ಫ್ಲೆಕ್ಸ್ ವಿಚಾರಕ್ಕೆ ಗಲಾಟೆ, ಮೈಸೂರಿನಲ್ಲಿ ಮುಸ್ಲಿಂ ಧರ್ಮಗುರು ಬರ್ಬರ ಹತ್ಯೆ!

By Suvarna NewsFirst Published Mar 9, 2024, 10:38 AM IST
Highlights

ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅಯಾಜ್ (ಪಂಡು) ಸಹೋದರನನ್ನು ಭೀಕರ ಹತ್ಯೆ ಮಾಡಿರುವ ಘಟನೆ ಮೈಸೂರಿನ ರಾಜೀವ್ ನಗರದ ನಿಮ್ರಾ ಮಸೀದಿ ಬಳಿ ಶುಕ್ರವಾರ ರಾತ್ರಿ ನಡೆದಿದೆ.

 ಮೈಸೂರು (ಮಾ.9): ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಅಯಾಜ್ (ಪಂಡು) ಸಹೋದರ,  ಮುಸ್ಲಿಂ ಧರ್ಮಗುರುವನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.  ಮೈಸೂರಿನ ರಾಜೀವ್ ನಗರದ ನಿಮ್ರಾ ಮಸೀದಿ ಬಳಿ ಶುಕ್ರವಾರ ರಾತ್ರಿ ಈ ಕೊಲೆ ನಡೆದಿದೆ.

ಅಯಾಜ್ ಸಹೋದರ ಮುಸ್ಲಿಂ ಧರ್ಮಗುರು ಮೌಲಾನ ಅಕ್ಮಲ್ (45) ಹತ್ಯೆಗೊಳಗಾದ ದುರ್ದೈವಿ. ರಾಜೀವ್ ನಗರ ನಿಮ್ರಾ ಮಸೀದಿ ಬಳಿ ಇರುವ ಆರ್ಯ ಬೇಕರಿ ಮುಂಭಾಗ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಅಕ್ಮಲ್ ಅವರನ್ನು ದುಷ್ಕರ್ಮಿಗಳ ತಂಡ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದಾರೆ.

ಪ್ರತಾಪ್‌ ಸಿಂಹಗೆ ಟಿಕೆಟ್‌ ಮಿಸ್‌, ಯದುವೀರ್ ಸ್ಪರ್ಧೆ?: ಮೈಸೂರಲ್ಲಿ ಅಭ್ಯರ್ಥಿ ಬದಲಾವಣೆ ಸುಳಿವು ಕೊಟ್ಟ ವಿಜಯೇಂದ್ರ!

ಫ್ಲೆಕ್ಸ್ ವಿಚಾರಕ್ಕೆ ಗಲಾಟೆ ನಡೆದು ಅದನ್ನು ಪ್ರಶ್ನೆ ಮಾಡಿದ ಮುಸ್ಲಿಂ ಧರ್ಮಗುರು ಮೌಲಾನ ಅಕ್ಮಲ್ ನನ್ನು ಬರ್ಬರವಾಗಿ ಈ ಕೊಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಮೂರು ಬೈಕ್‌ನಲ್ಲಿ ಬಂದ 6 ಜನರು ಈ ಕೃತ್ಯ ಎಸಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಮೈಸೂರಿನ ಉದಯಗಿರಿಯ ಮಾದೇಗೌಡ ವೃತ್ತ ಸಮೀಪ ಘಟನೆ ನಡೆದಿದ್ದು,  ಕೊಲೆಯಾದ ಅಕ್ಮಲ್ ಪಾಷಾ ಮೈಸೂರು ಪಾಲಿಕೆ ಸದಸ್ಯ ನಯಾಜ್ ಪಾಷಾ ಯಾನೆ ಪಂಡು ಸಹೋದರನಾಗಿದ್ದಾನೆ.

ಕಳೆದ ನಾಲ್ಕು ದಿನಗಳಿಂದ ಫ್ಲೆಕ್ಸ್ ಗಲಾಟೆ ನಡೆಯುತ್ತಿತ್ತು. ಕೊಲೆ ಸಂಬಂಧ ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಹಾಗೂ ಮೈಸೂರು ಪಾಲಿಸ ಸದಸ್ಯ ಬಷೀರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಆದ ನಂತರ ಅಲ್ತಾಫ್ ಮೈಸೂರಿಗೆ ಆಗಮಿಸಿದ್ದ. ಅಲ್ತಾಫ್‌ಗೆ ಸ್ವಾಗತ ಕೋರಿ ಫ್ಲೆಕ್ಸ್ ಬಷೀರ್ ಅಳವಡಿಸಿದ್ದ. ಇದನ್ನು ಪ್ರಶ್ನೆ ಮಾಡಿ ಧರ್ಮಗುರು ಮೌಲಾನ ಅಕ್ಮಲ್ ಪಾಲಿಕೆಗೆ ದೂರು ನೀಡಿದ್ದ. ಇದರಿಂದ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿತ್ತು.

ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಶಾಸಕ ವಾಸು ನಿಧನ

ಈ ನಡುವೆ ಅಲ್ತಾಫ್ ಖಾನ್ ವಿರುದ್ಧ ವೀಡಿಯೋ ಮಾಡಿ ಅಕ್ಮಲ್ ಹರಿಹಾಯ್ದಿದ್ದ. ಇದರಿಂದ ಕ್ರೋದಗೊಂಡು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಎಸ್‌ಡಿಪಿಐ ಸಂಘನೆಯಲ್ಲೂ ಅಕ್ಮಲ್ ಗುರುತಿಸಿಕೊಂಡಿದ್ದ, ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಘಟನೆ ನಡೆದಿದ್ದು ಪ್ರಕರಣ ದಾಖಲು ಮಾಡಲಾಗಿದೆ.

click me!