ಕೊಲೆ ಮಾಡಿ ಶವ ಬಿಸಾಡಿ ಹೋದ ದುಷ್ಕರ್ಮಿಗಳು| ರಾಮನಗರ ಜಿಲ್ಲೆಯ ಬಿಡfಇ ತಾಲೂಕಿನ ಬಿಡದಿಯಲ್ಲಿ ನಡೆದ ಘಟನೆ| ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ ಪೊಲೀಸರು|
ರಾಮನಗರ(ಮಾ.21): ಬೆಂಗಳೂರು ಮೂಲದ ಯುವಕನ ಎದೆಗೆ ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಬಿಡದಿಯಲ್ಲಿ ನಡೆದಿದೆ.
ಭರತ್(18) ಕೊಲೆಯಾಗಿರುವ ಯುವಕ, ಬೆಂಗಳೂರಿನ ಶ್ರೀನಗರ ಮೂಲದ ಈತನನ್ನು ಬಿಡದಿಯ ಸಮೀಪ ಕೊಲೆ ಮಾಡಿ, ಮಾಯಗಾನಹಳ್ಳಿ ಗ್ರಾಮದ ಹೊರವಲಯದಲ್ಲಿ ಶವವನ್ನು ಬಿಸಾಡಿ ಹೋಗಿದ್ದಾರೆ.
ಗದಗ: ವಿವಾಹಕ್ಕೆ ಅಡ್ಡಿ, ಚಿಕ್ಕಪ್ಪನನ್ನೇ ಬರ್ಬರವಾಗಿ ಕೊಂದ ಮಗ
ಘಟನಾ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಮತ್ತು ಬಿಡದಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಬಿಡದಿ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.