ್ತು ಕೊಲೆ ಅರೋಪಿ ನೂರ್ ಅಹ್ಮದ್ ಇಬ್ಬರು ಸಹೋದರರಾಗಿದ್ದು ಷಡ್ಕರು. ಅಕ್ಕ-ತಂಗಿಯರನ್ನು ಇಬ್ಬರು ಮದುವೆಯಾಗಿದ್ದರು. 

Tap to resize

Latest Videos

undefined

ಹಳೇ ಹುಬ್ಬಳ್ಳಿಯಲ್ಲೊಬ್ಬ ವಿಕೃತ ಕಾಮುಕ, ಮನೆ ಸುತ್ತಮುತ್ತಲಿನ ಅಪ್ರಾಪ್ತ ಮಕ್ಕಳೇ ಇವನ ಟಾರ್ಗೆಟ್!

ನಿನ್ನೆ ಅನೈತಿಕ ಸಂಬಂಧ ವಿಚಾರಕ್ಕೆ ಇಬ್ಬರ ಮಧ್ಯೆ ರಾತ್ರಿ ವಾಗ್ವಾದ ನಡೆದೆ. ಜಗಳದ ಬಳಿಕ ಮೌಲಾ ಹುಸೇನ್ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಆರೋಪಿ ನೂರ್ ಅಹ್ಮದ್ ಚೂರಿಯಿಂದ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದಾನೆ. 

ಹತ್ಯೆ ಬಳಿಕ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿರುವ ಆರೋಪಿ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.

click me!