ದುಬೈನಲ್ಲಿ ವೆಡ್ಡಿಂಗ್ ಆನಿವರ್ಸರಿ ಆಚರಿಸಿಕೊಂಡದ್ದಕ್ಕೆ ದರ್ಶನ್‌ ಜತೆ ಮಾತು ಬಿಟ್ಟಿದ್ದ ಪವಿತ್ರಾ ಗೌಡ!

By Gowthami K  |  First Published Jul 7, 2024, 3:25 PM IST

ರೇಣುಕಾ ಸ್ವಾಮಿ ಕೊಲೆಗೂ ಮೊದಲು ದರ್ಶನ್​ ಜೊತೆ ಪವಿತ್ರಾ ಗೌಡ ಗಲಾಟೆ ಮಾಡಿದ್ದಳಂತೆ. ದುಬೈನಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಮದುವೆ ವಾರ್ಷಿಕೋತ್ಸವ ಮಾಡಿಕೊಂಡಿದ್ದಕ್ಕೆ ಸಿಟ್ಟಾಗಿದ್ದಳಂತೆ


ಬೆಂಗಳೂರು (ಜೂ.24): ಬೆಂಗಳೂರಿನಲ್ಲಿ ಚಿತ್ರದುರ್ಗದ ರೇಣುಕಾ ಸ್ವಾಮಿ (RenukaSwamy) ಕೊಲೆ ಪ್ರಕರಣ ಆರೋಪದ ಹಿನ್ನೆಲೆ ನಟ ದರ್ಶನ್ (Actor Darshan), ಆತ್ಮೀಯ ಗೆಳತಿ ಪವಿತ್ರಾ ಗೌಡ  (  Pavithra Gowda) ಸೇರಿ ಒಟ್ಟು 17 ಮಂದಿ ಸದ್ಯ ಕೇಂದ್ರಕಾರಾಗೃಹ ಪರಪ್ಪನ ಅಗ್ರಹಾರದಲ್ಲಿದ್ದಾರೆ.

ಆದ್ರೆ ಈಗ ದರ್ಶನ್ ಮತ್ತು ಪವಿತ್ರಾ ಗೌಡಗೆ ಸಂಬಂಧಿಸಿದ ಮತ್ತೊಂದು ಸ್ಪೋಟಕ ಸುದ್ದಿ ಹೊರಬಿದ್ದಿದೆ. ನಟಿ ಪವಿತ್ರಾ ಗೌಡ ದರ್ಶನ್ ಮೇಲೆ ಮುನಿಸಿಕೊಂಡಿದ್ದಳೆಂದು ತಿಳಿದುಬಂದಿದೆ.  ರೇಣುಕಾ ಸ್ವಾಮಿ ಕೊಲೆಗೂ ಮೊದಲು ದರ್ಶನ್​ ಜೊತೆ ಪವಿತ್ರಾ ಗೌಡ ಗಲಾಟೆ ಮಾಡಿದ್ದಳಂತೆ.

Tap to resize

Latest Videos

ಮೇ ತಿಂಗಳು 19ರಂದು ದುಬೈನಲ್ಲಿ ಪತ್ನಿ ವಿಜಯಲಕ್ಷ್ಮಿ ಜೊತೆ ನಟ ದರ್ಶನ್ ಮದುವೆ ವಾರ್ಷಿಕೋತ್ಸವ ಮಾಡಿಕೊಂಡಿದ್ದರು. ವೆಡ್ಡಿಂಗ್ ಆನಿವರ್ಸರಿ ಫೋಟೋ ವೀಡಿಯೋವನ್ನು ವಿಜಯಲಕ್ಷ್ಮಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಆದ್ರೆ ಇದನ್ನ ನೋಡಿದ ಪವಿತ್ರಾ ಗೌಡ ದರ್ಶನ್ ವಿರುದ್ಧ ಸಿಟ್ಟಾಗಿದ್ದಳು.

ಇದಾದ ಒಂದು ದಿನದ ಬಳಿಕ ಪವಿತ್ರಾ ಗೌಡ ಸೋಷಿಯಲ್ ಮೀಡಿಯಾದಲ್ಲಿ  ದರ್ಶನ್ ಹೇಳಿದ್ದ ಕರ್ಮ ರಿಟರ್ನ್ಸ್ ಹೇಳಿಕೆಯನ್ನ ಪೋಸ್ಟ್ ಮಾಡಿದ್ದಳು. ಮೇ 21ರಂದು ಪವಿತ್ರಾ ಗೌಡ ಪೋಸ್ಟ್ ಮಾಡಿದ್ದಳು. ವಿಜಯಲಕ್ಷ್ಮಿ ಜೊತೆಗೆ ವಿವಾಹ ವಾರ್ಷಿಕೋತ್ಸವದ ಫೋಟೋ ನೋಡಿ ದರ್ಶನ್ ಮೇಲೆ ಕೋಪದಲ್ಲಿ ಪವಿತ್ರಾ ಪೋಸ್ಟ್ ಮಾಡಿದ್ದಳು ಎನ್ನಲಾಗಿದೆ.

ಇದಾದ ಬಳಿಕ ಪವಿತ್ರಾ ಗೌಡ ದರ್ಶನ್ ಜೊತೆ ಒಂದು ವಾರ ಮಾತು ಬಿಟ್ಟಿದ್ರಂತೆ. ಆದರೆ ಇಗೀಗ ಪವಿತ್ರಾ ಗೌಡನನ್ನ ಸಮಾಧಾನ ಮಾಡೋಕೆ ರೇಣುಕಾ ಸ್ವಾಮಿಯನ್ನ ಎತ್ತಾಕಿಕೊಂಡು ಬಂದಿದ್ರಾ ದರ್ಶನ್ ಗ್ಯಾಂಗ್? ಪವಿತ್ರಾ ಜೊತೆಗಿನ ಸ್ನೇಹ ಉಳಿಸಿಕೊಳ್ಳೋಕೆ ರೇಣುಕಾ ಸ್ವಾಮಿ ಮೇಲೆ ನಡೀತಾ ಗೆ ಹಿಗ್ಗಾ ಮುಗ್ಗ ಹಲ್ಲೆ? ಇದಕ್ಕೆ ಪೂರಕ ಎಂಬಂತೆ ಶೆಡ್​ಗೆ ಪವಿತ್ರಾ ಗೌಡರನ್ನ ಕರೆಸಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದ ನಟ ದರ್ಶನ್. 

click me!