ಪೊಲೀಸ್‌ ಠಾಣೆಯಲ್ಲೇ ಮಹಿಳೆ ಮೇಲೆ 3 ದಿನ ಅತ್ಯಾಚಾರ ಎಸಗಿದ ಸಬ್ ಇನ್ಸ್ಪೆಕ್ಟರ್

By Suvarna News  |  First Published Mar 8, 2021, 4:34 PM IST

ಜೈಲಿನಲ್ಲಿಯೇ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಸಬ್ ಇನ್ಸ್‌ಪೆಕ್ಟರ್ | ರಾಜಸ್ಥಾನ ಮೂಲದ ಮಹಿಳೆ ಜೈಲಿನಲ್ಲಿಯೇ ರೇಪ್


ಜೈಪುರ(ಮಾ.07): ಸಬ್‌ಇನ್ಸ್‌ಪೆಕ್ಟರ್ ಯುವತಿಯ ಮೇಲೆ ಸತತ ಮೂರು ದಿನ ಕ್ರೂರವಾಗಿ ಅತ್ಯಾಚಾರ ಮಾಡಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.

ರಾಜಸ್ಥಾನದ ಜೈಲಿನಲ್ಲಿ 26 ವರ್ಷದ ಯುವತಿಯನ್ನು ಮೂರು ದಿನಗಳ ಕಾಲ ಅತ್ಯಾಚಾರ ಮಾಡಿರುವ ಪೊಲೀಸ್ ವಿರುದ್ಧ ಈಗ ಆಕ್ರೋಶ ವ್ಯಕ್ತವಾಗಿದೆ.

Tap to resize

Latest Videos

ಭಟ್ಕಳ: ಬಾಲಕಿ ಮೇಲೆ ಅತ್ಯಾಚಾರ, ಇಬ್ಬರು ಕಾಮುಕರ ಬಂಧನ

ಅಲ್ವಾರ್ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಮಹಿಳೆ ಪತಿಯ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಳು. ಕೇಸಿನ ಸಂಬಂಧ ಮಹಿಳೆ ಪೊಲೀಸ್ನನ್ನು ಭೇಟಿಯಾಗಿದ್ದಳು.

ಆದರೆ ಆಶ್ರಯ ಕೋರಿ ಬಂದ ಮಹಿಳೆಯ ಮೇಲೆಯೇ ಅತ್ಯಾಚಾರ ಮಾಡಲಾಗಿದೆ. ಇದೀಗ ಘಟನೆ ಬಗ್ಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಸಬ್‌ಇನ್ಸ್‌ಪೆಕ್ಟರ್ ಕಾನೂನು ಕ್ರಮ ಎದುರಿಸಲಿದ್ದಾರೆ.

click me!