ದರ್ಶನ್ ಗ್ಯಾಂಗ್ ಸಹಚರರ ಕೈಗೆ ಕಬ್ಬಿಣದ ಸರಪಳಿ, ಸುತ್ತಲೂ ಖಾಕಿಪಡೆ; ನೆನಪಾಗುತ್ತೆ ಅಂಬರೀಶ್ ಅಂತ ಸಿನಿಮಾ ದೃಶ್ಯ!

By Sathish Kumar KH  |  First Published Jun 26, 2024, 6:41 PM IST

ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ದರ್ಶನ್‌ ಗ್ಯಾಂಗ್‌ನ ನಾಲ್ವರು ಸಹಚರರನ್ನು ಕಬ್ಬಿಣದ ಸರಪಳಿ ಕಟ್ಟಿ, ಬಿಗಿ ಪೊಲೀಸ್ ಭದ್ರತೆಯಲ್ಲಿ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ವರ್ಗಾಯಿಸಲಾಯಿತು. ಇದು ಅಂಬರೀಶ್ ಅವರ ಹಂತ ಸಿನಿಮಾದ ದೃಶ್ಯ ನೆನಪಿಸುವಂತಿತ್ತು.


ತುಮಕೂರು (ಜೂ.26): ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಸೇರಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ ನಾಲ್ವರು ಆರೋಪಿಗಳನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ರವಾನೆ ಮಾಡುವಾಗ ಅವರ ಕೈಗೆ ಮಾರುದ್ದ ಕಬ್ಬಿಣದ ಸರಪಳಿ ಹಾಕಿ ಹತ್ತಾರು ಪೊಲೀಸರ ಬಿಗಿ ಭದ್ರತೆಯಲ್ಲಿ ಕರೆತಂದಿದ್ದು ನೋಡಿದರೆ ಅಂಬರೀಶ್ ಅವರ ಅಂತ ಸಿನಿಮಾದ ದೃಶ್ಯಗಳು ಕಣ್ಣ ಮುಂದೆ ಬಂದು ಹೋದಂತಾಗಿದೆ.

ಹೌದು, ರಾಜ್ಯದಲ್ಲಿ ಕನ್ನಡ ಚಿತ್ರರಂಗಕ್ಕೆ ಕಪ್ಪು ಚುಕ್ಕೆಯಾಗುವಂತಹ ಘಟನೆಯೊಂದು ನಡೆದಾಗಿದೆ. ಕನ್ನಡ ಸಿನಿಮಾ ನಟಿಗೆ ಅಶ್ಲೀಲವಾಗಿ ಕಾಮೆಂಟ್ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿರುವ ನಟ ದರ್ಶನ್ ಅಂಡ್ ಗ್ಯಾಂಗ್‌ನ 17 ಜನರು ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲು ಜೈಲು ಸೇರಿದ್ದಾರೆ. ಇನ್ನು ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಸರೆಂಡರ್ ಆಗಲು ಪೊಲೀಸ್ ಠಾಣೆಗೆ ಬಂದಿದ್ದ ಮೂವರು ಆರೋಪಿಗಳು ವಿಚಾರಣೆ ವೇಳೆ ನಟ ದರ್ಶನ್ ಹಾಗೂ ಇತರರ ಹೆಸರನ್ನು ಬಾಯಿ ಬಿಟ್ಟಿದ್ದರು. ಉಳಿದಂತೆ ರೇಣುಕಾಸ್ವಾಮಿ ಹೆಣ ಸಾಗಾಟ ಮಾಡಿದ್ದ ಆಟೋ ಚಾಲಕ ಸೇರಿ ನಾಲ್ವರಿಗೆ ಜೈಲಿನಲ್ಲಿರುವ ಕೈದಿಗಳಿಂದ ಅಪಾಯವಿದೆ ಎಂಬ ಮುನ್ನಚ್ಚರಿಕೆ ತಿಳಿದ ಪೊಲೀಸರು ಕಾನೂನು ಸಂರಕ್ಷಣೆ ದೃಷ್ಟಿಯಿಂದ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರಿನ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

Tap to resize

Latest Videos

undefined

ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ನಟ ದರ್ಶನ್ ಹೆಸರೇಳಿದ ನಾಲ್ವರು ಆರೋಪಿಗಳು ತುಮಕೂರು ಜೈಲಿಗೆ ಶಿಪ್ಟ್!

ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ನಿಂದ ಆರೋಪಿಗಳನ್ನು ಸ್ಥಳಾಂತರ ಮಾಡಲು ಅನುಮತಿ ನೀಡಿದ ಬೆನ್ನಲ್ಲಿಯೇ ಬುಧವಾರ ನಾಲ್ವರು ಆರೋಪಿಗಳನ್ನು ಸ್ಥಳಾಂತರ ಮಾಡಲಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ರವಿಶಂಕರ್, ನಿಖಿಲ್, ಕೇಶವ್ ಹಾಗೂ ಕಾರ್ತಿಕ್ ಸೇರಿ ನಾಲ್ವರನ್ನು ಬೆಂಗಳೂರಿನ ಸೆಂಟ್ರಲ್ ಜೈಲಿನಿಂದ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಟೆಂಪೋ ಟ್ರಾವೆಲರ್ ಮಾದರಿಯ ಪೊಲೀಸ್ ವಾಹನದಲ್ಲಿ ಬಿಗಿ ಭದ್ರತೆಯಲ್ಲಿ ಕರೆತರಲಾಗಿದೆ. ಈ ನಾಲ್ವರು ಆರೋಪಿಗಳ ಕೈಗೆ ಮಾರುದ್ದದ ಕಬ್ಬಿಣದ ಸರಪಳಿಗಳನ್ನು ಹಾಕಿ ಕರೆದುಕೊಂಡು ಬರಲಾಗಿದೆ.

ಜೈಲಿನೊಳಗೆ ಕಳಿಸುವ ದೃಶ್ಯ ಹೇಗಿತ್ತು?
ರೇಣುಕಾಸ್ವಾಮಿ ಕೊಲೆ ಮಡಿದ ದರ್ಶನ್ ಅಂಡ್ ಗ್ಯಾಂಗ್‌ ನಾಲ್ವರು ಆರೋಪಿಗಳನ್ನು ಕರೆತಂದ ವಾಹನವನ್ನು ತುಮಕೂರಿನ ಊರುಕೆರೆ ಬಳಿಯ ರಂಗಾಪುರದಲ್ಲಿರುವ ಜಿಲ್ಲಾ ಕಾರಾಗೃಹದ ದ್ವಾರಬಾಗಿಲಿನಿಂದ 20 ಮಿಟರ್ ದೂರದಲ್ಲಿ ನಿಲ್ಲಿಸಲಾಯಿತು. ಈ ವೇಳೆ ಸುಮಾರು 10ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿ ಬಂದು ಸ್ಥಳದಲ್ಲಿ ಜಮಾಯಿಸಿದರು. ಮಾಧ್ಯಮಗಳು ಸೇರಿದಂತೆ ಯಾರೊಬ್ಬರಿಗೂ ಹತ್ತಿರ ಸುಳಿಯದಂತೆ ಅಡ್ಡಗಟ್ಟಿ ಆರೋಪಿಗಳು ಬಂದಿದ್ದ ವಾಹನದ ಬಾಗಿಲು ತೆರೆಯಲಾಯಿತು. ಆಗ ಹೊರಗಿನಿಂದ ಸೂಚನೆ ನೀಡಿದ ನಂತರ ಒಬ್ಬರು ಪೊಲೀಸರು ಹೊರಗೆ ಬಂದು ಕೈದಿಗಳ ವರ್ಗಾವಣೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡು ಒಳಗಿದ್ದ ಇತರೆ ಪೊಲೀಸರಿಗೆ ಒಬ್ಬೊಬ್ಬರನ್ನಾಗಿ ಹೊರಗೆ ಕರೆದುಕೊಂಡು ಬರಲು ಸೂಚನೆ ನೀಡುತ್ತಾರೆ.

ಆತ್ಮಹತ್ಯೆ ಮಾಡಿಕೊಂಡ ನಿರ್ಮಾಪಕ ಸೌಂದರ್ಯ ಜಗದೀಶ್ ಕೊಟ್ಟ ಹಣದಲ್ಲಿ ಪವಿತ್ರಾಗೌಡ ಮನೆ ಖರೀದಿ?

ವಾಹನದಲ್ಲಿ ಬಂದಿದ್ದ ಮೊದಲ ಆರೋಪಿಯನ್ನು ಬಾಗಿಲ ಬಳಿ ಕರೆಸಿ ಅವರ ಕೈಗೆ ಹಾಕಲಾಗಿದ್ದ ಮಾರುದ್ದ ಕಬ್ಬಿಣದ ಸರಪಳಿಯನ್ನು ಒಬ್ಬ ಪೊಲೀಸರು ಹಿಡಿದುಕೊಂಡು ಕೆಳಗಿಳಿಸುತ್ತಾರೆ. ನಂತರ, ಅಲ್ಲಿಂದ ಜೈಲಿನ ಬಾಗಿಲೊಳಗೆ ಹೋಗುವವರೆಗೂ ಇನ್ನೊಬ್ಬ ಆರೋಪಿಯನ್ನು ವಾಹನದಿಂದ ಕೆಳಗೆ ಇಳಿಸುವುದಿಲ್ಲ. ಮೊದಲ ಆರೋಪಿ ಒಳಗೆ ಹೋದ ನಂತರ ಇನ್ನೊಬ್ಬರನ್ನು ಕೆಳಗಿಳಿಸಿ ಕೈಯಲ್ಲಿದ್ದ ಸರಪಳಿ ಹಿಡಿದುಕೊಂಡು ಸುತ್ತಲೂ ಪೊಲೀಸ್ ಸರ್ಪಗಾವಲಿನ ನಡುವೆ ಜೈಲಿನೊಳಗೆ ಕಳುಹಿಸಲಾಯಿತು. ಹೀಗೆ ನಾಲ್ವರನ್ನು ರವಾನಿಸಲಾಯಿತು. ಇನ್ನು ನಾಲ್ವರೂ ಆರೋಪಿಗಳ ಕೈಯಲ್ಲೂ ಬಟ್ಟೆಯ ಚೀಲ ಕೈಯಲ್ಲಿತ್ತು.

click me!