ಶಿವಮೊಗ್ಗ: ದೇವಾಲಯದ ಹಿಂದೆ ಚೆಲ್ಲಿದ ರಕ್ತ, ಕೊಲೆಯಾಗಿಹೋದ ಸುರೇಶ

By Suvarna News  |  First Published May 17, 2020, 8:07 PM IST

ಶಿವಮೊಗ್ಗದಲ್ಲಿ ಚೆಲ್ಲಿದ ರಕ್ತ/ ರೌಡಿ ಶೀಟರ್ ನಿಂದ ಕೊಚ್ಚಿ ಕೊಲೆ/ ಆರೋಪಿಯ ಬಂಧನ/ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ


ಶಿವಮೊಗ್ಗ(ಮೇ 17)  ಶಿವಮೊಗ್ಗದಲ್ಲಿ ಮತ್ತೆ ರಕ್ತ ಚೆಲ್ಲಿದೆ.  ರೌಡಿ ಶೀಟರ್  ಪ್ರಭು ಸುರೇಶ  ಎಂಬುವರನ್ನು ಕೊಲೆ ಮಾಡಿದ್ದಾನೆ .  ಶಿವಮೊಗ್ಗದ ಬುದ್ಧನಗರ ಆಂಜನೇಯ ದೇವಸ್ಥಾನದ ಹಿಂಭಾಗದಲ್ಲಿ ಘಟನೆ ನಡೆದಿದೆ.

ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದೆ.  ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ.  ದೊಡ್ಡಪೇಟೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.  ಕೊಲೆಗೈದ ರೌಡಿ ಶೀಟರ್ ಪ್ರಭು ಬಂಧನವಾಗಿದೆ.

Tap to resize

Latest Videos

ಎಷ್ಟು ಟೈಟಾಗಿದ್ದ ಅಂದರೆ ಬಿಲ್ಡಿಂಗ್ ನಿಂದ ಬಿದ್ದು ಸತ್ತಿದ್ದು ಗೊತ್ತಾಗಲಿಲ್ಲ!

ಕೊರೋನಾ ಮುಕ್ತವಾಗಿದ್ದ ಶಿವಮೊಗ್ಗದಲ್ಲಿಯೂ ಕೊರೋನಾ ಕಾಣಿಸಿಕೊಂಡು ಆತಂಕ ಸೃಷ್ಟಿ ಮಾಡಿತ್ತು. ಇದೆಲ್ಲದರ ನಡುವೆ ರೌಡಿಗಳ ಜಗಳ ನಡೆದಿದ್ದು ಆತಂಕ ಹೆಚ್ಚಿಸಿದೆ . ಕೆಲ ದಿನಗಳ ಹಿಂದೆ ಮದ್ಯ ಸೇವಿಸಿ ಸಿದ್ದಪ್ಪ ಎಂಬ ರೌಡಿ ಶೀಟರ್ ಮನೆ ಮೇಲಿಂದ ಬಿದ್ದು ಮೃತನಾಗಿದ್ದ. 

click me!