Kalaburagi Crime: ಮೊಬೈಲ್‌ ಸ್ಟೇಟಸ್‌ನಲ್ಲಿ ಕೊಲೆಯ ಮುನ್ಸೂಚನೆ..!

By Kannadaprabha NewsFirst Published May 29, 2022, 12:05 PM IST
Highlights

*   ಕೊಲೆ ಮಾಡೋದಾಗಿ ಧಮಕಿ ಹಾಕಿ ತಮ್ಮ ಮೊಬೈಲ್‌ ಸ್ಟೇಟಸ್‌ ಇಟ್ಟುಕೊಂಡಿದ್ರಂತೆ ಹಂತಕರು
*  ಅನ್ಯ ಕೋಮಿನ ಯುವತಿ ಪ್ರೀತಿಸಿದ್ದಕ್ಕಾಗಿ ಯುವಕನ ಕೊಲೆ
*  ಹತ್ಯೆಗೈದವರನ್ನು ಶಿಕ್ಷಿಸಲೇಬೇಕು 

ಕಲಬುರಗಿ(ಮೇ.29):  ಕೊಲೆ ನಡೆದ ದಿನವೇ ಹಂತಕರು ಕೊಲೆ ಮಾಡೋದಾಗಿ ಧಮಕಿ ಹಾಕಿರುವ ಸ್ಟೇಟಸ್‌ ತಮ್ಮ ಮೊಬೈಲ್‌ಗೆ ಇಟ್ಟುಕೊಂಡಿದ್ದರೆಂಬ ಕಳವಳಕಾರಿ ಸಂಗತಿ ವಾಡಿ ಪಟ್ಟಣದಲ್ಲಿನ ಯುವಕನ ಹತ್ಯೆ ಹಿನ್ನೆಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅನ್ಯ ಕೋಮಿನ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಯುವಕ ವಿಜಯನ ಕೊಲೆ ಸಂಭವಿಸಿರುವ ವಾಡಿಯಲ್ಲಿ ಕೊಲೆ ನಡೆದ ದಿನವೇ ಆರೋಪಿಗಳು ತಮ್ಮ ಮೊಬೈಲ್‌ಗೆ ಕೊಲೆ ಮಾಡೋ ಧಮಕಿಯ ವಿಚಾರಗಳಿರುವ ವಿಷಯವನ್ನೇ ಸ್ಟೇಟಸ್‌ ರೂಪದಲ್ಲಿಟ್ಟು ಮೆರೆದಿದ್ದರೆಂದು ಕೊಲೆಯಾದ ಯುವಕನ ಕುಟುಂಬದವರು ಬಾಯಿಬಿಟ್ಟಿದ್ದಾರೆ.

ದಾವಣಗೆರೆ: ದೇವರ ಮಗ ಮರ್ಡರ್‌ ಕೇಸ್‌, 48 ಗಂಟೆಯಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು

ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ, ಅಲ್ಪಸಂಖ್ಯಾತ ಹಕ್ಕುಗಳ ಸಮಿತಿ ಹುಸೇನ್‌, ದಲಿತ ಹಕ್ಕುಗಳ ಸಮಿತಿ ಸುಧಾಮ ಧನ್ನಿ, ಕೆಪಿಆರ್‌ಎಸ್‌ನ ಸಾಯಬಣ್ಣಾ ಗುಡುಬಾ, ಜನವಾದಿ ಮಹಿಳಾ ಸಂಘಟನೆಯ ಜಗದೇವಿ ನೂಲಕರ್‌, ಕೃಷಿ ಕೂಲಿ ಕಾರ್ಮಿಕರ ಸಂಘದ ಜಗದೇವಿ ಚಂದನಕೇರಾ ಇವರನ್ನೊಳಗೊಂಡ ನಿಯೋಗ ವಾಡಿ ಪಟ್ಟಣದಲ್ಲಿ ಅವಮರ್ಯಾದಾ ಹತ್ಯೆಗೆ ಬಲಿಯಾದ ಯುವಕ ವಿಜೇಂದ್ರನ ತಾಯಿಯನ್ನು ಭೇಟಿ ಮಾಡಿ ಸಂತೈಸಿದ ಸಂದರ್ಭದಲ್ಲಿ ಈ ಆತಂಕಕಾರಿ ವಿಚಾರ ಚರ್ಚೆಗೆ ಬಂದಿದೆ.

ಯುವಕನ ತಾಯಿಗೂ ಬೆದರಿಕೆ:

ಅನೇಕ ಬಾರಿ ತಮ್ಮ ಹುಡುಗಿಯೊಂದಿಗಿನ ಸ್ನೇಹ ಬಿಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರೆಂಬ ವಿಚಾರವು ಆತಂಕಕಾರಿ ಸಂಗತಿ, ಸ್ನೇಹ ಬಿಡಿಸು ಇಲ್ಲದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಮೃತ ವಿಜಯನ ತಾಯಿಗೂ ಹೆದರಿಸಿದ್ದರಂತೆ. ಒಮ್ಮೆ ಕೊಲೆ ಪ್ರಯತ್ನವೂ ನಡೆದು ಕೂದಲೆಳೆ ಅಂತರದಲ್ಲಿ ಉಳಿದುಕೊಂಡಿದ್ದನ್ನು ಅವನ ಸ್ನೇಹಿತರು ನಿಯೋಗದ ಮುಂದೆ ಹೇಳಿದ್ದಾರೆ. ಇವೆಲ್ಲವೂ ವಾಡಿಯಲ್ಲಿ ಪರಿಸ್ಥಿತಿ ಹೇಗೆ ಬಿಗಡಾಯಿಸಿದೆ ಎಂಬುದಕ್ಕೆ ಕನ್ನಡಿ ಎಂದಿದ್ದಾರೆ.

ಮಹಿಳೆಗೆ ಕೊಲೆ ಬೆದರಿಕೆ: ಕೊಟ್ಟೂರು ಸ್ವಾಮಿ ಮೇಲೆ ದೂರು ದಾಖಲು

ಕಿತ್ತು ತಿನ್ನುವ ಬಡತನದ ಕಾರಣದಿಂದ ಎರಡು ಹೆಣ್ಣು ಮಕ್ಕಳನ್ನು ಗುಜರಾತಿನಲ್ಲಿರುವವರಿಗೆ ಮದುವೆ ಮಾಡಿಕೊಡಲಾಗಿದೆ. ಬಾಡಿಗೆ ಮನೆಯಲ್ಲಿ ಮಗನೊಂದಿಗೆ ವಾಸವಿದ್ದ ತಾಯಿಯು ಈಗ ಇದ್ದೊಬ್ಬ ಮಗನನ್ನು ಕಳೆದುಕೊಂಡು ಅನಾಥಳಾಗಿದ್ದಾಳೆ. ಜನತೆಯ ಘನತೆಯಿಂದ ಬದುಕುವ ಸಾಂವಿಧಾನಿಕ ಹಕ್ಕನ್ನು ಮೊಟಕು ಮಾಡುವಂತಹ ಮತಾಂತರ ನಿಷೇಧ ಕಾಯ್ದೆಯನ್ನು ಸುಗ್ರಿವಾಜ್ಞೆಯ ಮೂಲಕ ತರುವುದುನ್ನು ಸರ್ಕಾರ ಕೈಬಿಟ್ಟು ಅವಮರ್ಯಾದಾ ಹತ್ಯೆ ತಡೆಗಾಗಿ ಕಾಯ್ದೆ ರೂಪಿಸಬೇಕೆಂದು ಸಿಪಿಐ ಎ ಹಾಗೂ ಇತರೆ ಸಮೀತಿಗಳು ಸರ್ಕಾರವನ್ನು ಆಗ್ರಹಿಸಿವೆ.

ಹತ್ಯೆಗೈದವರನ್ನು ಶಿಕ್ಷಿಸಲೇಬೇಕು:

ಹತ್ಯೆಗೈದವರ ಪೈಕಿ ಇಬ್ಬರನ್ನು ಮಾತ್ರ ಬಂಧಿಸಲಾಗಿದೆ. ಉಳಿದವರನ್ನು ಕೂಡಲೇ ಬಂಧಿಸಬೇಕು. ಆಡಳಿತವು ಯಾವುದೇ ರಾಜಕೀಯ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ಒಂಟಿ ಮಹಿಳೆಯಾದ ತಾಯಿಗೆ ಸರಕಾರವು ಸರಕಾರಿ ಉದ್ಯೋಗ ಒದಗಿಸಿ ವಾಸಕ್ಕೆ ಕೂಡಲೆ ವಸತಿ ಸೌಲಭ್ಯ ಕಲ್ಪಿಸಬೇಕು. ಅವಮರ್ಯಾದಾ ಹತ್ಯೆ ತಡೆಗಾಗಿ ಕಾಯ್ದೆ ರೂಪಿಸಬೇಕೆಂದು ನಿಯೋಗ ಆಗ್ರಹಿಸಿದೆ.
 

click me!