:ಕೌಟುಂಬಿಕ ಕಲಹ ಹಿನ್ನೆಲೆ ನಿವೃತ್ತ ಯೋಧನನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಗಣೇಶನಗರದ ಮನೆಯಲ್ಲಿ ನಡೆದಿದೆ. ನಿವೃತ್ತ ಯೋಧ ಈರಗೌಡ ಟೋಪಗೋಳ (45) ಕೊಲೆಯಾದ ದುರ್ದೈವಿ.
ಚಿಕ್ಕೋಡಿ (ಸೆ.2):ಕೌಟುಂಬಿಕ ಕಲಹ ಹಿನ್ನೆಲೆ ನಿವೃತ್ತ ಯೋಧನನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಗಣೇಶನಗರದ ಮನೆಯಲ್ಲಿ ನಡೆದಿದೆ.
ನಿವೃತ್ತ ಯೋಧ ಈರಗೌಡ ಟೋಪಗೋಳ (45) ಕೊಲೆಯಾದ ದುರ್ದೈವಿ. ಮೃತನಿಗೆ ಬಾಮೈದ ಅಂದರೆ ಪತ್ನಿಯ ಸಹೋದರನೇ ಆಗಿರುವ ಸಂಜಯ್ ಭಾಕರೆ ಎಂಬುವವನೇ ಬಾವನನ್ನು ಹತ್ಯೆ ಮಾಡಿರುವ ಆರೋಪಿ.
ಹೆತ್ತ ಮೂರು ಮಕ್ಕಳಿಗೆ ವಿಷ ಉಣಿಸಿದ ತಂದೆ; ವಿಜಯಪುರದಲ್ಲಿ ದಾರುಣ ಘಟನೆ
ಮೂಲತಃ ಜೈನಾಪುರ ಗ್ರಾಮದವರಾಗಿರುವ ಈರಗೌಡ ಟೋಪಗೋಳ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಯೋಧ. ಸೇನೆಯಿಂದ ವಾಪಸ್ ಆದ ಬಳಿಕ ಸ್ಟೋನ್ ಕ್ರಷರ್ ಘಟಕ ನಡೆಸುತ್ತಿದ್ದ. ಇಂದು ಸಂಜೆ ಬಾವ ಈರಗೌಡ ಭೇಟಿಗೆ ಆಗಮಿಸಿದ್ದ ಸಂಜಯ್. ಈ ವೇಳೆ ಯೋಧನ ಪತ್ನಿ ಮನೆಯೊಳಗೆ ಇದ್ದಳು.
ಚಾಕುವಿನಿಂದ ಈರಗೌಡ ಕತ್ತು ಸೀಳಿರುವ ಸಂಜಯ್. ಕಿರುಚಾಡುತ್ತಿದ್ದಂತೆ ಓಡಿ ಬಂದಿರುವ ಪತ್ನಿ ತೀವ್ರ ರಕ್ತಸ್ರಾವವಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಈರಗೌಡನನ್ನ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ .ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ. ಕೌಟುಂಬಿಕ ಹಿನ್ನೆಲೆಯೇ ಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಸದ್ಯ ಮೃತದೇಹವನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ಸಿಡಿಲಿಗೆ ಮಹಿಳೆ ಬಲಿ
ಕಲಬುರಗಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮಹಿಳೆಯೋರ್ವ ಮೃತಪಟ್ಟ ಘಟನೆ ಅಫಜಲಪುರ ತಾಲೂಕಿನ ಸಿದನೂರು ಗ್ರಾಮದಲ್ಲಿ ನಡೆದಿದೆ.
ಕಲಾವತಿ ಸಿಡಿಲುಗೆ ಬಲಿಯಾದ ಮಹಿಳೆ. ಇನ್ನೋರ್ವ ಮಹಿಳೆ ಸವಿತಾ ಎಂಬಾಕೆ ತೀವ್ರ ಗಾಯಗೊಂಡಿದ್ದು, ಕಲಬುರಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಮಾಹಿತಿ ತಹಶಿಲ್ದಾರ್ ಸಂಜೀವಕುಮಾರ್ ದಾಸರ ಭೇಟಿ ಪರಿಶೀಲನೆ ನಡೆಸಿದರು. ರೇವೂರ ಬಿ.ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ನಡೆದಿರುವ ಘಟನೆ.
ಜಗಳವಾಡಿ ಹೋಗಿದ್ದಕ್ಕೆ ಪತ್ನಿಯ ತವರು ಮನೆಗೇ ಮಾಟ ಮಾಡಿಸಿದ ಪತಿರಾಯ!