ನಟ ದರ್ಶನ್ ಅವರನ್ನು ರೇಣುಕಾಸ್ವಾಮಿ ಕೊಲೆ ಕೇಸಿನಿಂದ ಸೇಫ್ ಮಾಡಲು ಪೊಲೀಸರಿಗೆ ಸರೆಂಡರ್ ಆಗಿದ್ದವರೇ ಈಗ ದರ್ಶನ್‌ಗೆ ಪ್ರಮುಖ ವಿಲನ್‌ಗಳಾಗಿದ್ದಾರೆ.
ಬೆಂಗಳೂರು (ಜು.06): ನಟಿ ಪವಿತ್ರಾಗೌಡ ಅವರಿಗೆ ಅಶ್ಲೀಲ ಮೆಸೇಜ್ ಮಾಡಿದ್ದ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪಿ ನಟ ದರ್ಶನ್ (actor darshan thoogudeepa ) ಅವರನ್ನು ಸೇಫ್ ಮಾಡಲು ಪೊಲೀಸರಿಗೆ ಸರೆಂಡರ್ ಆದವರೇ ಈಗ ದರ್ಶನ್ ಅಂಡ್ ಗ್ಯಾಂಗ್‌ಗೆ ದೊಡ್ಡ ವಿಲನಗಾದಗಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಮಾಡಿದ ಆರೋಪದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಸಿಲುಕಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಹೈ ಪ್ರೊಫೈಲ್ ಕೇಸ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿ (Renuka swamy kidnap) ಬೆಂಗಳೂರಿಗೆ ಕರೆತಂದು ಭೀಕರವಾಗಿ ಹಲ್ಲೆ ಮಾಡಿ ಕೊಲೆ ಮಾಡಿ, ರಸ್ತೆ ಬದಿಯ ಮೋರಿಯಲ್ಲಿ ಹೆಣ ಬೀಸಾಡಿ ಹೋಗಿದ್ದರು. ಈ ಪ್ರಕರಣದಲ್ಲಿ ನಟ ದರ್ಶನ್ ಸೇಫ್ ಮಾಡಲು ಮೂವರನ್ನು ಕೊಲೆ ಕೇಸಿನಲ್ಲಿ ಸರೆಂಡರ್ ಆಗುವಂತೆ ಕಳಿಸಲಾಗಿತ್ತು. ಆದರೆ, ಈಗ ನಟ ದರ್ಶನ್‌ಗೆ ಅವರೆ ವಿಲನ್‌ಗಳಾಗಿದ್ದಾರೆ. ಯಾವ ವಿಚಾರವನ್ನು ಹೇಳಬೇಡಿ ಎಂದು ಹೇಳಿ ಕಳಿಸಿದ್ದರೂ ಎಲ್ಲ ದರ್ಶನ್ ವಿರುದ್ಧ ಎಲ್ಲ ಸಾಕ್ಷಿಗಳನ್ನೂ ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾರೆ.
ಹೌದು, ಸೇಫ್ ಆಗಲು ರೆಡಿ ಮಾಡಿದ್ದವರೇ ಈಗ ದರ್ಶನ್ ಗೆ ವಿಲನ್‌ಗಳು ಆಗಿದ್ದರೆ. ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಏನೂ ಹೇಳಬೇಡಿ ಅಂತ ಕಳಿಸಿದವರೆ ಎಲ್ಲಾ ಬಾಯಿ ಬಿಟ್ಟಿದ್ದಾರೆ. ಪೊಲೀಸರ ಮುಂದೆ ಮಾತ್ರ ಅಲ್ಲ, ಮ್ಯಾಜಿಸ್ಟ್ರೇಟ್ ಮುಂದೆಯೂ ಯಥಾವತ್ ಸ್ಟೇಟ್ ಮೆಂಟ್ ಕೊಟ್ಟಿದ್ದಾರೆ. ಸಾಕ್ಷಿ ನಾಶ ಮಾಡಲು ಕರೆಸಿದವರೇ ಈಗ ಪ್ರಮುಖ ಸಾಕ್ಷಿ ಆಗಿದ್ದರೆ. ಪ್ರಕರಣದಲ್ಲಿ ರೇಣುಕಾಸ್ವಾಮಿ ಮೃತ ದೇಹ ಡಿಸ್ಪೋಸ್ ಮಾಡಲು ಹೋಗಿದ್ದವರೇ ಎಲ್ಲಾ ಸತ್ಯ ಹೇಳಿದ್ದಾರೆ.
ಪಟ್ಟಣೆರೆಯ ಶೆಡ್ಡಿನಲ್ಲಿ ದರ್ಶನ್ ಅಂಡ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿಯನ್ನು ಭಕರವಾಗಿ ಕೊಲೆ ಮಾಡಿದ ನಂತರ, ಇದರಿಂದ ಬಚಾವಾಗಲು ಹಾಗೂ ಹೆಣವನ್ನು ಡಿಸ್ಪೋಜ್ ಮಾಡಲು ರವಿಶಂಕರ್, ನಿಖಿಲ್ ನಾಯಕ್, ಕಾರ್ತಿಕ್ ಅಲಿಯಾಸ್ ಕಪ್ಪೆ ಅವರಿಗೆ ಸೂಚನೆ ನೀಡಲಾಗಿತ್ತು. ಇದಾದ ನಂತರ ಕೊಲೆ ಮಾಡಿದ್ದು ತಾವೇ ಎಂದು ಒಪ್ಪಿಕೊಂಡು ಪೊಲೀಸರಿಗೆ ಸರೆಂಡರ್ ಆಗಲು ತಲಾ 30 ಲಕ್ಷ ರೂ. ಹಣವನ್ನೂ ನಿಗದಿ ಮಾಡಲಾಗಿತ್ತು. ತಕ್ಷಣಕ್ಕೆರ ತಲಾ 10 ಲಕ್ಷ ರೂ. ಹಣವನ್ನು ಕೊಡಲು ಕ್ಯಾಶ್ ತೋರಿಸಲಾಗಿತ್ತು. ಎಲ್ಲ ಯೋಜನೆಯಂತೆ ರೇಣುಕಾಸ್ವಾಮಿ ಕೊಲೆ ಮಾಡಿದ ಸಾಕ್ಷಿಯನ್ನ ನಾಶ ಪಡಿಸಿ, ಹೊಸ ಕಥೆ ಕಟ್ಟಿಕೊಂಡು ಪೊಲೀಸರ ಬಳಿ ಹೋಗಿದ್ದರು.
ಕರ್ನಾಟಕವೇ ಬೆಚ್ಚಿ ಬೀಳಿಸುವ ಸುದ್ದಿ ಓದಿದವಳಿಗೆ ಶೋಕಿಯೇ ಮುಳುವಾಯಿತಾ?
ಆದರೆ, ಈಗ ಇದೇ ಮೂವರು ಆರೋಪಿಗಳು ಪ್ರಕರಣಕ್ಕೆ ಪ್ರಮುಖ ಸಾಕ್ಷಿ ಆಗಿದ್ದಾರೆ. ಈ ಮೂವರ ಸಿಆರ್ ಪಿಸಿ 164 ಹೇಳಿಕೆ ದಾಖಲಿಸಿರುವ ಪೊಲೀಸರು, ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ್ದರಿಂದ ಸಾಕ್ಷ್ಯ ನಾಶ ಮಾಡಲು ಹೋದವರೇ ಈಗ ಪ್ರಮುಖ ಸಾಕ್ಷಿ ಆಗಿದ್ದಾರೆ. ಇದೇ ಕಾರಣಕ್ಕೆ ಪ್ರಮುಖ ಸಾಕ್ಷಿಗಳು ನಟ ದರ್ಶನ್ ಅಂಡ್ ಗ್ಯಾಂಗ್‌ನ ಬಳಿಯಿದ್ದರೆ ಅವರಿಗೆ ಹಾನಿಯಾಗುವ ಸಾಧ್ಯತೆಯಿದೆ ಹಾಗೂ ಸಾಕ್ಷ್ಯ ನಾಶಕ್ಕೆ ಬೇರೆ ಏನಾದರೂ ಪ್ರಭಾವ ಬೀರಬಹುದು ಎಂಬ ಉದ್ದೇಶದಿಂದ ಈ ಮೂವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ತುಮಕೂರು ಜೈಲಿಗೆ ಶಿಫ್ಟ್ ಮಾಡಲಾಗಿದೆ.