ಲಕ್ನನೌ(ಸೆ.14): ಮುಂಬೈ ನಿರ್ಭಯಾ ಪ್ರಕರಣ ದೇಶದಲ್ಲಿ ಮಹಿಳೆಯರ ಸುರಕ್ಷತೆಗೆ ಸವಾಲೆಸೆಯುತ್ತಿದೆ. ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಲೇ ಇದೆ. ಮುಂಬೈನ ಸಕಿನಕಾ ಬಳಿ 34ರ ಹರೆಯದ ಮಹಿಳೆ ಮೇಲೆ ಘನಘೋರ ಅತ್ಯಾಚಾರ ಹಾಗೂ ಕಬ್ಬಿಣದ ರಾಡ್ ತುರುಕಿದ ಪ್ರಕರಣ ಆರೋಪಿ ಮೋಹನ್ ಚೌವ್ಹಾಣ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ವಿಚಾರಣೆ ತೀವ್ರಗತಿಯಲ್ಲಿ ನಡೆಯುತ್ತಿದೆ. ಇದರ ನಡುವೆ ಆರೋಪಿ ತಂದೆ, ಮಗನ ಈ ಕ್ರೌರ್ಯವನ್ನು ಖಂಡಿಸಿ ನೋವಿನಿಂದಲೇ ಶಿಕ್ಷೆಗೆ ಆಗ್ರಹಿಸಿದ್ದಾರೆ.
ಮುಂಬೈನಲ್ಲೊಂದು ನಿರ್ಭಯಾ ಪ್ರಕರಣ; ಅತ್ಯಾಚಾರ ಎಸಗಿ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ಪಾಪಿ!
ಮಗ ಅತ್ಯಾಚಾರಾ ಮಾಡಿದ್ದಾನೆ ಅನ್ನೋದು ಊಹಿಸಲು ಸಾಧ್ಯಾವಾಗುತ್ತಿಲ್ಲ. ಆದರೆ ಸಿಸಿಟಿವಿ ದೃಶ್ಯದಲ್ಲಿ ಮಗನ ಕೃತ್ಯಗಳು ಸೆರೆಯಾಗಿದೆ. ಹೀಗಾಗಿ ಅಲ್ಲಗೆಳೆಯಲು ಸಾಧ್ಯವಿಲ್ಲ. ನನ್ನ ಮಗ ಮಾಡಿದ ಕ್ರೌರ್ಯಕ್ಕೆ ತಕ್ಕೆ ಶಿಕ್ಷೆ ಆಗಬೇಕು. ಪೊಲೀಸರು ಮಗನ ಕೊಂದರೂ ನನಗೆ ದುಃಖವಿಲ್ಲ ಎಂದು ಆರೋಪಿ ಮೋಹನ್ ಚೌವ್ಹಾಣ್ ತಂದೆ ಕತ್ವಾರು ಚವ್ಹಾಣ್ ಹೇಳಿದ್ದಾರೆ.
ಅತ್ಯಾಚಾರ, ಕ್ರೌರ್ಯ, ಕೊಲೆಗೈದ ಮಗ ಇಲ್ಲಿದ್ದರೆ ಒಳಿತು. ನಿರ್ಭಾಯ ರೀತಿಯ ಅತ್ಯಾಚಾರ ಮುಂಬೈನಲ್ಲಿ ಆಗಿದೆ. ಮಹಿಳೆಯ ನೋವು ಕುಂಟುಂಬಸ್ಥರ ದುಃಖ ಅರ್ಥವಾಗುತ್ತದೆ. ಹೀಗಾಗಿ ಮಗನಿಗೆ ಅತ್ಯಂತ ಕಠಿಣ ಶಿಕ್ಷೆ ಆಗಲಿ. ಆತ ಬದುಕಿದರೆ ಅಪಾಯ ಎಂದು ತಂದೆ ಕತ್ವಾರು ಚವ್ಹಾಣ್ ನೋವಿನಿಂದಲೇ ಹೇಳಿದ್ದಾರೆ.
33 ಗಂಟೆಗಳ ಸಾವು- ಬದುಕಿನ ಹೋರಾಟ: ಕೊನೆಯುಸಿರೆಳೆದ ಮುಂಬೈನ 'ನಿರ್ಭಯಾ'!
ಆರೋಪಿ ಮೋಹನ್ ಸೆಪ್ಟೆಂಬರ್ 21ರ ವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಜ್ಯೋತ್ಸಾನಾ ರಾಸಮ್ ನೇತೃತ್ವದ ಎಸ್ಐಟಿ ತಂಡ ತನಿಖೆ ನಡೆಸುತ್ತಿದೆ. ಇತ್ತ ಅತ್ಯಾಚಾರ ಹಾಗೂ ತೀವ್ರ ಹಲ್ಲೆಯಿಂದ ಆಸ್ಪತ್ರೆಯಲ್ಲಿ ಕೊನೆಯುಸಿರೆಳದ ಮಹಿಳೆಗೆ ನ್ಯಾಯ ದೊರಕಿಸಲು ಪ್ರತಿಭಟನೆ, ಹೋರಾಟ ಮುಂದುವರಿದಿದೆ.