ಹೆಂಡತಿ ಸುತ್ತಿಗೆ ಪೆಟ್ಟಿಗೆ ಸತ್ತು ಮಲಗಿದ ಕುಡುಕ ಗಂಡ!

By Suvarna News  |  First Published Sep 9, 2020, 4:31 PM IST

ಕುಡುಕ ಗಂಡನ ಕೊಲೆ ಮಾಡಿದ ಹೆಂಡತಿ/ ಸುತ್ತಿಗೆಯಿಂದ ಹೊಡೆದು ಗಂಡನ ಹತ್ಯೆ/ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಗಂಡ/ ಮನೆಯಲ್ಲೇ ಹೆಣವಾಗಿ ಬಿದ್ದ


ಮುಂಬೈ(ಸೆ. 09)  ಕಾನೂನನ್ನು ಕೈಗೆ ತೆಗೆದುಕೊಂಡ ಮಹಿಳೆ ಕುಡುಕ ಗಂಡನ ಹತ್ಯೆ ಮಾಡಿದ್ದಾಳೆ.  ಹೆಂಡತಿ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ ಗಂಡ ಕೊಲೆಯಾಗಿ ಹೋಗಿದ್ದಾನೆ.

ಸುತ್ತಿಗೆಯಿಂದ ಗಂಡನಿಗೆ ಹೊಡೆದು ಮಹಿಳೆ ವೈಶಾಲಿ ಭಕರೆ ಹತ್ಯೆ ಮಾಡಿದ್ದಾಳೆ. ವೈಶಾಲಿ ದಾದರ್ ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.  ಭರತ್ ನಗರ್ ಏರಿಯಾದ ಶಾಂತಿ ಸ್ಮೃತಿ ಬಿಲ್ಡಿಂಗ್ ಮೊದಲನೆ ಮಹಡಿಯಲ್ಲಿ ಮಕ್ಕಳೊಂದಿಗೆ ಕುಟುಂಬ ವಾಸವಿತ್ತು.

Tap to resize

Latest Videos

ದಿನಾ ಕುಡಿದು ಬರುತ್ತಿದ್ದ   ಗಂಡ ಅಶೋಕ್ ತನ್ನ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಇದರೊಂದ ನೊಂದ ಯಾಯಿ ಎರಡನೇ ಮಹಡಿಯಲ್ಲಿ ಪ್ರತ್ಯೇಕವಾಗಿ ವಾಸ ಮಾಡಲು ಆರಂಭಿಸಿದ್ದರು. 

ಗೇ ಆಪ್ ನೋಡಿ ಜಾಗಕ್ಕೆ ಹೋದವನ ಕತೆ ಏನಾಯಿತು?

ಇದಾದ ಮೇಲೆ ಹೆಂಡತಿ ವಾಸವಿದ್ದ ಜಾಗಕ್ಕೆ ಮದ್ಯ ಸೇವಿಸಿ ಪದೇ ಪದೇ ಹೋಗುತ್ತಿದ್ದ ಗಂಡ ಪ್ರತಿದಿನ ಗಲಾಟೆ ಮಾಡುತ್ತಿದ್ದ.  ಸೋಮವಾರ ಮಧ್ಯ ರಾತ್ರಿ 1.30  ರ ಸುಮಾರಿಗೆ ಹೆಂಡತಿಯ ಮನೆಗೆ ಹೋಗಿ ಗಲಾಟೆ ಮಾಡಲು ಆರಂಭಿಸಿದ್ದಾನೆ. ಬಾಗಿಲನ್ನು ಜೋರಾಗಿ ಬಡಿಯಲು ಶುರು ಹಚ್ಚಿಕೊಂಡಿದದ್ದಾನೆ. 

ಮದ್ಯದ ನಶೆಯಲ್ಲಿ ಬಾಗಿಲು ಒಡೆದು ಮನೆ ಪ್ರವೇಶ ಮಾಡಿದ ಗಂಡ ಹೆಂಡತಿ ಮೇಲೆ  ಎಗರಾಡಲು ಆರಂಭಿಸಿದ್ದಾನೆ.  ಮಕ್ಕಳು ಸಂಬಂಧಿಕರ ಮನೆಗೆ ಹೋಗಿದ್ದರು. ಹೆಂಡತಿ ಮೇಲೆ ರೇಗಾಡಿ ತನ್ನ ಮನೆಗೆ ವಾಪಸ್ ಆಗಿದ್ದಾನೆ.

ಆದರೆ ಕಠಿಣ ತೀರ್ಮಾನ ಒಂದನ್ನು ಮಾಡಿದ್ದ ಮಹಿಳೆ ಬೆಳಗ್ಗೆ ಗಂಡನ ಮನೆಗೆ ಬಂದು ಸುತ್ತಿಗೆಯಿಂದ ಆತನ ಮೇಲೆ ದಾಳಿ ಮಾಡಿದ್ದಾಳೆ. ಹೆಂಡತಿಯ ಏಟು ತಾಳಲಾರದೆ ಕುಡುಕ ಗಂಡ ಸತ್ತು ಬಿದ್ದಿದ್ದಾನೆ. ಮಹಿಳೆಯೇ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ಶರಣಾಗಿದ್ದಾರೆ.

click me!