15 ವರ್ಷದ ಬಾಲಕಿ ಮೇಲೆ ಹಲವಾರು ಸಾರಿ ಎರಗಿದ ಕಾಮುಕ ಇನ್ಸ್‌ಪೆಕ್ಟರ್‌

By Suvarna News  |  First Published Jun 25, 2021, 10:33 PM IST

* ಬಾಲಕಿ ತಾಯಿ-ಚಿಕ್ಕಮ್ಮನೊಂದಿಗೆ ಪೊಲೀಸ್ ಅಧಿಕಾರಿ ಅಕ್ರಮ ಸಂಬಂಧ
* ಗನ್ ತೋರಿಸಿ ಬಾಲಕಿಯ ಮೇಲೆ ದೌರ್ಜನ್ಯಕ್ಕೆ ಯತ್ನ
* ತಪ್ಪಿಸಿಕೊಂಡು ತಂದೆ ಬಳಿ ಓಡಿಹೋಗಿ ದೂರು ದಾಖಲು


ಚೆನ್ನೈ(ಜೂ. 25) ಕಾನೂನು ಕಾಪಾಡುವ ಅಧಿಕಾರದಲ್ಲಿ ಇರುವವರೆ ಕೆಟ್ಟ ದಾರಿ ಹಿಡಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆ. ಪೊಲೀಸ್  ಇನ್ಸ್‌ಪೆಕ್ಟರ್‌ ಮಾಡಿದ ನೀಚ ಕೆಲಸ ಬಹಿರಂಗವಾಗಿದೆ.

15 ವರ್ಷದ ಬಾಲಕಿಯನ್ನು ಬೆದರಿಸಿ ಸೆಕ್ಸ್‌ ಗೆ ಒತ್ತಾಯಿಸುತ್ತಿದ್ದ ಅಧಿಕಾರಿ ಮೇಲೆ ದೂರು ದಾಖಲಾಗಿದೆ. ಕಾಸಿಮೇಡು ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ನನ್ನು ಬಂಧಿಸಲಾಗಿದೆ.

Tap to resize

Latest Videos

ಆರೋಪಿ ಆಧಿಕಾರಿ ಬಾಲಕಿಯ ತಾಯಿ ಮತ್ತು ಚಿಕ್ಕಮ್ಮನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆಗಾಗ ಅವರ ಮನೆಗೆ ಭೇಟಿ ನೀಡುತ್ತಿದ್ದ. ಮಹಿಳೆಯರು ಈತನಿಂದ ಸಾಕಷ್ಟು ಹಣ ಪಡೆದುಕೊಂಡಿದ್ದರು. ಈ ವೇಳೆ ಮನೆಯಲ್ಲಿರುತ್ತಿದ್ದ ಬಾಲಕಿಯ ಮೇಲೆ ಹಲವಾರು ಸಾರಿ ದೌರ್ಜನ್ಯ ಎಸಗಿದ್ದ. 

'ಕನಸಿನಲ್ಲಿ ಬರುವ ಮಾಂತ್ರಿಕ ನನ್ನ ರೇಪ್ ಮಾಡ್ತಾನೆ'

ಬಾಲಕಿ ತಂದೆ ಬೇರೆ ಕಡೆ ವಾಸವಿದ್ದರು. ಸಂದರ್ಭ ಬಳಸಿಕೊಂಡು ಬಾಲಕಿ ಮನೆಯಿಂದ  ತಪ್ಪಿಸಿಕೊಂಡು ಬಂದು ತಂದೆಗೆ ವಿಚಾರ ತಿಳಿಸಿದ್ದಾಳೆ. ಇದೀಗ ಅಧಿಕಾರಿ , ತಾಯಿ ಮತ್ತು ಚಿಕ್ಕಮ್ಮನ ಮೇಲೆ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು ಶೃಂಗೇರಿಯಲ್ಲಿ ತಾಯಿಯೊಬ್ಬಳು ತನ್ನ ಮಗಳನ್ನು ನಲವತ್ತು ಜನ ಕಾಮುಕರ ಕೈಗೆ ಕೊಟ್ಟಿದ್ದು ದೊಡ್ಡ ಸುದ್ದಿಯಾಗಿತ್ತು.

click me!