ಮಂಡ್ಯ: ಅನೈತಿಕ ಸಂಬಂಧ ಶಂಕೆ, 80 ವರ್ಷದ ದೊಡ್ಡಮ್ಮನನ್ನೇ ಕೊಂದ ಮಗ..!

By Girish Goudar  |  First Published Jun 23, 2024, 9:20 AM IST

ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ‌ ನಡೆದು ದೊಡ್ಡಮ್ಮನನ್ನ ಹತ್ಯೆಗೈದಿದ್ದಾನೆ.  ಕೊಲೆಗೈದ ಹರೀಶ್ ತನ್ನ ತಂದೆಗೆ ಮಾಹಿತಿ ನೀಡಿದ್ದಾನೆ. ತಂದೆ ಕೆಲಸಕ್ಕೆ ಹೋಗಿದ್ದ ವೇಳೆ ದೊಡ್ಡಮ್ಮನ ಕೊಲೆಗೈದಿದ್ದಾನೆ ಮಗ.
 


ಮಂಡ್ಯ(ಜೂ.23):  ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಚಾಕುವಿನಿಂದ ಕತ್ತು ಕುಯ್ದು ದೊಡ್ಡಮ್ಮನನ್ನ ಹತ್ಯೆ ಮಾಡಿದ ಘಟನೆ ಮಂಡ್ಯದ ಆನೆಕೆರೆ ಬೀದಿ ನಗರದಲ್ಲಿ ನಡೆದಿದೆ. ವೃದ್ಧೆ ಕೆಂಪಮ್ಮ(80) ಕೊಲೆಯಾದ ದುರ್ದೈವಿ. ದೊಡ್ಡಮ್ಮನನ್ನ ಕೊಲೆಗೈದು ಆರೋಪಿ ಹರೀಶ್ (34) ಪೊಲೀಸರಿಗೆ ಶರಣಾಗಿದ್ದಾನೆ. 

ತನ್ನ ತಂದೆಯ ಜೊತೆಗೆ ಕೆಂಪಮ್ಮ ಕಳೆದ ಹಲವು ವರ್ಷಗಳಿಂದ ವಾಸವಾಗಿದ್ದರು. ಆರೋಪಿ ತಂದೆ‌ ರಾಮಕೃಷ್ಣ ಗಂಡ ತೀರಿಹೋದ ನಂತರ ಕೆಂಪಮ್ಮನಿಗೆ ಆಸರೆ ನೀಡಿದ್ದರು. ತನ್ನ ತಾಯಿ, ತಂದೆಯಿಂದ ಬೇರೆಯಾಗಲು ಕೆಂಪಮ್ಮ ಕಾರಣ ಎಂದು ಕೆಂಪಮ್ಮನ ಮೇಲೆ ಹರೀಶ್‌ಗೆ ದ್ವೇಷ ಕೂಡ ಇತ್ತು ಎಂದು ಹೇಳಲಾಗುತ್ತಿದೆ.

Tap to resize

Latest Videos

ಹಲ್ಲೆಯಾಗುವ ಭೀತಿ: ತುಮಕೂರಿಗೆ ದರ್ಶನ್ ಸಹಚರರ ಶಿಫ್ಟ್‌ಗೆ ಪೊಲೀಸರ ಮನವಿ

ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ‌ ನಡೆದು ದೊಡ್ಡಮ್ಮನನ್ನ ಹತ್ಯೆಗೈದಿದ್ದಾನೆ.  ಕೊಲೆಗೈದ ಹರೀಶ್ ತನ್ನ ತಂದೆಗೆ ಮಾಹಿತಿ ನೀಡಿದ್ದಾನೆ. ತಂದೆ ಕೆಲಸಕ್ಕೆ ಹೋಗಿದ್ದ ವೇಳೆ ದೊಡ್ಡಮ್ಮನ ಕೊಲೆಗೈದಿದ್ದಾನೆ ಮಗ. ಘಟನಾ ಸ್ಥಳಕ್ಕೆ ಎಸ್‌ಪಿ ಯತೀಶ್ ಭೇಟಿ ಪರಿಶೀಲನೆ ನಡೆಸಿದ್ದಾರೆ.  ಈ ಸಂಬಂಧ ಮಂಡ್ಯದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

click me!