ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ; ಇಬ್ಬರು ಆರೋಪಿಗಳು ಪೊಲೀಸರ ವಶಕ್ಕೆ

By Ravi Janekal  |  First Published Feb 25, 2023, 11:21 AM IST

ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿನ್ನೆ ಶುಕ್ರವಾರ ಮಧ್ಯಾಹ್ನ ವೇಳೆ ದುಷ್ಕರ್ಮಿಗಳು ಒಂದೇ ಕುಟುಂಬದ ನಾಲ್ವರನ್ನು ಮಾರಕಾಯುಧದಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. 


ಭಟ್ಕಳ (ಫೆ.25) : ತಾಲೂಕಿನ ಹಾಡವಳ್ಳಿಯಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಿನ್ನೆ ಶುಕ್ರವಾರ ಮಧ್ಯಾಹ್ನ ವೇಳೆ ದುಷ್ಕರ್ಮಿಗಳು ಒಂದೇ ಕುಟುಂಬದ ನಾಲ್ವರನ್ನು ಮಾರಕಾಯುಧದಿಂದ ಬರ್ಬರವಾಗಿ ಕೊಚ್ಚಿ ಕೊಲೆಗೈದಿದ್ದರು. ಶಂಭು ಹೆಗಡೆ (65), ಪತ್ನಿ ಮಾದೇವಿ ಹೆಗಡೆ ( 58), ಮಗ ರಾಘವೇಂದ್ರ ಹೆಗಡೆ (40) ಹಾಗೂ ಪತ್ನಿ ಕುಸುಮಾ ಭಟ್ (32) ಬರ್ಬರವಾಗಿ ಹತ್ಯೆಯಾದ ದುರ್ದೈವಿಗಳು.

Tap to resize

Latest Videos

ಉತ್ತರಕನ್ನಡ: ಆಸ್ತಿಗಾಗಿ ಭಟ್ಕಳದಲ್ಲಿ ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ

ಮೃತರ ಪುತ್ರಿ ಜಯಾ ಅಡಿಗ (Jaya adiga) ನೀಡಿರುವ ದೂರಿನ ಹಿನ್ನೆಲೆ ಶ್ರೀಧರ್ ಭಟ್(Sridhar bhat), ವಿದ್ಯಾ ಭಟ್(Vidya bhat) ಅವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು. ನಾಲ್ವರ ಕೊಲೆಗೆ ಕುಮ್ಮಕ್ಕು ನೀಡಿರುವುದು ವಿದ್ಯಾ ಭಟ್ ಎನ್ನಲಾಗಿದೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ವಿನಯ ಭಟ್‌ ನಿಗಾಗಿ ಶೋಧಕಾರ್ಯ ಮುಂದುವರಿಸಿರುವ ಪೊಲೀಸರು. ಘಟನೆ ಸಂಬಂಧಿಸಿ ಮತ್ತಷ್ಟು ತನಿಖೆ ನಡೆಸುತ್ತಿರುವ ಪೊಲೀಸರು

ಆಸ್ತಿ ವಿಚಾರವಾಗಿ ಕೊಲೆ ಶಂಕೆ: 

ಆಸ್ತಿ ವಿಚಾರಕ್ಕೆ ಸಂಬಂಧಿಸಿದ ದ್ವೇಷವೇ ಕೊಲೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ.

ಗಂಡ ಸತ್ತು ಕೇವಲ 3 ರಿಂದ 4 ತಿಂಗಳು ಗತಿಸಿತ್ತು, ಅಷ್ಟರಲ್ಲಿ ಜೀವನಾಂಶ ವಿಚಾರಕ್ಕೆ ನಡೆದಿದ್ದ ಗಲಾಟೆ. 1 ಎಕರೆ 9 ಗುಂಟೆ ಜಮೀನನ್ನು ಜೀವನಾಂಶವಾಗಿ ನೀಡಿದ್ದ ಗಂಡನ ಕುಟುಂಬದವರು. ಆದರೂ ಆಸ್ತಿ ಹಂಚಿಕೆ ಸಾಕಾಗಿಲ್ಲ ಹೆಚ್ಚಿನ ಪಾಲು ಬೇಕು ಎಂದು ಜಗಳ ಮಾಡುತ್ತಿದ್ದ ವಿದ್ಯಾ ಭಟ್ ಕುಟುಂಬ.  6 ಎಕರೆ ಜಮೀನನ್ನು ಭಾಗ ಮಾಡುವಲ್ಲಿ ಉಂಟಾಗಿದ್ದ ಕಲಹ ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಅಂತ್ಯವಾಗಿದೆ.

ಶಂಭು ಹೆಗಡೆ ಅವರು ತಮ್ಮ ಇಬ್ಬರು ಹೆಣ್ಣು ಮಕ್ಕಳಿಗೂ ಸಮಾನಾಗಿ  ಆಸ್ತಿ ಹಂಚಿದ್ದರು. ತನ್ನ ಹೆಣ್ಣು ಮಕ್ಕಳಿಗೆ ಆಸ್ತಿ ನೀಡಿರುವ ವಿಚಾರದಲ್ಲಿ ಪದೇ ಪದೇ ಕಾಲ್ಕೆರೆಯುತ್ತಿದ್ದ ಆರೋಪಿಗಳು. ನಿನ್ನೆ ಆರೋಪಿಗಳಾದ ಶ್ರೀಧರ್ ಭಟ್ ಹಾಗೂ ವಿನಯ್ ಭಟ್ ಜತೆ ಮೃತರ ಕುಟುಂಬ ಜಗಳವಾಡಿತ್ತು ಇದೇ ಜಗಳ ಶಂಭು ಹೆಗಡೆ ಕುಟುಂಬದ ಭೀಕರ ಕೊಲೆಗೆ ಕಾರಣವಾಗಿತ್ತು

ಬದುಕುಳಿದ ಮಕ್ಕಳು:

ಕೊಲೆ ಸಂದರ್ಭದಲ್ಲಿ ರಾಜೀವ ಭಟ್ಟರ ಮಗಳು ಶಾಲೆಗೆ ಹೋಗಿ ಪಕ್ಕದ ಮನೆಯಲ್ಲಿ ಬಂದು ಇದ್ದುದರಿಂದ ಮತ್ತು ಅವರ ಪುಟ್ಟಮಗ ಮನೆಯಲ್ಲೇ ಮಲಗಿ ನಿದ್ದೆ ಮಾಡುತ್ತಿದ್ದರಿಂದ ಇಬ್ಬರೂ ಬದುಕುಳಿದಿದ್ದಾರೆ.

Social Justice : ಕಣ್ಣ ಮುಂದೆಯೇ ಪತಿಯ ಸಾವು.. ನ್ಯಾಯಕ್ಕಾಗಿ ಮುಂದುವರೆದ ಹೋರಾಟ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ತಂಡ ರಚಿಸಿ ತನಿಖೆ ನಡೆಸಲಾಗ್ತಿದೆ.  ಪೊಲೀಸರು ಸ್ಥಳಕ್ಕೆ ಮಾಹಿತಿ ಪಡೆಯುತ್ತಿದ್ದಾರೆ. ಶುಕ್ರವಾರ ಮಧ್ಯಾಹ್ನ ಶಂಭು ಭಟ್ಟರ ಮನೆಗೆ ಬಂದಿರುವುದನ್ನು ಯಾರಾದರೂ ನೋಡಿದ್ದಾರೋ ಎನ್ನುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪರಿಶೀಲಿಸುತ್ತಿದ್ದಾರೆ.

click me!