* ಬಾಗಲಕೋಟೆ ಜಿಲ್ಲೆಯಲ್ಲಿ ನಾಲ್ವರ ಸಹೋದರರ ಬರ್ಬರ ಹತ್ಯೆ
* ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟಂಬದ ನಾಲ್ವರನ್ನ ಕೊಚ್ಚಿ ಕೊಲೆ
* ಮಖಂಡಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ
ಬಾಗಲಕೋಟೆ, (ಆ.28): ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕುಟುಂಬವೊಂದನ್ನು ದಾರುಣವಾಗಿ ಹತ್ಯೆ ಮಾಡಲಾಗಿದೆ.
ಹೌದು...ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಮಧುರಖಂಡಿಯಲ್ಲಿ ಜಮೀನಿಗೆ ಸಂಬಂಧಿಸಿದ ವಿಚಾರಕ್ಕೆ ಇಂದು (ಆ.28) ಒಂದೇ ಕುಟುಂಬದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
4 ಜನರ ಕುಟುಂಬ ಕಾರು ಸಮೇತ ಭದ್ರಾ ನಾಲೆಗೆ ಬಿದ್ದು ಆತ್ಮಹತ್ಯೆ ಯತ್ನ
ಸೋದರರಾದ ಹನುಮಂತ ಉದಗಟ್ಟಿ(45), ಮಲ್ಲಪ್ಪ ಉದಗಟ್ಟಿ (35), ಬಸಪ್ಪ ಉದಗಟ್ಟಿ (37), ಈಶ್ವರ ಉದಗಟ್ಟಿ(35) ಹತ್ಯೆಗೀಡಾದವರು.
ತೋಟದ ಮನೆಯೊಂದರಲ್ಲಿ ನಾಲ್ವರು ಸಹೋದರನ್ನು ದುಷ್ಕರ್ಮಿಗಳು ದಾರುಣವಾಗಿ ಹತ್ಯೆಗೈದಿದ್ದಾರೆ. ಇನ್ನು ವಿಷಯ ತಿಳಿದು ಜಮಖಂಡಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ಆರಂಭಿಸಿದ್ದಾರೆ.
ಆಸ್ತಿ ಸಲುವಾಗಿ ಹಲವಾರು ವರ್ಷಗಳಿಂದ ಮನೆತನದ ನಡುವೆ ಜಗಳ ಇತ್ತು. ಆ ಒಂದು ವೈಷಮ್ಯದಿಂದ ನಾಲ್ವರು ಸಹೋದರರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.