ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರ ಜೈಲುವಾಸ 25ನೇ ದಿನಕ್ಕೆ ಕಾಲಿಟ್ಟಿದೆ. ಇದೆಲ್ಲದರ ನಡುವೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗುದೀಪ ದರ್ಶನ್ ಕಾಣಲು ಬಂದಿದ್ದರು.
ಬೆಂಗಳೂರು (ಜು.15): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ಆಗಿರುವ ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ ( Pavithra Gowda) ಸೇರಿ ಒಟ್ಟು 17 ಮಂದಿ ಈಗ ಜೈಲ್ಲಿನಲ್ಲಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಅವರ ಜೈಲುವಾಸ 25ನೇ ದಿನಕ್ಕೆ ಕಾಲಿಟ್ಟಿದೆ. ಇದೆಲ್ಲದರ ನಡುವೆ ಪತ್ನಿ ವಿಜಯಲಕ್ಷ್ಮಿ ಮತ್ತು ಸಹೋದರ ದಿನಕರ್ ತೂಗುದೀಪ ದರ್ಶನ್ ಕಾಣಲು ಬಂದಿದ್ದರು.
ನಾಲ್ಕನೇ ಬಾರಿ ವಿಜಯಲಕ್ಷ್ಮಿ ದರ್ಶನ್ ಭೇಟಿಗೆ ಆಗಮಿಸಿದ್ದು, ವಿಜಯಲಕ್ಷ್ಮಿ ಜೊತೆ ಸಹೋದರ ದಿನಕರ್ ತೂಗುದೀಪ ಸೇರಿ ಮೂವರಿದ್ದರು. ಅರ್ಧ ಗಂಟೆ ಜೈಲಿನ ವಿಶೇಷ ಕೊಠಡಿಯಲ್ಲಿ ದರ್ಶನ್ ಜೊತೆ ಚರ್ಚೆ, ಮಾತುಕತೆ ನಡೆಸಿ ವಾಪಾಸ್ ಆಗಿದ್ದಾರೆ.
ನಟ ದರ್ಶನ್ ಬಿಡುಗಡೆ ಭವಿಷ್ಯ ನುಡಿದ ದಸರೀಘಟ್ಟ ಚೌಡೇಶ್ವರಿ, ದೇವಿ ಕಳಸದಲ್ಲಿ ಬರೆದಿದ್ದೇನು?
ಕೂಲ್ ಆದ ದರ್ಶನ್: ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್, ಯಾರೇ ಭೇಟಿಗೆ ಹೋದರೂ ಅಭಿಮಾನಿಗಳ ಬಗ್ಗೆ ಚರ್ಚೆ ನಡೆಸುತ್ತಿದ್ದಾರಂತೆ. ಅಭಿಮಾನಿಗಳು ಯಾವುದೇ ತೊಂದರೆ ಮಾಡಬಾರದು ಎನ್ನುವ ಬಗ್ಗೆ ಮಾತು ಆಡಿದ್ದಾರಂತೆ. ಏನೋ ಮಾಡಲು ಹೋಗಿ ಮತ್ತೇನೋ ಆಗುತ್ತೆ ಎನ್ನುವ ಆತಂಕ ದರ್ಶನ್ ಗೆ ಇದೆ ಎನ್ನಲಾಗಿದೆ.
ನಟ ಧನ್ವೀರ್, ನಿರ್ಮಾಪಕ ಕೆ ಮಂಜು, ಪತ್ನಿ ವಿಜಯಲಕ್ಷ್ಮಿ ಹೋದಾಗಲೂ ಇದೇ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಅಭಿಮಾನಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದು. ಜೈಲಿನ ಬಳಿ ಬಂದು ವಾಪಾಸ್ ಹೋಗುವುದು ಬೇಡ ಎಂದು ಭೇಟಿಗೆ ಬಂದಿರುವವರ ಬಳಿ ಹೇಳಿದ್ದಾರಂತೆ.
ಹಾಗಾದ್ರೆ ದರ್ಶನ್ ಈ ವಿಚಾರವನ್ನು ಮತ್ತೆ ಮತ್ತೆ ಹೇಳುತ್ತಿರುವುದು ಯಾಕೆ? ಈಗಾಗಲೇ ಆಗಿರುವ ಘಟನೆಯ ಬಗ್ಗೆ ದರ್ಶನ್‌ಗೆ ಅರಿವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದು ಆಗಿದೆ. ಮತ್ತೆ ಅಭಿಮಾನಿಗಳು ಇನ್ನೇನಾದರೂ ತೊಂದರೆ ಮಾಡಿದರೆ. ಈ ಕೇಸ್ ಮೇಲೆ ಮತ್ತೊಂದು ಕೆಟ್ಟ ಹೆಸರು ಬರುತ್ತೆ ಅನ್ನೋ ಆತಂಕ ಇದೆ. ಹೀಗಾಗಿ ಎಲ್ಲರ ಜೊತೆಗೂ ಚರ್ಚೆ ನಡೆಸುತ್ತಿದ್ದಾನೆ ಎನ್ನಲಾಗಿದೆ.
ದರ್ಶನ್ ಜೈಲು ಸೇರಿ 25 ದಿನ ಆಗ್ತಿದೆ. ನಾಲ್ಕು ಗೋಡೆಯ ಮಧ್ಯೆ ಬಿಗಿ ಭದ್ರತೆಯಲ್ಲಿ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಜೈಲಿನಲ್ಲಿ ಸಂಪೂರ್ಣ ಬದಲಾದಂತೆ ವರ್ತನೆ ತೋರುತ್ತಿದ್ದು, ಪುಸ್ತಕ ಓದುವುದು, ದೇಹ ದಂಡಿಸುವುದು, ಮುಂಜಾನೆ ಎದ್ದು ಬಿಸಿ ನೀರು ಕುಡಿದು ಧ್ಯಾನ ಮಾಡುವುದು. ಹೀಗೆ ಹತ್ತು ಹಲವು ರೀತಿಯಲ್ಲಿ ಜೈಲಿನಲ್ಲಿ ಕೂಲ್ ಆಗಿರಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ.