ಅನೈತಿಕ ಸಂಬಂಧ: ಹೆತ್ತವಳ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೈದ ಮಗ

By Kannadaprabha News  |  First Published Nov 16, 2020, 12:52 PM IST

ತಾಯಿ ಕೊಲೆಗೈದ ಮಗ| ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಂಗಿಬಾವಿ ಗ್ರಾಮದಲ್ಲಿ ನಡೆದ ಘಟನೆ| ಗಂಡ ತೀರಿ ಹೋಗಿದ್ದರಿಂದ ಪಾರವ್ವ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆ| ಈ ಸಂಬಂಧ ಶಿಗ್ಗಾಂವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು| 


ಶಿಗ್ಗಾಂವಿ(ನ.16): ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಶಂಕೆಗೊಂಡ ಮಗನೊಬ್ಬ, ಹೆತ್ತವಳ ಮೇಲೆಯೇ ಅತ್ಯಾಚಾರ ಎಸಗಿ ಕೊಲೆಗೈದ ಘಟನೆ ಗಂಗಿಬಾವಿ ರಸ್ತೆ ಪಕ್ಕದ ಹೊಲವೊಂದರಲ್ಲಿ ಗುರುವಾರ ಸಂಭವಿಸಿದೆ.

ವನಹಳ್ಳಿ ಗ್ರಾಮದ ಪ್ಲಾಟ್‌ನ ನಿವಾಸಿ ಪಾರವ್ವ ಸೋಮಲೆಪ್ಪ ಲಮಾಣಿ (35) ಕೊಲೆಯಾದವಳು. ತಾಯಿಯನ್ನು ಕೊಲೆಗೈದ ಮಗ ಶಿವಪ್ಪ ಸೋಮಲೆಪ್ಪ ಲಮಾಣಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಶಿಗ್ಗಾಂವಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Tap to resize

Latest Videos

undefined

ಹಾವೇರಿ; ಆಂಟಿಗೆ ಮಗನ ವಯಸ್ಸಿನ ಹುಡುಗನೊಂದಿಗೆ ಕಾಮದ ಬಯಕೆ!

ಘಟನೆ ಹಿನ್ನೆಲೆ:

ಗಂಡ ತೀರಿ ಹೋಗಿದ್ದರಿಂದ ಪಾರವ್ವ ಬೇರೆಯವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆಕ್ರೋಶಗೊಂಡ ಮಗ ಶಿವಪ್ಪ ಲಮಾಣಿ ಗುರುವಾರ ಮಧ್ಯಾಹ್ನ 3.30 ಸುಮಾರಿಗೆ ಮೃತ ತಾಯಿಗೆ ಮದ್ಯ ಕುಡಿಸಿ, ಇಂತಹ ತಾಯಿ ಇರಬಾರದು ಎಂದು ಅಕ್ರೋಶಗೊಂಡು ಕೊಲೆಗೈದಿದ್ದಾನೆ ಎಂದು ಮೃತಳ ಸಂಬಂಧಿ ಸೋಮಲೆವ್ವ ತಾವರೆಪ್ಪ ಲಮಾಣಿ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.
 

click me!