ಬೆಳಗಾವಿ: ಮಾರಾಕಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ವಿದ್ಯಾರ್ಥಿಯ ಬರ್ಬರ ಹತ್ಯೆ

By Girish Goudar  |  First Published Oct 21, 2022, 12:00 AM IST

ಶಾಲೆಗೆ ಹೋಗಿ ನಾಪತ್ತೆಯಾಗಿದ್ದ ಬಾಲಕ ನಿರ್ಜನ ಪ್ರದೇಶದಲ್ಲಿ ಶವವಾಗಿ ಪತ್ತೆ, ಬಾಲಕನ ಅರೆಬೆತ್ತಲೆ ಮಾಡಿ ಹತ್ಯೆಗೈದು ಹಂತಕರು ಪರಾರಿ 


ವರದಿ: ಮಹಾಂತೇಶ ಕುರಬೇಟ, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ(ಅ.21):  ನಿನ್ನೆ(ಗುರುವಾರ) ಮಟ ಮಟ ಮಧ್ಯಾಹ್ನ ಇಡೀ ಕುಂದಾನಗರಿ ಜನರಿಗೆ ಶಾಕ್ ಆಗಿತ್ತು. ಬುಧವಾರ ಶಾಲೆಗೆ ಹೋಗಿ ಬರುವೆ ಎಂದು ಮನೆಯಿಂದ ತೆರಳಿದ್ದ ಬಾಲಕ ಬೆಳಗಾವಿ ನಗರದಿಂದ 10 ಕಿ.ಮೀ ಅಂತರದ ಮುಚ್ಚಂಡಿ ಗ್ರಾಮದ ಗದ್ದೆಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಬೆಳಗಾವಿಯ ಶಿವಾಜಿ ನಗರದ ನಿವಾಸಿ ಪ್ರಜ್ವಲ್ ಶಿವಾನಂದ ಕರಿಗಾರ(16) ಮೃತ ಬಾಲಕ. 

Tap to resize

Latest Videos

ಬೆಳಗಾವಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ಪ್ರಜ್ವಲ್ ಕರಿಗಾರ ನಿನ್ನೆ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದ‌. ಪ್ರಜ್ವಲ್‌ನ ಕಿರಿಯ ಸಹೋದರ ಅದೇ ಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಾನೆ. ಆದ್ರೆ ನಿನ್ನೆ ಸಂಜೆ  ಶಾಲೆ ಬಿಟ್ಟ ಮೇಲೆ ಪ್ರಜ್ಚಲ್ ಮನೆಗೆ ಬಾರದಿದ್ದಾಗ ಆತನ ತಂದೆ ತಾಯಿ ಹಾಗೂ ನೆರೆ ಹೊರೆಯವರು ಏರಿಯಾದಲ್ಲೆಲ್ಲಾ ಹುಡುಕಾಟ ನಡೆಸಿದ್ದಾರೆ. ಆದ್ರೆ ಪ್ರಜ್ಚಲ್ ಸುಳಿವು ಸಿಗದಿದ್ದಾಗ ಬೆಳಗಾವಿಯ ಮಾರ್ಕೆಟ್ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಆದ್ರೆ ಪ್ರಜ್ಚಲ್ ವ್ಯಾಸಂಗ ಮಾಡುತ್ತಿದ್ದ ಶಾಲೆ ಕ್ಯಾಂಪ್ ಫೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಹಿನ್ನೆಲೆ ಅಲ್ಲಿ ಬಾಲಕನ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಿದ್ದಾರೆ. ಇತ್ತ ರಾತ್ರಿಯಿಡಿ ಪ್ರಜ್ಚಲ್ ತಂದೆ, ತಾಯಿ ಸಂಬಂಧಿಕರು, ಅಕ್ಕಪಕ್ಕದ ನಿವಾಸಿಗಳು ಹುಡುಕಾಟ ನಡೆಸಿ ನಿನ್ನೆ ಬೆಳಗ್ಗೆ ಮತ್ತೆ ಪೊಲೀಸ್ ಠಾಣೆಗೆ ಹೋಗಿದ್ದರು.

ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಕೊಂದ್ರು: ರೈಲ್ವೆ ಹಳಿ ಮೇಲೆ ಶವ ಎಸೆಯಲು ಬಂದು ತಗ್ಲಾಕೊಂಡ್ರು!

ಇನ್ನು ಇದೇ ವೇಳೆ ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಹೊರವಲಯದ ಗದ್ದೆಯಲ್ಲಿ ಬಾಲಕನ ಮೃತದೇಹವೊಂದು ಪತ್ತೆಯಾದ ಬಗ್ಗೆ ವರದಿ ಆಗಿದೆ. ಅರೆಬೆತ್ತಲೆ ಸ್ಥಿತಿಯಲ್ಲಿದ್ದ ಬಾಲಕನ ಬೆನ್ನು ಮೇಲೆ ಇರಿತವಾದ ಆಯುಧದಿಂದ ಇರಿದ ಗಾಯಗಳಾಗಿದ್ದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆಗೈಯ್ಯಲಾಗಿತ್ತು. ಬೆಳಗ್ಗೆ ಹುಲ್ಲು ಕೀಳಲು ಬಂದ ರೈತರು ಇದನ್ನು ಗಮನಿಸಿ ಮುಚ್ಚಂಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಿಗೆ ತಿಳಿಸಿದ್ದ, ಅವರು ಮಾರಿಹಾಳ ಠಾಣೆಗೆ ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು‌. 

ಬಾಲಕನ ಮೃತ ದೇಹ ಬಳಿ ಶಾಲಾ ಸಮವಸ್ತ್ರದ ಬೆಲ್ಟ್ ಸಿಕ್ಕಿದೆ. ಕೂಡಲೇ ಮಾರಿಹಾಳ ಪೊಲೀಸರು ಯಾವುದಾದರೂ ನಾಪತ್ತೆ ಪ್ರಕರಣ ದಾಖಲಾಗಿದೆಯಾ ಎಂಬ ಬಗ್ಗೆ ಪರಿಶೀಲನೆ ನಡೆಸಿದಾಗ ಕ್ಯಾಂಪ್ ಠಾಣೆಯಲ್ಲಿ ಬಾಲಕ ನಾಪತ್ತೆ ಪ್ರಕರಣ ದಾಖಲಾದ ಬಗ್ಗೆ ಗೊತ್ತಾಗಿದೆ. ಬಳಿಕ ಮಾಹಿತಿ ರವಾನಿಸಿದ ಪೊಲೀಸರು ಮೊದಲಿಗೆ ಪ್ರಜ್ಚಲ್ ನ ಸಂಬಂಧಿಗಳನ್ನು ಕರೆಯಿಸಿ ಮೃತದೇಹ ತೋರಿಸಿದಾಗ ಆ ಮೃತದೇಹ ಪ್ರಜ್ವಲ್‌ನದ್ದೇ ಎಂದು ಗೊತ್ತಾಗಿದೆ. ಇತ್ತ ಕ್ಯಾಂಪ್ ಠಾಣೆ ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಸ್ಥಳ ಮಹಜರು ನಡೆಸಿ ಶ್ವಾನದಳ ಹಾಗೂ ಎಫ್ ಎಸ್‌ಎಲ್ ಟೀಮ್ ಕರೆಯಿಸಿದ್ದಾರೆ. ಬಳಿಕ ಪ್ರಜ್ಚಲ್ ತಂದೆ ಶಿವಾನಂದಗೆ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಓಡೋಡಿ ಬಂದ ಶಿವಾನಂದ ಕರಿಗಾರ ಮಗನ ಮೃತದೇಹ ಕಂಡು ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳ ಮಹಜರು ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಳಗಾವಿ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಯಿತು.

'ಮಂಗಳವಾರ ಮಟನ್‌ ಮಾಡ್ತೀರಾ' ಅನ್ನೋ ವಿಚಾರಕ್ಕೆ ದಂಪತಿಗಳ ಗಲಾಟೆ, ತಪ್ಪಿಸಲು ಹೋದವನ ಕೊಲೆ!

ಪ್ರಜ್ವಲ್‌ನನ್ನು ಬೈಕ್ ಮೇಲೆ ಕರೆದುಕೊಂಡು ಹೋದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ಇನ್ನು ಪ್ರಜ್ವಲ್‌ ಸಾವಿನ ನೋವಿನಲ್ಲಿದ್ದ ಕುಟುಂಬಸ್ಥರು ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು‌. ಇದೇ ವೇಳೆ ಮಾತನಾಡಿದ ಪ್ರಜ್ವಲ್‌ ವಾಸವಿದ್ದ ಏರಿಯಾದ ನಿವಾಸಿ ಮಹೇಶ್, 'ಪ್ರಜ್ವಲ್ ಯಾರ ತಂಟೆಗೂ ಹೋಗುತ್ತಿರಲಿಲ್ಲ. ಮೊನ್ನೆಯಷ್ಟೇ ದಸರಾ ವೇಳೆ ನಡೆದ ದುರ್ಗಾಮಾತಾ ದೌಡ್‌ನಲ್ಲಿ ಭಕ್ತಿ ಪೂರ್ವಕವಾಗಿ ಭಾಗಿಯಾಗಿದ್ದ. ಆದ್ರೆ ಶಾಲೆಗೆ ಹೋದ ಪ್ರಜ್ವಲ್‌ನನ್ನು ಯಾರೋ ಇಬ್ಬರು ಯುವಕರು ಬೈಕ್ ಮೇಲೆ ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಹೋಗಿದ್ದು ಅದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು' ಎಂದು ಆಗ್ರಹಿಸಿದ್ದಾರೆ.

ಸದ್ಯ ಎಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅದೇನೇ ಇರಲಿ ಶಾಲೆಗೆ ಹೋಗಿದ್ದ ಬಾಲಕನನ್ನು ಕರೆದುಕೊಂಡು ಈ ರೀತಿ ಬರ್ಬರ ಹತ್ಯೆ ಮಾಡಿದ್ದು ಯಾರು? ಯಾವ ಕಾರಣಕ್ಕೆ ಮಾಡಿದ್ದಾರೆ ಅನ್ನೋದು ಪೊಲೀಸರ ತನಿಖೆಯಿಂದ ಹೊರ ಬರಬೇಕಿದೆ. ಆದ್ರೇ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ನೋವು ಮಾತ್ರ ಹೇಳತೀರದಾಗಿದೆ.
 

click me!